Join The Telegram | Join The WhatsApp |
ಹೈದರಾಬಾದ್:
ನಗರದ ಬೇಗಂ ಪೇಟೆಯಲ್ಲಿ ದೇಶದ ಮೊದಲ ಚಿನ್ನದ ಎಟಿಎಂ ಉದ್ಘಾಟನೆಗೊಂಡಿದೆ.ತೆಲಂಗಾಣ ಮಹಿಳಾ ಆಯೋಗದ ಅಧ್ಯಕ್ಷ ಸುನಿತಾ ಲಕ್ಷ್ಮ ರೆಡ್ಡಿ ಚಿನ್ನದ ಎಟಿಎಂ ಅನ್ನು ಉದ್ಘಾಟಿಸಿದ್ದಾರೆ. ಈ ಎಟಿಎಂನಿಂದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳನ್ನು ಉಪಯೋಗಿಸಿಕೊಂಡು ಚಿನ್ನವನ್ನು ಡ್ರಾ ಮಾಡಬಹುದು. ಶೇ. 99.99 ರಷ್ಟು ಶುದ್ಧತೆಯ 0.5,1,2,5,10,20,50,100 ಗ್ರಾಂ ತೂಕದ ಚಿನ್ನದ ನಾಣ್ಯವನ್ನು ಡ್ರಾ ಮಾಡಬಹುದು.
ಚಿನ್ನದ ಗುಣಮಟ್ಟದ ಖಾತ್ರಿಪಡಿಸುವ ದಾಖಲೆಗಳನ್ನು ಸಹ ನೀಡಲಾಗುತ್ತದೆ. ಪ್ರಾಯೋಗಿಕವಾಗಿ ಹೈದರಾಬಾದಿನಲ್ಲಿ ಈ ಎಟಿಎಂ ಆರಂಭಗೊಂಡಿದ್ದು ದೇಶದಾದ್ಯಂತ ಸುಮಾರು 3000 ಎಟಿಎಂ ಗಳನ್ನು ಸ್ಥಾಪಿಸುವ ಯೋಜನೆ ಇದೆ ಎಂದು ಗೋಲ್ಡ್ ಸಿಕ್ಕಾ ಲಿಮಿಟೆಡ್ ನ ಸಿಇಓ ಸೈಯದ್ ತರೂಜ್ ತಿಳಿಸಿದ್ದಾರೆ.
Join The Telegram | Join The WhatsApp |