This is the title of the web page
This is the title of the web page

Live Stream

September 2023
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಪ್ರತ್ಯೇಕ ಪ್ರಕರಣ : ಕೊನೆಗೂ ಬಂಗಾರದ ಆಭರಣ ಪತ್ತೆ ಹಚ್ಚಿದ ಪೊಲೀಸರು

Join The Telegram Join The WhatsApp

ಬೆಳಗಾವಿ :

ಹಿಂಡಲಗಾ ಗ್ರಾಮದ ಶಾಂತಾ ಬಸವರಾಜ ಪರಗೊನ್ನವರ ಸಾಃ ಹಿಂಡಲಗಾ ಕೇಂದ್ರ ಕಾರಾಗೃಹ ಇವರ ಬಂಗಾರ ಆಭರಣ ಕಳುವಾದ ಬಗ್ಗೆ ನೀಡಿದ ದೂರಿನಂತೆ ದಿನಾಂಕ .30 / 11 / 2022 ರಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು . ಹಿರಿಯ ಪೊಲೀಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಎಸ್.ವಿ. ಗಿರೀಶ , ಎಸಿಪಿ ಬೆಳಗಾವಿ ಗ್ರಾಮೀಣ ಉಪವಿಭಾಗರವರ ಮಾರ್ಗದರ್ಶನದಲ್ಲಿ ಶ್ರೀನಿವಾಸ ಹಾಂಡ , ಪಿಐ , ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ ಎಲ್.ಎಸ್ . ಜೋಡಟ್ಟಿ ಪಿಎಸ್‌ಐ ( ಕಾ & ಸು ) ಮತ್ತು ಸಿಬ್ಬಂದಿ ತಂಡ ಆರೋಪಿತರ ಮಾಹಿತಿ ಕಲೆ ಹಾಕಿ ದಿನಾಂಕ : 09/12/2022 ರಂದು ಮಲ್ಲಸರ್ಜ ಗಂಗಪ್ಪಾ ಕೊಟಬಾಗಿ , ವಯಸ್ಸು 26 ವರ್ಷ , ಕಡಸಗಟ್ಟಿ ತಾಃ ಬೈಲಹೊಂಗಲ ಈತನನ್ನು ಬೈಲಹೊಂಗಲ ತಾಲೂಕಿನ ಕಡಸಗಟ್ಟಿ ಗ್ರಾಮದಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ . ಆತನನ್ನು ವಿಚಾರಣೆಗೊಳಪಡಿಸಿದಾಗ ಸದರಿಯವನು ಕಳ್ಳತನ ಮಾಡಿ , ಬಂಗಾರವನ್ನು ಕಿತ್ತೂರಿನ ಖಾಸಗಿ ಬ್ಯಾಂಕಿನಲ್ಲಿ ಅಡ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದು , ಆರೋಪಿತನ ವಶದಿಂದ ಕಳ್ಳತನ ಮಾಡಿದ 46 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ . ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಮಾಳಮಾರುತಿ ಪೊಲೀಸ್‌ ಕಾರ್ಯಾಚರಣೆ : 1,30,000 ರೂ.ಬಂಗಾರದ ಆಭರಣ ಪತ್ತೆ

ದಿನಾಂಕ 01/12/2022 ರಂದು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸುನೀಲ.ಬಿ.ಪಾಟೀಲ ಪಿಐ ಮಾಳಮಾರುತಿ ಪೊಲೀಸ ಠಾಣೆ ಬೆಳಗಾವಿ ಇವರ ನೇತೃತ್ವದ ತಂಡವು ಮಾಳಮಾರುತಿ ಪೊಲೀಸ ಠಾಣಾ ಹದ್ದಿಯಲ್ಲಿ ಸರಗಳ್ಳತನ ಮಾಡಿದ ಆರೋಪಿತನಾದ ರಾಜು ಯಲ್ಲಪ್ಪಾ ಆಲಟ್ಟಿ ( 20 ) ಸಾ || ವಂಟಮೂರಿ ಕಾಲನಿ ಜನತಾ ಪ್ಲಾಟ ಬೆಳಗಾವಿ ಈತನನ್ನು ಪತ್ತೆ ಮಾಡಿರುತ್ತಾರೆ. ಆತನಿಂದ ಸುಮಾರು 1,30,000 / – ರೂ ಕಿಮ್ಮತ್ತಿನ ಬಂಗಾರದ ಮಂಗಳಸೂತ್ರವನ್ನು ವಶಪಡಿಸಿಕೊಂಡು , ಆರೋಪಿತನಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಲಾಗಿರುತ್ತದೆ.


Join The Telegram Join The WhatsApp
Admin
the authorAdmin

Leave a Reply