ಬೆಳಗಾವಿ : ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವೇದಿಕೆಯ ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನೆ ಶನಿವಾರ ಸಂಜೆ ೪ ಗಂಟೆಗೆ ಚನ್ನಮ್ಮನ ಕಿತ್ತೂರು ಕಲ್ಮಠದ ಸಭಾಗೃಹದಲ್ಲಿ ನಡೆಯಲಿದ್ದು , ಅಕಾಡೆಮಿ ಅಧ್ಯಕ್ಷ ಮುಕುಂದರಾಜು ಅವರು ಉದ್ಘಾಟಿಸಲಿದ್ದಾರೆ. ಪ್ರೊ. ಪ್ರಜ್ಞಾ ಮತ್ತೀಹಳ್ಳಿ ಅವರ ವಿಶೇಷ ಉಪನ್ಯಾಸವಿದೆ. ಕಲ್ಮಠ ಶ್ರೀಗಳ ಸಾನ್ನಿಧ್ಯ ಮತ್ತು ಚಕೋರ ವೇದಿಕೆ ಜಿಲ್ಲಾ ಸಂಚಾಲಕ ಎಲ್. ಎಸ್. ಶಾಸ್ತ್ರಿಯವರ ಅಧ್ಯಕ್ಷತೆ, ಅಕಾಡೆಮಿ ರಿಜಿಸ್ಟ್ರಾರ್ ಎನ್.ಕರಿಯಪ್ಪ, ಜಿಲ್ಲಾ ಸಂಚಾಲಕ ನಾಗೇಶ ನಾಯಕ , ಡಾ. ಎಸ್. ಬಿ. ದಳವಾಯಿ, ಮಹೇಶ ಚೆನ್ನಂಗಿ ಉಪಸ್ಥಿತರಿರುವರು. ಸಾಹಿತ್ಯಾಸಕ್ತರು ಬರಬೇಕು ಎಂದು ಅಕಾಡೆಮಿ ಸದಸ್ಯ ಸಂಚಾಲಕ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ್ ವಿನಂತಿಸಿಕೊಂಡಿದ್ದಾರೆ.