Join The Telegram | Join The WhatsApp |
ನವದೆಹಲಿ-
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಭಾರತದ ಪ್ರಧಾನ ಮಂತ್ರಿ ಇತ್ತೀಚೆಗೆ ಪರಿಚಯಿಸಿದ ಕಾರ್ಯಕ್ರಮವಾಗಿದೆ. ಪ್ರತಿ 4 ತಿಂಗಳಿಗೊಮ್ಮೆ, ಭಾರತ ಸರ್ಕಾರವು ರಾಷ್ಟ್ರದ ಪ್ರತಿಯೊಬ್ಬ ರೈತನಿಗೆ 6000 ರೂಪಾಯಿಗಳನ್ನು (ಸುಮಾರು $100) ಪಾವತಿಸುತ್ತದೆ. PMkisan.gov.in ನಲ್ಲಿ ಪಿಎಂ ಕಿಸಾನ್ ತಿರಸ್ಕೃತ ಪಟ್ಟಿ PM ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪರಿಶೀಲಿಸಿ. ಈ ಯೋಜನೆಯ ಫಲಾನುಭವಿಗಳ ಆನ್‌ಲೈನ್ ಸ್ಥಿತಿ ಮತ್ತು ಕೃಷಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗಳನ್ನು ಸಹ ನೀವು ಪರಿಶೀಲಿಸಬಹುದು.
ಸಣ್ಣ ಮತ್ತು ಮಧ್ಯಮ ರೈತಾಪಿ ವರ್ಗದವರ ಕೃಷಿ ಚಟುವಟಿಕೆಗಳಿಗೆ ನೆರವಾಗಲು ರೂಫಿಸಲಾಗಿರುವ ಪಿಎಂ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ 12ನೇ ಕಂತಿನ ಹಣ ಬಿಡುಗಡೆ ಮಾಡಿದೆ. ಈ ಯೋಜನೆಯಲ್ಲಿ ಸರ್ಕಾರ ಪ್ರತೀ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ ಹಣವನ್ನು ಬಿಡುಗಡೆ ಮಾಡುತ್ತದೆ.
ಆದರೂ ಕೂಡ ಲಕ್ಷಾಂತರ ಜನರು ಯೋಜನೆಯ ಫಲಾನುಭವಿಗಳಾಗಲು ಅನರ್ಹರಾದರೂ ನೊಂದಾಯಿಸಿಕೊಂಡು ಸರ್ಕಾರದಿಂದ ನಿಯಮಿತವಾಗಿ ಹಣ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ ಇಂಥ ನಾಲ್ಕು ಲಕ್ಷಕ್ಕೂ ಅಧಿಕ ಅನರ್ಹ ಫಲಾನುಭವಿಗಳು ಪತ್ತೆಯಾಗಿದ್ದಾರೆ. ಇವರಿಗೆ ಈವರೆಗೂ ಪಿಎಂ ಕಿಸಾನ್ ಯೋಜನೆ ಅಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟು 442 ಕೋಟಿ ರೂ ವರ್ಗವಾಗಿರುವುದು ತಿಳಿದುಬಂದಿದೆ,
ರಾಜ್ಯ ಸರ್ಕಾರದ ಅಧಿಕಾರಿಗಳು ಇಂಥ ಅನರ್ಹ ರೈತರನ್ನು ಗುರುತಿಸಿದ್ದು, ಅಂಥವರನ್ನು ಸಂಪರ್ಕಿಸಿ ವಾಪಸ್ ಹಣ ವಸೂಲಿ ಮಾಡಲಿದ್ದಾರೆ ಎಂಬ ಸುದ್ದಿ ಇದೆ. ಸರ್ಕಾರ ಈಗಾಗಲೇ ಇಂಥ ಅನರ್ಹ ರೈತರನ್ನು ಗುರುತಿಸಿ ಪಟ್ಟಿ ಬಿಡುಗಡೆ ಮಾಡುತ್ತಿದೆ.
ಕರ್ನಾಟಕ ಸರ್ಕಾರದಿಂದ ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಲಾಗಿಲ್ಲ. ಆದರೆ, ಪಿಎಂ ಕಿಸಾನ್ ಯೋಜನೆಯ ಪೋರ್ಟಲ್‌ನಲ್ಲಿ ಪಟ್ಟಿ ಹುಡುಕಲು ಪ್ರಯತ್ನಿಸಬಹುದು.
1) ಪಿಎಂ ಕಿಸಾನ್ ಪೋರ್ಟಲ್‌ಗೆ ಹೋಗಿ
2) ಅಲ್ಲಿ ನಡುವಿನ ಭಾಗದಲ್ಲಿ ಡ್ಯಾಷ್‌ಬೋರ್ಡ್ ಕಾಣಿಸಬಹುದು. ಅದಿದ್ದರೆ ಅದರ ಮೇಲೆ ಕ್ಲಿಕ್ ಮಾಡಿ
3) ಆಗ ಕಾಣುವ ನಾಲ್ಕು ಆಯ್ಕೆಗಳಲ್ಲಿ ಒಂದು ಆರಿಸಿ
4) ನಿಮ್ಮ ರಾಜ್ಯ, ಜಲ್ಲೆ, ತಾಲೂಕು, ಗ್ರಾಮ ಇತ್ಯಾದಿ ವಿವರ ನೀಡಿ ಬಳಿಕ “ಶೋ” ಮೇಲೆ ಕ್ಲಿಕ್ ಮಾಡಿ
5) ಆಧಾರ್ ಸ್ಟೇಟಸ್‌ನಲ್ಲಿ ‘ರಿಜೆಕ್ಟೆಡ್’ ಆಯ್ಕೆ ಮಾಡಿದರೆ ಒಂದು ಪಟ್ಟಿ ಬರುತ್ತದೆ.
Join The Telegram | Join The WhatsApp |