Join The Telegram | Join The WhatsApp |
ಹುಷಾರ್ ಎಂಬ ಹಾರರ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ರಚನಾ ಎಂಬ ಮಲೆನಾಡ ಬೆಡಗಿ ಮಿಂಚಲಿದ್ದಾರೆ,
ಹೌದು ಕನ್ನಡ ಚಿತ್ರರಂಗ ಸಾಂಡಲ್ ವುಡ್ ಏನಂತೀವಿ ಇಲ್ಲಿ ಕನ್ನಡದ ಹೆಣ್ಮಕ್ಕಳೇ ನಾಯಕಿಯಾಗಿ ಬೆಳಿಬೇಕು ,ಉಳಿಬೇಕು,ನಕ್ಷತ್ರದಂತೆ ಮಿನುಗಬೇಕು…
ನಾಡಿದ್ದು ಅಂದ್ರೆ ಜನವರಿ 20 ರಂದು *ಹುಷಾರ್* ಎಂಬ ಹಾರರ್ ಸಸ್ಪೆನ್ಸ್ ಸಿನಿಮಾ ತೆರಗಪ್ಪಳಿಸಲಿದೆ, ಇದೊಂದು ಕಾದಂಬರಿ ಆಧಾರಿತ ಚಿತ್ರವಾಗಿದ್ದು ಸತೀಶ್ ರಾಜ್ ಇದನ್ನು ನಿರ್ಮಿಸಿ, ನಿರ್ದೇಶಿಸಿರುತ್ತಾರೆ, ಈ ಸಿನಿಮಾದಲ್ಲಿ ಸಿದ್ದೇಶ್ ಹಿರೋ ಆಗಿಯು ಮಲೆನಾಡಿನ ಬೆಡಗಿ ರಚನಾ ಮಲ್ನಾಡ್ ಅವರು ನಾಯಕ ನಟಿಯಾಗಿ ನಟಿಸಿದ್ದಾರೆ.ಈ ಚಿತ್ರದ ವಿಶೇಷವೆಂದರೆ, ಸೂಪರ್ ಸ್ಟಾರ್ ಉಪೇಂದ್ರ ಮತ್ತು ರೆಮೋ ಕೂಡ ಈ ಚಿತ್ರಕ್ಕಾಗಿ ಹಾಡಿದ್ದಾರೆ.
ತುಂಬಾ ಪ್ರತಿಭಾನ್ವಿತ ನಟಿಯಾದ ರಚನಾ ಮಲ್ನಾಡ್ ನವರು ಹಾರರ್ ಪಾತ್ರದಲ್ಲಿ ನಟಿಸಿದ್ದು ಅವರ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ತರಹದ ಸಿನಿಮಾ ನಂಗೆ ತುಂಬಾ ಖುಷಿಕೊಟ್ಟಿದೆ, ಚಿತ್ರ ಅದ್ಭುತವಾಗಿ ಮೂಡಿಬಂದಿದೆ ನಾನು ಸಾಕಷ್ಟು ತಯಾರಿ ಮಾಡಿ ಈ ಪಾತ್ರವನ್ನು ಮಾಡಿದ್ದೇನೆ, ನಂಗೆ ಈ ಪಾತ್ರ ತುಂಬಾ ಖುಷಿಕೊಟ್ಟಿದೆ, ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ,ನಾನು ಇನ್ನಷ್ಟು ಸಿನಿಮಾಗಳನ್ನು ಮಾಡುತ್ತೇನೆ ,ಸಿನಿಮಾವೇ ನನ್ನ ಜೀವಾಳ ಎಂದು ರಚನಾ ಮಲ್ನಾಡ್ ನವರು ತುಂಬಾ ಖುಷಿಯಿಂದ ಮುದ್ದು ಮುದ್ದಾಗಿ ಮಾತಾಡಿದ್ದಾರೆ.
ಇಂತಹ ಪ್ರತಿಬೆಯುಳ್ಳ ಯುವನಟಿಯನ್ನು ಚಿತ್ರರಂಗದಲ್ಲಿ ಬೆಳೆಸಬೇಕು, ಪರಬಾಷಾ ನಟಿಯರಿಗಿಂತ ಪಟಪಟನೆ ಕನ್ನಡ ಮಾತನಾಡುವ ಮಲೆನಾಡ ಹುಡುಗಿ ಇನ್ನಷ್ಟು ಮಿಂಚಬೇಕು.
ಬನ್ನಿ ಸಿನಿಪ್ರಿಯರೇ ಎಲ್ಲಾ ಸೇರಿ ಈ ಚಿತ್ರವನ್ನು ಥಿಯಟರ್ ನಲ್ಲೆ ನೋಡಿ ನಮ್ಮವರನ್ನು ಬೆಳೆಸೋಣ.
Join The Telegram | Join The WhatsApp |