ಶಿವಮೊಗ್ಗ: ನಗರದಲ್ಲಿ ಆಟೊಗಳಿಗೆ ಮೀಟರ್ ಹಾಕುವುದು ಕಡ್ಡಾಯ. ಚಾಲಕರು ಆಟೊ ಬಾಡಿಗೆ ಓಡಿಸುವಾಗ ಕಡ್ಡಾಯವಾಗಿ ಮೀಟರ್ ಹಾಕಬೇಕು ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಸೂಚನೆ ನೀಡಿದ್ದಾರೆ.
ನವೆಂಬರ್ 15ರಿಂದ ಡಿಸೆಂಬರ್ 15ರವರೆಗೆ ಒಂದು ತಿಂಗಳ ಕಾಲ ಆಟೊ ಮೀಟರ್ ಅಳವಡಿಕೆ ಡ್ರೈವ್ ಮಾಡಲಾಗಿತ್ತು. ಈ ವೇಳೆ 528 ಪ್ರಕರಣಗಳ ದಾಖಲಿಸಿ ₹2.40,180 ದಂಡ ವಸೂಲಿ ಮಾಡಲಾಗಿದೆ.
ಸಾರ್ವಜನಿಕರು ಆಟೊ ಬಾಡಿಗೆ ಪಡೆಯುವಾಗ ಮೀಟರ್ ಹಾಕಿದ್ದಾರೋ ಇಲ್ಲವೋ ಎಂಬುದನ್ನು ನೋಡಬೇಕು. ಮೀಟರ್ ಹಾಕದೇ ಇದ್ದರೆ 112ಗೆ ಕರೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ.