ಮುಂಬೈ : ಮಹಾರಾಷ್ಟ್ರ ಸಿಎಂ ವಿಚಾರವಾಗಿ ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆ, ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ ಭಾನುವಾರ, “ನಾನು ಸಾಮಾನ್ಯ ಮನುಷ್ಯನಾಗಿ ಕೆಲಸ ಮಾಡಿದ್ದರಿಂದ, ನಾನು ಮುಖ್ಯಮಂತ್ರಿಯಾಗಬೇಕು ಎಂದು ಜನರು ಭಾವಿಸುತ್ತಿದ್ದಾರೆ” ಎಂದು ಹೇಳಿದ್ದಾರೆ. ಶಾಸಕರು ತಮ್ಮ ಹೊಸ ನಾಯಕನನ್ನು ಆಯ್ಕೆ ಮಾಡುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಮುನ್ನ ಹೇಳಿಕೆ. ಎನ್‌ಡಿಎ ನಾಯಕರ ನಿರ್ಧಾರವನ್ನು ಬೆಂಬಲಿಸುವುದಾಗಿ ಶಿಂಧೆ ಪುನರುಚ್ಚರಿಸಿದರು.