ಕುಂದಾಪುರ :
ಕುಂದಾಪುರ ಜಿಲ್ಲಾ ಕೇಂದ್ರವಾಗಿ ಮಾಡುವಾಗ ಯಾವ ಯಾವ ಭಾಗವನ್ನು ಸೇರಿಸಿಕೊಳ್ಳುವುದು ಸೂಕ್ತ, ಪ್ರತಿ 40 ಕಿಲೋ ಮೀಟರ್ ಗೆ ಒಂದು ಜಿಲ್ಲಾ ಕೇಂದ್ರ ಸ್ಥಾಪನೆ ಆದಲ್ಲಿ, ಜನರ ದೈನಂದಿಕ ಸರ್ಕಾರಿ ಕಚೇರಿ ಅಲದಾಟಕ್ಕೆ ಅನುಕೂಲಕರ.
ಜೊತೆಗೆ ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮದ ಸೃಷ್ಟಿ, ಗ್ರಾಮೀಣ ಭಾಗದ ಜನರಿಗೆ , ತಕ್ಷಣವೇ ಜಿಲ್ಲಾಧಿಕಾರಿ ಕಚೇರಿ ಸನಿಹದಲ್ಲಿ ದೊರೆತಂತಾಗುತ್ತದೆ, ಕರ್ನಾಟಕ ರಾಜ್ಯದಲ್ಲಿ ಈಗಾಗಲೇ 32 ಜಿಲ್ಲೆ ಘೋಷಣೆಯಾಗಿವೆ, ಇನ್ನೂ 9 ಜಿಲ್ಲೆಗಳ ಬೇಡಿಕೆಗಳು ಎದ್ದು ಕಾಣುತ್ತಿದೆ, ಬೆಳಗಾವಿಯನ್ನು ಪ್ರತ್ಯಕ್ಷ ಮೂರು ಜಿಲ್ಲೆ ಬೇಡಿಕೆ, ಗೋಕಾಕ, ಚಿಕ್ಕೋಡಿ, ಅಥಣಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ, ಮಧುಗಿರಿ , ಶಿಕಾರಿಪುರ, ಹುಣಸೂರು, ಸಿಂಧನೂರು, ಇವೆಲ್ಲವು ಇತ್ತಿಚಿನ ದಿನಗಳ ಬೇಡಿಕೆ ಇದೆ.
ಆದರೆ, ಕುಂದಾಪುರ,1997 ಕ್ಕಿಂತ ಮೊದಲೇ ಆಗಬೇಕಿತ್ತು. ದೂರದೃಷ್ಟಿಯ ಕೊರತೆಯಿಂದ,
ಹಾಗೆ ಉಳಿದುಬಿಟ್ಟಿತು. ಕುಂದಾಪುರ ಜಿಲ್ಲಾ ಕೇಂದ್ರ, ಸಾಯಕ ಕಮಿಷನರ್ ಕಚೇರಿ ಕುಂದಾಪುರದಲ್ಲಿ ಬ್ರಿಟಿಷರ ಕಾಲದಲ್ಲೇ ಇತ್ತು, ಈಗಲೂ ಬೆಳೆಯುತ್ತಿರುವ ಕುಂದಾಪುರಕ್ಕೆ, ಜಿಲ್ಲಾ ಕೇಂದ್ರವಾಗಿ ನಿಲ್ಲಲು ಎಲ್ಲ ಅರ್ಹತೆಯೂ ಇದೆ, ಉಡುಪಿಗಿಂತ ಮೊದಲೇ ಕುಂದಾಪುರದಲ್ಲಿ ಕೆಎಸ್ಆರ್ಟಿಸಿ ಬಸ್ ಡಿಪೋ ನಿರ್ಮಾಣವಾಗಿತ್ತು. 1983 ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಅವಧಿಯಲ್ಲಿ ಪಿಜಿಆರ್ ಸಿಂಧ್ಯಾ ಅವರು ಸಾರಿಗೆ ಮಂತ್ರಿ ಆಗಿದ್ದರು, ಆಗ ನಿರ್ಮಾಣವಾಯಿತು. ಕುಂದಾಪುರದಲ್ಲಿ ಕೆಎಸ್ಆರ್ಟಿಸಿ ಡಿಪೋ, ಒಂದು ಕಾಲದಲ್ಲಿ ತುಂಬಾ ಆದಾಯ ತರುತ್ತಿದ್ದ ಸರ್ಕಾರಿ ಸಾರಿಗೆ ಸಂಸ್ಥೆ ಘಟಕ ಕುಂದಾಪುರವಾಗಿತು, ಈಗಲೂ ಕುಂದಾಪುರವನ್ನು ಜಿಲ್ಲಾ ಕೇಂದ್ರಕ್ಕೆ ಎಲ್ಲ ಅರ್ಹತೆಯು ಇದೆ, ಧಾರ್ಮಿಕ ಕ್ಷೇತ್ರದಲ್ಲಿ ಸಾಂಸ್ಕೃತಿಕ ಚಿತ್ರದಲ್ಲ ಕ್ರೀಡಾ ಕ್ಷೇತ್ರದಲ್ಲಿ, ಸಾಮಾಜಿಕ ಕ್ಷೇತ್ರದಲ್ಲಿ, ರಂಗಭೂಮಿಯಲ್ಲಿ, ಸಿನಿಮಾ ರಂಗದಲ್ಲಿ, ನಾಗಾರಾಧನೆ, ಭೂತಾರಾಧನೆ, ಯಕ್ಷಗಾನ, ಪಾಣರಾಟ, ಅಸಾಡಿಹಬ್ಬ, ಕೂಡಿ ಹಬ್ಬ ಕಂಬಳ, ಗೆಂಡಸೇವೆ, ಹೀಗೆ ಹತ್ತು ಹಲವು ಬಗೆಯ ಕರಾವಳಿಯ ಸಾಂಸ್ಕೃತಿಕ ಸೊಬಗನ್ನು ಸಾರುವ ಊರು ಅದು ಕುಂದಾಪುರ, ಇಂತಹ ರಮ್ಯಾ ನೋಟದ ದೇಶ ವಿದೇಶದ ಜನರ ಮೆಚ್ಚುಗೆ ಗಳಿಸಿರುವ ಪ್ರವಾಸೋದ್ಯಮಕ್ಕೂ ತನ್ನ ವೈಭವ ಬೆರವು ಮಾಡಿದ ಊರು, ಕುಂದಾಪುರ,
ಈಗ ಮುರುಡೇಶ್ವರದಿಂದ ಈಚಿಗೆ, ಮಾಬುಕಳು ಬ್ರಿಜ್ ತನಕ, ಈ ಕಡೆ ಸಂಪಿಕಟ್ಟ,ನಿಟ್ಟೂರಿನಿಂದ ಬೈಂದೂರು ತನಕ, ಸೋಮೇಶ್ವರ, ಶೇಡಿಮನೆ, ಮಡಾಮಕ್ಕಿ, ಆರ್ಡಿ, ಬೆಳ್ವೆ,ಗೋಳಿಯಂಗಡಿ ಈ ಭಾಗದ ಜನರೆಲ್ಲ, ಸೇರಿಸಿಕೊಂಡು ಕುಂದಾಪುರ ಜಿಲ್ಲಾ ಕೇಂದ್ರವಾಗಿ ಮಾಡಿದರೆ, ಎಲ್ಲರಿಗೂ ಅನುಕೂಲಕರವಾದ ವಾತಾವರಣ.
ಒಂದು ಕಡೆ ಭಟ್ಕಳ, ಶಿರಾಲಿ, ಮುರುಡೇಶ್ವರ ಈ ಭಾಗದ ಜನರಿಗೆ ಕಾರವಾರ ದೂರವಾದರೆ, ನಿಟ್ಟೂರು ಸಂಪೆಕಟೆ, ಮಾಸ್ತಿ ಕಟ್ಟಿ ಜನರಿಗೆ ಶಿವಮೊಗ್ಗ ದೂರವಾಡುತ್ತದೆ, ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು, ಸರ್ಕಾರ ಇದರ ಬಗ್ಗೆ ದೂರದಷ್ಟೇ ಹರಿಸಿದರೆ ವಾಸ್ತವ್ಯ ಸತ್ಯ ತೆಗೆಯುತ್ತದೆ, ಬ್ರಿಟಿಷರ ಕಾಲದಲ್ಲಿ ಮಾಬು ಕಳುವಿನ ಬ್ರಿಜ್ ಆಚೆಗೆ ಮದ್ರಾಸ್ ಕೋರ್ಟ್, ಈಚಿನವರಿಗೆ ಹೊನ್ನಾವರ ಕೋರ್ಟ್, ಇದನ್ನೆಲ್ಲ ಗಮನ ಹರಿಸಿ ಸಮತೋಲನ ಮಾಡಿದಾಗ, ಕುಂದಾಪುರವೇ ಸೂಕ್ತ ಜಿಲ್ಲಾ ಕೇಂದ್ರ ಎನ್ನುವುದು ಅರಿವಿಗೆ ಬರುತ್ತದೆ, ಬಸ್ರೂರು ಬಂದರು, ಕರಾವಳಿ ಭಾಗದ ಸರಕು ಸಾಗಾಟದ ಕೇಂದ್ರವಾಗಿತ್ತಂತೆ, ಅಕ್ಕಿ ಬೆಲ್ಲ ಇನ್ನಿತರ ಕೃಷಿ ಉತ್ಪನ್ನಗಳು ಬಸ್ರೂರಲ್ಲಿ ಹಡಗು ಮುಖಾಂತರ ರವಾನೆ ಆಗುತ್ತಿತ್ತು, ಅಷ್ಟೇ ಅಲ್ಲ ಕಾಸರಗೋಡು ಮತ್ತು ಕೆನರಾ, ಎರಡು ಮುಖ್ಯ ಜಿಲ್ಲಾ ಕೇಂದ್ರವಾಗಿತ್ತಂತೆ. ಮಂಗಳೂರನ್ನು ದಕ್ಷಿಣ ಕನ್ನಡ ಎಂದು, ಕೆನರಾವನ್ನು ಉತ್ತರ ಕನ್ನಡ ವೆಂದು, ಜಿಲ್ಲಾ ಕೇಂದ್ರ ಮಾಡುವಾಗ, ಕುಂದಾಪುರವನ್ನೆಜಿಲ್ಲಾ ಕೇಂದ್ರ ಮಾಡಬೇಕಿತ್ತು, ಬಜಪೆಯಲ್ಲಿ ಆಗಬೇಕಿದ್ದ ವಿಮಾನ ನಿಲ್ದಾಣ ಬೈಂದೂರು ಒತ್ತಿನೆಣೆಯಲ್ಲಿ ಆಗಬೇಕಿತ್ತು, ತೊಕ್ಕೊಟ್ಟಲ್ಲಿ ಆಗಬೇಕಾಗಿದ್ದ ಬಂದರು ಗಂಗೊಳ್ಳಿಯಲ್ಲಿ ಆಗಬೇಕಿತ್ತು, ಎಲ್ಲವೂ ಈಗ ಸಮಯ ಮೀರಿ ಹೋದ ಕಥೆ, ಆದರೆ ಅದನ್ನು ಈಗ ಯೋಚಿಸಿ ಫಲ ಇಲ್ಲ, ಈಗ ಏನಿದ್ದರೂ ಜನರ ಅನುಕೂಲಕ್ಕಾಗಿ, ಕಾರವಾರ ಜಿಲ್ಲಾ ಕೇಂದ್ರದ ಕೆಲವೇ ಭಾಗವನ್ನು, ಉಡುಪಿ ಜಿಲ್ಲಾ ಕೇಂದ್ರದ ಕೆಲವು ಭಾಗವನ್ನು, ಶಿವಮೊಗ್ಗ ಜಿಲ್ಲೆಯ ಕೆಲವೇ ಭಾಗವನ್ನು ಕುಂದಾಪುರಕ್ಕೆ ಸೀಮಿತವಾಗುವಂತೆ ತೆಗೆದುಕೊಂಡು ಭೌಗೋಳಿಕ ನಕ್ಷೆಯನ್ನು ಪರಿವರ್ತಿಸಿ, ಕುಂದಾಪುರವನ್ನು ಜಿಲ್ಲಾ ಕೇಂದ್ರ ಮಾಡಿದಲ್ಲಿ, ನಮ್ಮ 75 ವರ್ಷದ ಹಿಂದಿನ ಸ್ಥಾನಮಾನ ದೊರೆಕಿಂತಾಗುತ್ತದೆ,
ಬರೀ ವಿಶ್ವ ಕುಂದಾಪುರ ದಿನ ಆಚರಣೆ ಮಾಡಿದಾಗ ಕುಂದಾಪುರ ಭಾಗದಲ್ಲಿರುವ ಜನರ ಸಮಸ್ಯೆಗಳು ಬಗೆಹರಿಯುವುದಿಲ್ಲ, ನಾವು 50 ವರ್ಷದ ಹಿಂದೆಯೂ ಕೂಡ ಬೊಂಬೆ ಬೆಂಗಳೂರು ಭಾಗದಲ್ಲಿ ಹೋಗಿ ದುಡಿದು ಕೊಂಡು ಒಂದು ಇಲ್ಲಿ ಜೀವಿಸಬೇಕಿತ್ತು, ಈಗಲೂ ಅದೇ ಕಾರ್ಯ ನಡೆಯುತ್ತಿದೆ ನಮ್ಮಲ್ಲಿ ಈಗಲೂ ಉದ್ಯೋಗ ಸೃಷ್ಟಿ ಇಲ್ಲ ನಾವು ಬೇರೊಂದು ಊರಿಗೆ ಹೋಗಿ, ದುಡಿಯಲೆಬೇಕಾಗಿದೆ, ವಿದ್ಯಾರ್ಥಿಗಳು 400k,m ದೂರ ಹೋಗಿ ತಮ್ಮ ವಿದ್ಯಾಭ್ಯಾಸ ಮುಂದುವರಿಸುವ ಸ್ಥಿತಿ ಈಗಲೂ ಇದೆ, ರಾಜ್ಯದ ವಿವಿಧ ಕ್ಷೇತ್ರದ ಜನರನ್ನು ಮತ್ತು ಅಲ್ಲಿಯ ಜನಪ್ರತಿನಿಧಿಗಳನ್ನು ನಾವು ಗಮನಹರಿಸಿದರೆ, ಅವರಿಗೆ ಆ ಕ್ಷೇತ್ರದ ಬಗ್ಗೆ ಇರುವ ಕಾಳಜಿ ತುಂಬಾ ಸಂತೋಷ ತರುತ್ತದೆ, ಒಂದು ಹೋಬಳಿಯನ್ನು ತಾಲೂಕು ಮಾಡಲು ಪ್ರಯತ್ನಿಸುತ್ತಾರೆ, ಒಂದು ತಾಲೂಕನ್ನು ಹತ್ತಾರು ವರ್ಷದಲ್ಲಿ ಜಿಲ್ಲಾ ಕೇಂದ್ರವಾಗಿ ಮಾಡಲು ಪ್ರಯತ್ನಿಸುತ್ತಾರೆ, ನಮ್ಮಲ್ಲಿ ಅಂತಹ ಮನೋಭಾವಗಳು ಯಾರಲ್ಲೂ ಬರುವುದಿಲ್ಲ ಕಾರಣ ಏನು, ನಮ್ಮಲ್ಲಿ ಸಾಮಾನ್ಯ ಜನರು ಬೇಡಿಕೆಗಳನ್ನು ಹೊರ ಹಾಕುವುದಿಲ್ಲ,
ಕುಂದಾಪುರವನ್ನು ಜಿಲ್ಲಾ ಕೇಂದ್ರ ಮಾಡಿ, ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟರೆ, ದೇಶ ಕಲ್ಲ ಅಂತರಾಷ್ಟ್ರೀಯಕ್ಕೆ ಇದೊಂದು ಮಾದರಿ ಜಿಲ್ಲಾ ಕೇಂದ್ರವಾಗಬಹುದು, ಕುಂದಾಪುರ ಬಬು ಕುದುರು ಬಳಿ,28 ಎಕ್ರೆ ಜಾಗ ಇದೆ, ಹೊಳೆಯ ಮಧ್ಯದಲ್ಲಿ ಒಂದು ಜಿಲ್ಲಾ ಕೇಂದ್ರ ಸ್ಥಾಪನೆಯಾದರು, ಆ ಸೊಬಗನ್ನು ಯಾರಿಂದಲೂ ಊಹಿಸಲು ಸಾಧ್ಯವಾಗದಷ್ಟು ಮನರಂಜನೆ ನೀಡಬಹುದು,
*ಮುಂಬಾರು ದಿನಕರ ಶೆಟ್ಟಿ,
ಅಧ್ಯಕ್ಷರು, ಜಿಲ್ಲಾ ಹೋರಾಟ ಸಮಿತಿ, ಕುಂದಾಪುರ