This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

National News

ಮಾದರಿ ಕಾರಾಗೃಹ ಕೈಪಿಡಿ ಅನುಷ್ಠಾನ 

Join The Telegram Join The WhatsApp

ನವದೆಹಲಿ-

ಕೇಂದ್ರ ಗೃಹ ವಹಾರಗಳ ಸಚಿವಾಲಯ (MHA) 2016 ರಲ್ಲಿ ಸಿದ್ಧಪಡಿಸಿದ ಮಾದರಿ ಕಾರಾಗೃಹ ಕೈಪಿಡಿ- 2016ನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (UTs) ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅಳವಡಿಸಿಕೊಳ್ಳಲು ಮತ್ತು ಕೈಪಿಡಿಯಲ್ಲಿರುವ ವಿಷಯಗಳನ್ನು ಅನುಷ್ಠಾನಕ್ಕೆ ತರಲು ರವಾನಿಸಲಾಗಿದೆ. ಇಲ್ಲಿಯವರೆಗೆ, 18 ರಾಜ್ಯಗಳು ಮತ್ತು ಎಲ್ಲಾ ಕೇಂದ್ರಾಡಳಿತ ಪ್ರದೇಶಗಳು ಮಾದರಿ ಕಾರಾಗೃಹ ಕೈಪಿಡಿ- 2016ನ್ನು ಅಳವಡಿಸುವುದಾಗಿ ದೃಢಪಡಿಸಿವೆ. ಗೃಹ ವ್ಯವಹಾರಗಳ ಸಚಿವಾಲಯ, ನಿಯಮಿತವಾಗಿ ಉಳಿದ ರಾಜ್ಯ ಸರ್ಕಾರಗಳೊಂದಿಗೆ ಉನ್ನತ ಮಟ್ಟದಲ್ಲಿ ಸಂವಹನಗಳನ್ನು ಕಳುಹಿಸುವ ಮೂಲಕ ಮತ್ತು ವೀಡಿಯೊ ಕಾನ್ಫರೆನ್ಸ್ ಸಭೆಗಳ ಮೂಲಕ ರಾಜ್ಯ ಪ್ರತಿನಿಧಿಗಳೊಂದಿಗೆ ತೊಡಗಿಸಿಕೊಳ್ಳುವ ಮೂಲಕ ವಿಷಯವನ್ನು ಅನುಸರಿಸುತ್ತಿದೆ.

ಗೃಹ ವ್ಯವಹಾರಗಳ ಸಚಿವಾಲಯ ‘ಕಾರಾಗೃಹಗಳ ಆಧುನೀಕರಣ’ ಯೋಜನೆಯನ್ನು 2021-22ನೇ ಹಣಕಾಸು ವರ್ಷದಿಂದ 2025-26ನೇ ಹಣಕಾಸು ವರ್ಷಕ್ಕೆ 950 ಕೋಟಿ ರೂಪಾಯಿಗಳ ಆರ್ಥಿಕ ವೆಚ್ಚದೊಂದಿಗೆ ಅನುಮೋದಿಸಿದೆ. ಜೈಲಿನ ಉಪಕರಣಗಳನ್ನು ಆಧುನೀಕರಿಸುವ ಮತ್ತು ದೇಶದ ಕಾರಾಗೃಹಗಳಲ್ಲಿ ಭದ್ರತಾ ಮೂಲಸೌಕರ್ಯಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಕಾರಾಗೃಹಗಳ ಆಧುನೀಕರಣ ಯೋಜನೆಯ ಮುಖ್ಯ ಉದ್ದೇಶಗಳು ಈ ಕೆಳಗಿನಂತಿವೆ:

(i) ತಾಂತ್ರಿಕ ಮಧ್ಯಸ್ಥಿಕೆಗಳು ಮತ್ತು ಹೆಚ್ಚಿನ ಭದ್ರತಾ ಮೂಲಸೌಕರ್ಯಗಳ ರಚನೆಯ ಮೂಲಕ ಕಾರಾಗೃಹಗಳಲ್ಲಿ ಭದ್ರತಾ ಮೂಲಸೌಕರ್ಯ ಮತ್ತು ಇತರ ವ್ಯವಸ್ಥಾಪನಾ ಸೌಲಭ್ಯಗಳನ್ನು ಹೆಚ್ಚಿಸುವುದು.

(ii) ಕೌಶಲ್ಯ, ಪುನರ್ವಸತಿ ಮತ್ತು ನಡವಳಿಕೆ ಬದಲಾವಣೆ ಇತ್ಯಾದಿ ಕಾರ್ಯಕ್ರಮಗಳು/ಉಪಕ್ರಮಗಳ ಮೂಲಕ ತಿದ್ದುಪಡಿ ಆಡಳಿತದ ಮೇಲೆ ಕೇಂದ್ರೀಕರಿಸುವುದು.

ಕಾರಾಗೃಹಗಳ ಆಧುನೀಕರಣ ಯೋಜನೆಯ ಅನುಷ್ಠಾನಕ್ಕೆ ವಿವರವಾದ ಮಾರ್ಗಸೂಚಿಗಳನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾಗಿದೆ. 2021-22 ರ ಹಣಕಾಸು ವರ್ಷದಲ್ಲಿ ಕಾರಾಗೃಹಗಳ ಆಧುನೀಕರಣ ಯೋಜನೆಯಡಿ ಕರ್ನಾಟಕಕ್ಕೆ 9 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ರಾಜ್ಯದಲ್ಲಿ ಅತಿ ಉನ್ನತ ಭದ್ರತೆಯ ಕಾರಾಗೃಹ ಸ್ಥಾಪನೆಗೆ 100 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ.

ನಿನ್ನೆ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿರುವ ಲಿಖಿತ ಉತ್ತರದಲ್ಲಿ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರು ಇದನ್ನು ತಿಳಿಸಿದ್ದಾರೆ.

 

 

 


Join The Telegram Join The WhatsApp
Admin
the authorAdmin

Leave a Reply