ಬೆಂಗಳೂರು: ಬಹು ನಿರೀಕ್ಷಿತ ಐಪಿಎಲ್ T ಟ್ವೆಂಟಿ ಕ್ರಿಕೆಟ್ ಟೂರ್ನಿಯ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿ ಮೂವರು ಆಟಗಾರರನ್ನು ತನ್ನ ಬಳಿಯೇ ಉಳಿಸಿಕೊಂಡಿದೆ. ವಿರಾಟ್ ಕೊಹ್ಲಿ ಅವರಿಗೆ 21 ಕೋಟಿ, ರಜತ್ ಪಾಟಿದಾರ ಅವರಿಗೆ 11 ಕೋಟಿ ಮತ್ತು ಯಶ್ ದಯಾಳ್ ಅವರಿಗೆ 5 ಕೋಟಿ ರೂಪಾಯಿಯನ್ನು ನಿಗದಿಪಡಿಸಿದೆ. ಈ ಮೂವರನ್ನು ಆರ್‌ಸಿಬಿ ತನ್ನ ಬಳಿಯೇ ಉಳಿಸಿಕೊಂಡಿದೆ. ಇನ್ನು ಉಳಿದಿರುವ ರೂ. 83 ಕೋಟಿಯಲ್ಲಿ ಆರ್‌ಸಿಬಿ ತನ್ನ ರಣತಂತ್ರ ರೂಪಿಸಬೇಕಿದೆ. ಕಳೆದ ಸಲ ಆರ್‌ಸಿಬಿ ಸಾರಥ್ಯವಹಿಸಿದ್ದ ದಕ್ಷಿಣ ಆಫ್ರಿಕದ ಫಾಫ್ ಡುಪ್ಲೆಸಿ ಮತ್ತು ವೇಗದ ಬೌಲರ್ ಮಹಮ್ಮದ್ ಸಿರಾಜ್ ಅವರನ್ನು ಹರಾಜಿಗೆ ಬಿಟ್ಟುಕೊಡಲು ಆರ್‌ಸಿಬಿ ನಿರ್ಧರಿಸಿದೆ.