ಬೆಳಗಾವಿ: ಖಾನಾಪುರ ಶಿವ ಸ್ಮಾರಕ ಸಭಾಗೃಹದಲ್ಲಿ ಆಗಸ್ಟ್ 16ರಂದು ಬೆಳಗ್ಗೆ 11 ಗಂಟೆಗೆ ಭೀಮಗಡ ವನ್ಯಧಾಮ ವ್ಯಾಪ್ತಿಯಲ್ಲಿ ಬರುವ ಹಲವು ಗ್ರಾಮಗಳ ಸ್ಥಳಾಂತರ ಕುರಿತು ಮಹತ್ವದ ಸಭೆ ಕರೆಯಲಾಗಿದೆ ಎಂದು ಶಾಸಕ ವಿಠ್ಠಲ ಹಲಗೇಕರ ತಿಳಿಸಿದರು.
ಪತ್ರಕರ್ತರ ಜೊತೆಗೆ ಮಾತನಾಡಿ, ಕಾಡಂಚಿನ ಗ್ರಾಮದ ಜನತೆಗೆ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ಸಭೆ ಕರೆಯಲಾಗಿದೆ. ಭೀಮಗಡ ವನ್ಯಧಾಮದ ಜನತೆಗೆ ಸಂಬಂಧಿಸಿದ ಅಲ್ಲಿ ವಾಸವಾಗಿರುವ ಜನರ ಸ್ಥಳಾಂತರಕ್ಕೆ ಒಪ್ಪಿಗೆ ನೀಡುವವರಿಗೆ ಸರಕಾರದಿಂದ ಹಲವು ಸೌಲಭ್ಯ ನೀಡುವ ಕುರಿತು ಚರ್ಚಿಸಲು ಈ ಸಭೆ ಕರೆಯಲಾಗಿದೆ. ಸಭೆಯಲ್ಲಿ ಮಾಜಿ ಶಾಸಕರು, ಜನಪ್ರತಿನಿಧಿಗಳು, ಪರಿಸರವಾದಿಗಳು, ಸಾಮಾಜಿಕ ಕಾರ್ಯಕರ್ತರು, ನಾಗರಿಕರು ಭಾಗವಹಿಸಿ ಅಗತ್ಯ ಸಲಹೆ- ಸೂಚನೆ ನೀಡುವಂತೆ ಅವರು ಮನವಿ ಮಾಡಿದ್ದಾರೆ.