Join The Telegram | Join The WhatsApp |
ನವದೆಹಲಿ-
15 ವರ್ಷ ಹಳೆಯ ಎಲ್ಲಾ ಸರ್ಕಾರಿ ಸ್ವಾಮ್ಯದ ವಾಹನಗಳನ್ನು ಗುಜರಿಗೆ ಹಾಕಲಾವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
‘ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳಿಗೂ ಈ ಬಗ್ಗೆ ಮಾಹಿತಿ ರವಾನಿಸಿದೆ. ಬಸ್‌ಗಳು, ಟ್ರಕ್‌ಗಳು ಮತ್ತು ಕಾರುಗಳು ಸೇರಿದಂತೆ ಎಲ್ಲಾ ರೀತಿಯ ಹಳೆಯ ವಾಹನಗಳನ್ನು ಗುಜರಿಗೆ ಹಾಕಲಾವುದು. ಪ್ರತಿದಿನ ರಸ್ತೆಗೆ ಇಳಿಯಲಿರುವ ಎಲ್ಲಾ ಹಳೆಯ ವಾಹನಗಳ ಸಂಚಾರವನ್ನು ಇನ್ಮುಂದೆ ಬಂದ್ ಮಾಡಲಾಗುವುದು. ಹೊಸ ವಾಹನಗಳಿಗೆ ಹೋಲಿಸಿದ್ರೆ ಈ ವಾಹನಗಳು ಶೇ.10-12ರಷ್ಟು ಹೆಚ್ಚು ವಾಯುಮಾಲಿನ್ಯವನ್ನುಂಟು ಮಾಡುತ್ತಿವೆ. ಇದೇ ಕಾರಣಕ್ಕೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಗಡ್ಕರಿ ಹೇಳಿದ್ದಾರೆ.
ನಾಗ್ಪುರದಲ್ಲಿ ‘ಅಗ್ರೋವಿಷನ್‌ನ 2022’ ಆವೃತ್ತಿ ಉದ್ಘಾಟಿಸಿ ಮಾತನಾಡಿದ ಗಡ್ಕರಿ, ‘ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ನಾನು 15 ವರ್ಷ ಹಳೆಯ ಎಲ್ಲಾ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವ ಕಡತಕ್ಕೆ ಸಹಿ ಮಾಡಿದ್ದೇನೆ. ಭಾರತ ಸರ್ಕಾರದ ಈ ನೀತಿಯನ್ನು ಎಲ್ಲಾ ರಾಜ್ಯಗಳಿಗೂ ಕಳುಹಿಸಲಾಗಿದೆ. ದೇಶದ ಪ್ರತಿ ಸರ್ಕಾರವೂ ಈ ನೀತಿಯನ್ನು ರಾಜ್ಯ ಮಟ್ಟದಲ್ಲಿ ಅಳವಡಿಸಿಕೊಳ್ಳಬೇಕು’ ಅಂತಾ ಹೇಳಿದ್ದಾರೆ.
ಕಳೆದ ತಿಂಗಳಷ್ಟೇ, ನಿತಿನ್ ಗಡ್ಕರಿ ಹಿಂದಿನ ಸೀಟಿನಲ್ಲಿ ಸೇರಿದಂತೆ ಎಲ್ಲಾ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಧರಿಸುವ ಪ್ರಮುಖ ಯೋಜನೆಯನ್ನು ಹೊರತಂದಿದ್ದರು.
ವಾಹನ ಸ್ಕ್ರಾಪೇಜ್ ನೀತಿಯು ಹಳೆಯ ಮತ್ತು ಯೋಗ್ಯವಲ್ಲದ ವಾಹನಗಳನ್ನು ರಸ್ತೆಗಳಲ್ಲಿ ಆಧುನಿಕ ಮತ್ತು ಹೊಸ ವಾಹನಗಳನ್ನು ಸ್ಕ್ರ್ಯಾಪ್ ಮಾಡಬೇಕೆಂದು ಹೇಳುತ್ತದೆ. ಈ ನೀತಿಯು ಏಪ್ರಿಲ್ 1, 2022 ರಂದು ಜಾರಿಗೆ ಬಂದಿತು.
ವಾಹನ ಸ್ಕ್ರ್ಯಾಪ್ ಘೋಷಣೆಯಾಗುವ ಮುನ್ನವೇ, ಅಕ್ಟೋಬರ್ 29, 2018 ರಂದು ರಾಷ್ಟ್ರ ರಾಜಧಾನಿಯಲ್ಲಿ 15 ವರ್ಷ ಹಳೆಯ ಪೆಟ್ರೋಲ್ ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳ ಸಂಚಾರವನ್ನು ಸುಪ್ರೀಂ ಕೋರ್ಟ್ ನಿಷೇಧಿಸಿತ್ತು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2014 ರಲ್ಲಿ ಆದೇಶವನ್ನು ನೀಡಿತ್ತು. ಇದು 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಯಾವುದೇ ಸಾರ್ವಜನಿಕ ಪ್ರದೇಶದಲ್ಲಿ ನಿಲ್ಲಿಸುವುದನ್ನು ನಿರ್ಬಂಧಿಸಿದೆ.
Join The Telegram | Join The WhatsApp |