ಬೆಳಗಾವಿ :
ಮಹಿಳೆಯರ ಅಪಾರ ಬೇಡಿಕೆ ಮೇರೆಗೆ ಶಿಲ್ಪಾ ಗ್ರೂಪ್ ಆಫ್ ಕಂಪನಿ ವತಿಯಿಂದ ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಯೋಜನೆ ಮೂಲಕ ಉದ್ಯೋಗಾವಕಾಶ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಿಲ್ಪಾ ಗ್ರೂಪ್ ಆಫ್ ಕಂಪನಿ ಸಂಸ್ಥಾಪಕಿ ಶಿಲ್ಪಾ ಗೋಡಿಗೌಡರ ಅವರು, ಮಹಿಳೆಯರು ಮನೆಯಲ್ಲೇ ಇದ್ದು ಮಾಡುವ ಕೆಲಸ ಕಾರ್ಯಗಳಿಗೆ ಹುಡುಕುತ್ತಿರುತ್ತಾರೆ. ಅಂತಹ ಮಹಿಳೆಯರಿಗೆ ಈ ವೇದಿಕೆ ವರವಾಗಲಿದೆ. ನೂರಕ್ಕಿಂತಲೂ ಹೆಚ್ಚು ಹೊಸ ಯೋಜನೆಗಳು ಹಾಗೂ ಅವಕಾಶಗಳು ಇಲ್ಲಿ ಸಿಗಲಿದೆ. ಬೆಳಗಾವಿ ಜಿಲ್ಲೆಯಲ್ಲಿ 10,000 ಕ್ಕಿಂತ ಹೆಚ್ಚಿನ ಮಹಿಳೆಯರಿಗೆ ವೇದಿಕೆಯಿಂದ ಲಾಭವಾಗಲಿದೆ. ಈ ಕಾರ್ಯಕ್ರಮ ಡಿಸೆಂಬರ್ 12ರಂದು ಬೆಳಗಾವಿಯ ಮಹಾಂತೇಶನಗರದ ಮಹಾಂತ ಭವನದಲ್ಲಿ ನಡೆಸಲಾಗುವುದು. ಆಸಕ್ತ ಮಹಿಳೆಯರು ಈ ಮೊಬೈಲ್ ಸಂಖ್ಯೆಗೆ ಡಿಸೆಂಬರ್ 10 ರೊಳಗೆ (ಮೊ :6363444423)ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಅವರು ಕೋರಿದ್ದಾರೆ.

ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ, ಸ್ತ್ರೀರೋಗ ತಜ್ಞೆ ಡಾ.ಸವಿತಾ ಕದ್ದು, ಆರ್ ಎಲ್ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕಿ ಮಾಧುರಿ ಕುಲಕರ್ಣಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.