ಗೋಕರ್ಣ : ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಗೋಕರ್ಣದ ಶ್ರೀರಾಮ ಮಂದಿರದ ಹಿಂಭಾಗದ ಗುಡ್ಡ ಕುಸಿದಿದ್ದು, ದೇವಸ್ಥಾನ ಹಾಗೂ ಅಕ್ಕಪಕ್ಕದ ಪ್ರಮುಖ ಸ್ಥಳಗಳು ಕೂಡ ತೀವೃ ಹಾನಿಗೊಳಗಾಗಿವೆ. ಇದರಿಂದಾಗಿ ಭಕ್ತರಲ್ಲಿ ಸಹಜವಾಗಿಯೇ ನೋವುಂಟಾಗಿದ್ದು, ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ.ಗೋಕರ್ಣಕ್ಕೆ ಬರುವವರು ಶ್ರೀ ರಾಮ ಮಂದಿರಕ್ಕೂ ಕೂಡ ಆಗಮಿಸುವುದು ರೂಢಿ. ಹಾಗೇ ಇಲ್ಲಿ ರಾಮ ತೀರ್ಥವಿದ್ದು, ಇಲ್ಲಿ ಸ್ನಾನ ಮಾಡುವುದು ಕೆಲವರು ಪದ್ಧತಿಯನ್ನಾಗಿಸಿಕೊಂಡಿದ್ದಾರೆ. ಇನ್ನು ಮಳೆಗಾಲವಾಗಿದ್ದರಿಂದ ರಾಮತೀರ್ಥದ ನೀರು ಸಮೃದ್ಧವಾಗಿ ಹರಿಯುವುದರಿಂದ ಮತ್ತು ಪಕ್ಕದಲ್ಲಿಯೇ ಕಿರು ಜಲಪಾತ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದರು.

ಆದರೆ ಅದೃಷ್ಟವಶಾತ್ ಗುಡ್ಡ ಕುಸಿದ ಸಂದರ್ಭದಲ್ಲಿ ಸಮೀಪ ಯಾರೂ ಇಲ್ಲದಿರುವುದರಿಂದ ಭಕ್ತರಿಗೆ ಹಾಗೂ ಇತರರಿಗೂ ತೊಂದರೆ ಉಂಟಾಗಿಲ್ಲ.ಆದರೆ ಬಸವನ ಬಾಯಿಯಿಂದ ಬರುವ ಝರಿ ನೀರಿನ ಶೆಡ್‌ಗಳು ಹಾನಿಗೊಳಗಾಗಿದೆ. ಹೀಗಾಗಿ ಇಲ್ಲಿಗೆ ಯಾರಿಗೂ ಪ್ರವೇಶಿಸದಂತೆ ಸ್ಥಳೀಯ ಪೊಲೀಸರು ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ.