ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸಾಮಾಜಿಕ ಕಾರ್ಯಕರ್ತೆ ಮತ್ತು ಪತ್ರಕರ್ತೆ ಯಾನಾ ಮೀರ್ ಅವರಿಗೆ ಬ್ರಿಟನ್ನಿನ ಸಂಸತ್ತಿನಲ್ಲಿ ಡೈವರ್ಸಿಟಿ ಅಂಬಾಸಿಡರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಮ್ಮು ಮತ್ತು ಕಾಶ್ಮೀರದ ವಿರುದ್ಧದ “ಅಪ್ರಚಾರ”ದ ಬಗ್ಗೆ ಯಾನಾ ಮೀರ್ ಅವರು ಅಲ್ಲಿ ಮಾಡಿದ ಭಾಷಣವು ಈ ಎಲ್ಲೆಡೆ ವೈರಲ್ ಆಗುತ್ತಿದೆ, ಅಲ್ಲಿ ಅವರು, ಲಂಡನ್ನಲ್ಲಿನ ಬ್ರಿಟನ್ ಸಂಸತ್ನಲ್ಲಿ ನೀಡಿದ ಹೇಳಿಕೆ ಸಂಚಲನ ಮೂಡಿಸಿದೆ. ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಕಳಂಕ ಉಂಟುಮಾಡಲು ಪಾಕಿಸ್ತಾನ ಪ್ರಚಾರ ಆಂದೋಲನ ನಡೆಸುತ್ತಿದೆ ಎಂದು ಆರೋಪಿಸಿರುವ ಅವರು, ತಾನು ಬ್ರಿಟನ್ನಿನಲ್ಲಿ ಆಶ್ರಯ ಪಡೆದಿರುವ ಪಾಕಿಸ್ತಾನದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ “ಮಲಾಲಾ ಯೂಸುಫ್ಜಾಯ್ ಅಲ್ಲ ಹಾಗೂ ಕಾಶ್ಮೀರದಲ್ಲಿ ಅಂತಹ ಪರಿಸ್ಥಿತಿ ಇಲ್ಲ, ನಾನು ಸುರಕ್ಷಿತವಾಗಿದ್ದೇನೆ ಹಾಗೂ ಸ್ವತಂತ್ರವಾಗಿದ್ದೇನೆ” ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಸ್ಟಡಿ ಸೆಂಟರ್, ಯುಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯಾನಾ ಮೀರ್, “ನಾನು ಮಲಾಲಾ ಯೂಸುಫ್ಜಾಯ್ ಅಲ್ಲ… ಏಕೆಂದರೆ ನಾನು ಭಾರತದ ಭಾಗವಾಗಿರುವ ನನ್ನ ತಾಯ್ನಾಡು ಕಾಶ್ಮೀರದಲ್ಲಿ ಸುರಕ್ಷಿತ ಮತ್ತು ಸ್ವತಂತ್ರವಾಗಿದ್ದೇನೆ. ನನ್ನ ತಾಯ್ನಾಡಿನಿಂದ ಓಡಿಹೋಗಿ ಮತ್ತು ನಿಮ್ಮ ದೇಶದಲ್ಲಿ (ಯುಕೆ) ಆಶ್ರಯ ಪಡೆಯುವುದಿಲ್ಲ. ನಾನು ಎಂದಿಗೂ ಮಲಾಲಾ ಯೂಸುಫ್ಜಾಯ್ ಆಗಲು ಸಾಧ್ಯವೂ ಇಲ್ಲ ಎಂದು ಹೇಳಿದ್ದಾರೆ.
ಕಾಶ್ಮೀರವನ್ನು “ದಮನಿತ ಪ್ರದೇಶ” ಎಂದು ಕರೆಯುವ ಮೂಲಕ ಭಾರತಕ್ಕೆ “ಮಾನಹಾನಿ” ಮಾಡಿದ ನೊಬೆಲ್ ಪ್ರಶಸ್ತಿ ಪುರಸ್ಕೃತ ಮಲಾಲಾ ಯೂಸುಫ್ಜಾಯ್ ಅವರನ್ನು ಟೀಕಿಸಿದ ಅವರು, “ನಾನು ಮಲಾಲಾ ಯೂಸುಫ್ಝೈ ಅಲ್ಲ. ಏಕೆಂದರೆ ನಾನು ನನ್ನ ದೇಶವಾದ ಭಾರತದಲ್ಲಿ ಸ್ವತಂತ್ರ ಮತ್ತು ಸುರಕ್ಷಿತವಾಗಿದ್ದೇನೆ. ನನ್ನ ತವರು ನೆಲವಾದ ಭಾರತದ ಭಾಗವಾಗಿರುವ ಕಾಶ್ಮೀರದಲ್ಲಿದ್ದೇನೆ. ನಾನು ಓಡಿ ಬಂದು ನಿಮ್ಮ ದೇಶದಲ್ಲಿ ಆಶ್ರಯ ಕೋರುವ ಪರಿಸ್ಥಿತಿ ಅಲ್ಲಿ ಎಂದಿಗೂ ಇಲ್ಲ. ನಾನು ಎಂದಿಗೂ ಮಲಾಲಾ ಯೂಸುಫ್ಝೈ ಆಗಲಾರೆ ಎಂದು ಹೇಳಿದರು. ಆದರೆ ನನ್ನ ದೇಶ, ನನ್ನ ಪ್ರಗತಿಪರ ತಾಯ್ನಾಡನ್ನು ಹತ್ತಿಕ್ಕುವ ದೇಶ ಎಂದು ಕರೆಯುವ ಮೂಲಕ ಅಪಕೀರ್ತಿ ಹರಡುತ್ತಿರುವುದಕ್ಕೆ ಮಲಾಲಾಳನ್ನು ವಿರೋಧಿಸುತ್ತೇನೆ. ಮಾಧ್ಯಮ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮದ ಅಂತಹ ಎಲ್ಲಾ ಟೂಲ್ಕಿಟ್ ಸದಸ್ಯರಿಗೆ ನನ್ನ ಆಕ್ಷೇಪವಿದೆ ಹಾಗೂ ವಿರೋಧವಿದೆ. ಅವರು ಎಂದಿಗೂ ಭಾರತದ ಕಾಶ್ಮೀರವನ್ನು ಭೇಟಿ ಮಾಡುವ ಕಾಳಜಿ ಪ್ರದರ್ಶಿಸಲಿಲ್ಲ. ಆದರೆ ಅಲ್ಲಿ ಕುಳಿತೇ ದಬ್ಬಾಳಿಕೆಯ ಕಥೆಗಳನ್ನು ಹೆಣೆಯುತ್ತಿದ್ದಾರೆ” ಎಂದು ಬ್ರಿಟನ್ ಸಂಸತ್ನಲ್ಲಿ ಯಾನಾ ಟೀಕಾಪ್ರಹಾರ ನಡೆಸಿದರು. … ಧರ್ಮದ ಆಧಾರದಲ್ಲಿ ಭಾರತೀಯರನ್ನು ಒಡೆಯುವುದನ್ನು ನಿಲ್ಲಿಸಬೇಕೆಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ, ನಮ್ಮನ್ನು ಒಡೆಯಲು ನಾವು ನಿಮಗೆ ಅವಕಾಶ ನೀಡುವುದಿಲ್ಲ. ಜಮ್ಮು ಮತ್ತು ಕಾಶ್ಮೀರದ ಜನರ ನಡುವೆ ವಿಭಜನೆ ಉಂಟು ಮಾಡುವುದನ್ನು ಅಂತಾರಾಷ್ಟ್ರೀಯ ಸಮುದಾಯವು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
“ನಮ್ಮ ಹಿಂದೆ ಬರುವುದನ್ನು ನಿಲ್ಲಿಸಿ ಮತ್ತು ನನ್ನ ಕಾಶ್ಮೀರ ಸಮುದಾಯವನ್ನು ಶಾಂತಿಯಿಂದ ಬದುಕಲು ಬಿಡಿ” ಎಂದು ಅವರು ಹೇಳಿದರು.
ಬ್ರಿಟನ್ನಿನ ಸಂಸತ್ತಿನಲ್ಲಿ ಸಂಸದರಾದ ಬಾಬ್ ಬ್ಲ್ಯಾಕ್ಮನ್ ಮತ್ತು ವೀರೇಂದ್ರ ಶರ್ಮಾ ಅವರ ಸಮ್ಮುಖದಲ್ಲಿ ಯಾನಾ ಮೀರ್ ಯುಕೆ ಸಂಸದೆ ಥೆರೆಸಾ ವಿಲಿಯರ್ಸ್ ಅವರಿಂದ ಡೈವರ್ಸಿಟಿ ಅಂಬಾಸಿಡರ್ ಪ್ರಶಸ್ತಿಯನ್ನು ಸ್ವೀಕರಿಸಿದರು. ವೀರೇಂದ್ರ ಶರ್ಮಾ ಲಂಡನ್ ಬಳಿಯ ಈಲಿಂಗ್ ಸೌತ್ಹಾಲ್ನಿಂದ ವಿರೋಧ ಪಕ್ಷದ ಲೇಬರ್ ಸಂಸದರಾಗಿರುವ ಬ್ರಿಟನ್ನಿನ ಭಾರತೀಯ ಸಂಜಾತ ಸಂಸದರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಸ್ಟಡಿ ಸೆಂಟರ್ (JKSC), ಲಂಡನ್ನ ಸಂಸತ್ತಿನ ಹೌಸ್ ಆಫ್ ಕಾಮನ್ಸ್ನಲ್ಲಿ ‘ಭಾರತದ ಸಂಕಲ್ಪ ದಿವಸ’ವನ್ನು ಆಯೋಜಿಸಿದೆ. ಜಮ್ಮು ಮತ್ತು ಕಾಶ್ಮೀರ ಸ್ಟಡಿ ಸೆಂಟರ್ (JKSC), ಜಮ್ಮು ಮತ್ತು ಕಾಶ್ಮೀರ ಮತ್ತು ಅದರ ಸುತ್ತಲಿನ ಸಮಸ್ಯೆಗಳನ್ನು ಅಧ್ಯಯನ ಮಾಡಲು ಮೀಸಲಾಗಿರುವ ಚಿಂತಕರ ಚಾವಡಿಯಾಗಿದೆ.
ಭಯೋತ್ಪಾದನೆಯ ಕರಾಳ ಕಲೆಯಿಂದಾಗಿ ಸಾವಿರಾರು ಕಾಶ್ಮೀರಿ ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ.
ಈ ಸಂಕಲ್ಪ ದಿವಸದ ವರ್ಷದಂದು ಬ್ರಿಟನ್ ಮತ್ತು ಪಾಕಿಸ್ತಾನದಲ್ಲಿ ನೆಲೆಸಿರುವ ನಮ್ಮ ಸಂಚುಕೋರ ಅಪರಾಧಿಗಳು ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ಅಥವಾ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ವೇದಿಕೆಯಲ್ಲಿ ನನ್ನ ದೇಶವನ್ನು ಕೆಟ್ಟದಾಗಿ ಚಿತ್ರಿಸುವುದನ್ನು ನಿಲ್ಲಿಸುತ್ತಾರೆ ಎಂದು ನಾನು ಆಶಿಸುತ್ತೇನೆ. ನಿಮ್ಮ ಬ್ರಿಟನ್ ಲಿವಿಂಗ್ ರೂಂಗಳಲ್ಲಿ ಕುಳಿತು ವರದಿ ಮಾಡುವ ಮೂಲಕ ಭಾರತದ ಸಮಾಜವನ್ನು ಒಡೆಯುವ ಪ್ರಯತ್ನವನ್ನು ನಿಲ್ಲಿಸಿ. ಭಯೋತ್ಪಾದನೆ ಕಾರಣದಿಂದ ಸಾವಿರಾರು ಕಾಶ್ಮೀರಿ ತಾಯಂದಿರು ಈಗಾಗಲೇ ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ. ನಮ್ಮ ಮೇಲೆ ಮುಗಿಬೀಳುವುದನ್ನು ನಿಲ್ಲಿಸಿ. ನನ್ನ ಕಾಶ್ಮೀರ ಸಮುದಾಯವನ್ನು ಶಾಂತಿಯಿಂದ ಬದುಕಲು ಬಿಡಿ. ಧನ್ಯವಾದಗಳು, ಜೈ ಹಿಂದ್” ಎಂದು ಯಾನಾ ಮೀರ್ ತಮ್ಮ ತೀಕ್ಷ್ಣ ಭಾಷಣದಲ್ಲಿ ಹೇಳಿದರು.