ರಾಯಪುರ: ದಿಗ್ಗಜ ಸಚಿನ್ ತೆಂಡೂಲ್ಕರ್ ನಾಯಕತ್ವದ ಇಂಡಿಯಾ ಮಾಸ್ಟರ್ಸ್ ತಂಡವು ಚೊಚ್ಚಲ ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಟಿ20 ಲೀಗ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡಿತು.

ಇಲ್ಲಿಯ ಶಹೀದ್ ವೀರನಾರಾಯಣ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಡಿಯಾ 6 ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ಮಾಸ್ಟರ್ಸ್ ವಿರುದ್ಧ ಜಯಿಸಿತು.

ಟಾಸ್ ಗೆದ್ದ ವಿಂಡೀಸ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ‘ದಾವಣಗೆರೆ ಎಕ್ಸ್‌ಪ್ರೆಸ್‌’ ಆ‌ರ್. ವಿನಯಕುಮಾರ್ (26ಕ್ಕೆ3) ಅವರ ಶಿಸ್ತಿನ ದಾಳಿಯಿಂದಾಗಿ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 148 ರನ್‌ಗಳ ಸಾಧಾರಣ ಮೊತ್ತ ಡ್ವೇನ್ ಸ್ಮಿತ್ (45; 352, 4×6, 6×2) ಮತ್ತು ಅರ್ಧಶತಕ ಗಳಿಸಿದ ಲೆಂಡ್ಲಿ ಸಿಮನ್ಸ್‌ (57; 41ಎ, 4×5, 6X1) ಅವರು ತಂಡವು ಅಲ್ಪಮೊತ್ತಕ್ಕೆ ಕುಸಿಯುವುದನ್ನುತಪ್ಪಿಸಿದರು.

ಗುರಿ ಬೆನ್ನಟ್ಟಿದ ಆತಿಥೇಯ ತಂಡದ ಆರಂಭಿಕ ಬ್ಯಾಟ‌ರ್ ಅಂಬಟಿ ರಾಯುಡು (74; 502, 4X9, 6X3) ಅರ್ಧಶತಕ ಹೊಡೆದರು. ಇದರಿಂದಾಗಿ ತಂಡವು 17.1 ಓವರ್‌ಗಳಲ್ಲಿ 4ಕ್ಕೆ 149 ರನ್ ಗಳಿಸಿತು. ನಾಯಕ ಸಚಿನ್ 18 ಎಸೆತಗಳಲ್ಲಿ 25 ರನ್ ಗಳಿಸಿದರು. 2 ಬೌಂಡರಿ, 1 ಸಿಕ್ಸರ್ ಬಾರಿಸಿದರು.

ಬೆಂಗಳೂರಿನ ಸ್ಟುವರ್ಟ್ ಬಿನ್ನಿ ಅವರು ಕೊನೆಯಲ್ಲಿ ಅಬ್ಬರಿಸಿದರು. 2 ಅಮೋಘ ಸಿಕ್ಸ‌ರ್ ಹೊಡೆದ ಅವರು ಕೇವಲ 8 ಎಸೆತಗಳಲ್ಲಿ 15 ರನ್ ಗಳಿಸಿದರು. ತಂಡವನ್ನು ಗೆಲುವಿನ ದಡ ಸೇರಿಸಿದರು.

ಪಡೆಯು ವಿನಯ್ ದಾಳಿಗೆ ಕುಸಿಯಿತು. ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ವಿನಯ್ ಎಸೆತವನ್ನು ಹೊಡೆಯುವ ಯತ್ನದಲ್ಲಿ ಲಾರಾ ಅವರು ಪವನ್ ನೇಗಿಗೆ ಕ್ಯಾಚಿತ್ತರು. ಇದರಿಂದಾಗಿ ಜೊತೆಯಾಟ ಮುರಿಯಿತು.

ನದೀಮ್, ನೇಗಿ ಮತ್ತು ಸ್ಟುವರ್ಟ್ ಬಿನ್ನಿ ಕೂಡ ಉತ್ತಮ ಬೌಲಿಂಗ್ ಮಾಡಿದರು. ಇದೆಲ್ಲದರ ನಡುವೆಯೂ ಸಿಮನ್ಸ್ ಮಿಂಚಿದರು. ಅರ್ಧಶತಕ ಹೊಡೆದರು. ವಿನಯ್ ಬೌಲಿಂಗ್‌ನಲ್ಲಿ ಸಿಮನ್ಸ್‌ ಕ್ಲೀನ್‌ಬೌಲ್ಡ್ ಆದರು. ಆ್ಯಷ್ಠೆ ನರ್ಸ್ ವಿಕೆಟ್ ಕೂಡ ವಿನಯ್ ಪಾಲಾಯಿತು.

ಸಂಕ್ಷಿಪ್ತ ಸ್ಕೋರು:

ವೆಸ್ಟ್ ಇಂಡೀಸ್ ಮಾಸ್ಟರ್ಸ್: 20 ಓವರ್‌ಗಳಲ್ಲಿ 7ಕ್ಕೆ 148 (ಡೈನ್ ಸ್ಮಿತ್ 45, ಲೆಂಡ್ಸ್ ಸಿಮನ್ಸ್ 57, ದಿನೇಶ್ ರಾಮದೀನ್ ಔಟಾಗದೇ 12, ಆರ್. ವಿನಯಕುಮಾ‌ರ್ 26ಕ್ಕೆ3, ಶಾಬಾಜ್ ನದೀಪ್ 12ಕ್ಕೆ2, ಪವನ್ ನೇಗಿ 30ಕ್ಕೆ1, ಸ್ಟುವರ್ಟ್ ಬಿನ್ನಿ 11ಕ್ಕೆ 1) ಇಂಡಿಯಾ ಮಾಸ್ಟರ್ಸ್: 17.1 ಓವರ್‌ಗಳಲ್ಲಿ 4ಕ್ಕೆ149 (ಅಂಬಟಿ ರಾಯುಡು 74, ಸಚಿನ್ ತೆಂಡೂಲ್ಕರ್ 25, ಗುರುಕೀರತ್ ಸಿಂಗ್ ಮಾನ್ 14, ಯುವರಾಜ್ ಸಿಂಗ್ ಅಜೇಯ 13, ಆಫ್‌ ನರ್ಸ್ 22ಕ್ಕೆ2) ಫಲಿತಾಂಶ: ಇಂಡಿಯಾ ಮಾಸ್ಟರ್ಸ್‌ಗೆ 6 ವಿಕೆಟ್ ಜಯ.