ಹುಬ್ಬಳ್ಳಿ : 2024-25ನೇ ಸಾಲಿನ ಪರೀಕ್ಷೆಗಳು ಹೊಸ ಪಠ್ಯಕ್ರಮದನುಸಾರವಾಗಿ ಜರುಗಲಿರುವ ಮಾಹಿತಿಯನ್ನು No. KSLU/Exam/2024- 25/1673dated 06.12.2024 ಎಲ್ಲ ಸಂಯೋಜತ ಕಾನೂನು ಮಹಾವಿದ್ಯಾಲಯಗಳಿಗೆ ತಿಳಿಸಲಾಗಿತ್ತು. ಆದರೆ ಕೆಲವು ರಿಪೀಟರ್ (ಪುನರಾವರ್ತಿತ) ವಿದ್ಯಾರ್ಥಿಗಳು ಉಚ್ಚನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಉಚ್ಚ ನ್ಯಾಯಾಲಯವು ರಿಪೀಟರ್ ವಿದ್ಯಾರ್ಥಿಗಳಿಗೆ ಹಳೆಯ ಪಠ್ಯ ಕ್ರಮದನುಸಾರವಾಗಿ (ಭಾರತೀಯ ದಂಡ ಸಂಹಿತೆ) ಪರೀಕ್ಷೆ ಬರೆಯಲು ಆದೇಶಿಸಿರುತ್ತದೆ. ಈ ಪ್ರಕಾರವಾಗಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕುಲಪತಿಗಳ ಆದೇಶದ ಮೇರೆಗೆ ಹಳೆಯ ಪಠ್ಯ ಕ್ರಮದಲ್ಲಿರುವ ಮೂರು ವಿಷಯಗಳಾದ Criminal Law-I-IPC, Criminal-II-CrPC, Law of Evidence ವಿಷಯಗಳಲ್ಲಿಯೇ ಪರೀಕ್ಷೆ ಬರೆಯಲು ಅವಕಾಶವನ್ನು ಕಲ್ಪಿಸಲಾಗಿದೆ.

2025-26ನೇ ಸಾಲಿನ ಪರೀಕ್ಷೆಗೆ ಸಂಬಂಧಿಸಿದಂತೆ ರಿಪೀಟರ್ (ಪುನರಾವರ್ತಿತ) ವಿದ್ಯಾರ್ಥಿಗಳಿಗೂ ಕೂಡಾ ಹೊಸ ಪಠ್ಯ ಕ್ರಮದನುಸಾರವಾಗಿ ಪರೀಕ್ಷೆಗಳು ಜರುಗಲಿದ್ದು ಈ ಮೇಲಿನ ಮಾಹಿತಿಯನ್ನು ಸಂಯೋಜಿತ ಕಾನೂನು ಮಾಹಾವಿದ್ಯಾಲಯದ ಸಂಬಂಧಿಸಿದ ಎಲ್ಲ ವಿದ್ಯಾರ್ಥಿಗಳು ಪೂರ್ವ ತಯಾರಿ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಕುಲಸಚಿವರು ಮೌಲ್ಯಮಾಪನ (ಪ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.