ಬೆಳಗಾವಿ : ಕಿತ್ತೂರು ಹಾಗೂ ಖಾನಾಪುರ ಬೆಳಗಾವಿ ಜಿಲ್ಲೆಗೆ ಸೇರಿದ್ದರೂ ಅವು ಉತ್ತರ ಕನ್ನಡ ಲೋಕಸಭಾ ವ್ಯಾಪ್ತಿಗೆ ಒಳಪಟ್ಟಿವೆ.

ವಿಧಾನಸಭಾ ಚುನಾವಣೆಯಲ್ಲಿ ಕಿತ್ತೂರಿನಲ್ಲಿ ಕಾಂಗ್ರೆಸ್ ಬಹು ದೊಡ್ಡ ಜಯ ಸಾಧಿಸಿತ್ತು. ಆದರೆ ಇದೀಗ ಲೋಕಸಭಾ ಚುನಾವಣೆ ಫಲಿತಾಂಶ ಬಿಜೆಪಿ ಪರವಾಗಿ ಲಭಿಸಿದೆ. ಕಿತ್ತೂರಿನಲ್ಲಿ ಕಾಂಗ್ರೆಸ್ ಗಿಂತ ಬಿಜೆಪಿ ಅತಿ ಹೆಚ್ಚು ಮತ ಪಡೆದುಕೊಂಡಿರುವುದು ವಿಶೇಷವಾಗಿದೆ. ಅದೇ ರೀತಿ ಖಾನಾಪುರದಲ್ಲೂ ಈ ಬಾರಿ ಬಿಜೆಪಿ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಜಯಭೇರಿ ಸಾಧಿಸಿತ್ತು. ಆ ಪರಂಪರೆ ಇದೀಗ ಮತ್ತೆ ಮುಂದುವರೆದಿದೆ. ಈ ಮೂಲಕ ಖಾನಾಪುರ ಬಿಜೆಪಿಯ ಭದ್ರಕೋಟೆ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದೆ.

ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರಕ್ಕೆ ಒಳಪಟ್ಟಿರುವ ಬೆಳಗಾವಿ ಜಿಲ್ಲೆಯ ಕಿತ್ತೂರು ಹಾಗೂ ಖಾನಾಪುರ ಮತಕ್ಷೇತ್ರಗಳಲ್ಲಿ ಈ ಸಲ ಬಿಜೆಪಿ ಮತ್ತೆ ಪ್ರಾಬಲ್ಯ ಮೆರೆದಿದೆ. ಜೊತೆಗೆ ಅಂಜಲಿ ನಿಂಬಾಳ್ಕರ್ ಅವರು ಯಾವೊಂದು ವಿಧಾನಸಭಾ ಮತಕ್ಷೇತ್ರದಲ್ಲೂ ಮುನ್ನಡೆ ಸಾಧಿಸಿಲ್ಲ. ಆರಂಭದಿಂದಲೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುನ್ನಡೆ ಕಾಯ್ದುಕೊಂಡು ಹೋಗಿದ್ದರು. ಅಂತಿಮವಾಗಿ ಅವರು ಬಹುದೊಡ್ಡ ಜಯ ಸಾಧಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಬಾಬಾಸಾಹೇಬ ಪಾಟೀಲ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದರು. ಅದೇ ರೀತಿ ಖಾನಾಪುರದಲ್ಲಿ ವಿಠಲ್ ಹಲಗೆಕರ್ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. ಆದರೆ, ಲೋಕಸಭಾ ಚುನಾವಣೆಯಲ್ಲಿ ಕಿತ್ತೂರು ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ.

ಅಂಜಲಿ ನಿಂಬಾಳ್ಕರ್ ಈ ಹಿಂದೆ ಖಾನಾಪುರ ವಿಧಾನಸಭಾ ಮತಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಆದರೆ ಈಗ ಲೋಕಸಭಾ ಚುನಾವಣೆಯಲ್ಲಿ ಅವರು ಖಾನಾಪುರದಲ್ಲಿ 48148 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 107978 ಮತಗಳನ್ನು ಪಡೆಯುವ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ತಮ್ಮ ಹಿಡಿತ ಸಾಧಿಸಿದ್ದಾರೆ.

ಈ ಹಿಂದೆ ಸಂಸದರಾಗಿದ್ದ ಅನಂತ್ ಕುಮಾರ್ ಹೆಗಡೆ ಅವರು ಚುನಾವಣೆ ಸೇರಿದಂತೆ ಅಪರೂಪಕ್ಕೊಮ್ಮೆ ಕಿತ್ತೂರು ಹಾಗೂ ಖಾನಾಪುರ ಮತಕ್ಷೇತ್ರ ಗಳಿಗೆ ಭೇಟಿ ನೀಡುತ್ತಿದ್ದರು. ಬೆಳಗಾವಿ ಜಿಲ್ಲೆಗೆ ಅವರ ಭೇಟಿ ತೀರಾ ಕಡಿಮೆ. ಈಗ ಹೊಸದಾಗಿ ಆಯ್ಕೆ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಿಂದಿನ ಸಂಸದರ ಮೇಲಿದ್ದ ಆರೋಪ ಹೋಗಲಾಡಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ಮತ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿಯ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡುತ್ತಾರೋ ಕಾದು ನೋಡಬೇಕಾಗಿದೆ.

 

ಖಾನಾಪುರ
ಅಂಜಲಿ
48148
ಕಾಗೇರಿ
107978

ಕಿತ್ತೂರು
ಅಂಜಲಿ
56203
ಕಾಗೇರಿ
92445

ಹಳಿಯಾಳ
ಅಂಜಲಿ
54546
ಕಾಗೇರಿ
83426

ಕಾರವಾರ
ಅಂಜಲಿ
47889
ಕಾಗೇರಿ
113317

ಕುಮಟಾ
ಅಂಜಲಿ
44435
ಕಾಗೇರಿ
97928

ಭಟ್ಕಳ
ಅಂಜಲಿ
67885
ಕಾಗೇರಿ
100288

ಸಿರ್ಸಿ
ಅಂಜಲಿ
60124
ಕಾಗೇರಿ
100052

ಯಲ್ಲಾಪುರ
ಅಂಜಲಿ
64066
ಕಾಗೇರಿ
82453

ಮತಗಟ್ಟೆಗಳಲ್ಲಿ ದಾಖಲಾದ ಒಟ್ಟು ಮತಗಳ ಸಂಖ್ಯೆ (EVMI

ಮತಗಳು
ಅಂಜಲಿ
443296
ಕಾಗೇರಿ
777887