ಅರಸಮ್ಮಕಾನು : ಕ್ರೀಡಾ ಪಂದ್ಯಾಟಗಳು ಯುವ ಜನತೆಯಲ್ಲಿ ಒಗ್ಗಟ್ಟು, ಸಾಮರಸ್ಯವನ್ನು ಮೂಡಿಸುತ್ತವೆ.ವ್ಯಕ್ತಿಯ ಸ್ಮರಣಾರ್ಥ ಆಯೋಜಿಸುವ ಕಾರ್ಯಕ್ರಮಗಳು ಗೌರವ ಸಮರ್ಪಣೆ, ಸಮಾಜ ಸೇವೆ ಹಾಗೂ ನೆನಪುಗಳನ್ನು ಶಾಶ್ವತಗೊಳಿಸುತ್ತವೆ ಎಂದು ಚಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ಚಾರ ಹೇಳಿದರು.

ಅರಸಮ್ಮಕಾನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅರಸಮ್ಮಕಾನು ನವಶಕ್ತಿ ಯುವಕ
ಮಂಡಲ ಹಾಗೂ ಮೈತ್ರಿ ಕ್ರಿಕೆಟರ್ಸ್ ಇವರ ಜಂಟಿ ಆಶ್ರಯದಲ್ಲಿ ದಿ.ಸುಧಾಕರ ಪೂಜಾರಿ ಸ್ಮರಣಾರ್ಥ 12 ತಂಡಗಳ 40
ಗಜಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಸುಧಾಕರ ಟ್ರೋಫಿ-2025 ನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.
ಅರಸಮ್ಮಕಾನು ನವಶಕ್ತಿ ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಮಡಾಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಶೇಡಿಮನೆ, ಸದಸ್ಯ ಸದಾನಂದ ಪೂಜಾರಿ, ನವಶಕ್ತಿ
ಯುವಕ ಮಂಡಲದ ಗೌರವಾಧ್ಯಕ್ಷ ಕೀರ್ತಿಕುಮಾರ್ ಶೆಟ್ಟಿ,ಎಸ್‌ಡಿಎಂಸಿ ಅಧ್ಯಕ್ಷ ಜ್ಯೋತಿ ಸತ್ಯನ್ ಉಪಸ್ಥಿತರಿದ್ದರು.

ಸಮಾರೋಪ: ನವಶಕ್ತಿ ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ ಹೆಗ್ಡೆ, ಪ್ರದೀಪ್ ಪೂಜಾರಿ ಗೋಳಿಗದ್ದೆ,
ಮಡಾಮಕ್ಕಿ ಗ್ರಾಮ ಪಂಚಾಯಿತಿ ಸದಸ್ಯ ದಯಾನಂದ ಪೂಜಾರಿ, ಸಾರ್ವಜನಿಕ
ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಕುಲಾಲ, ನವಶಕ್ತಿ ಯುವಕ ಮಂಡಲ ಹಾಗೂ ಮೈತ್ರಿ ಕ್ರಿಕೆಟರ್ಸ್
ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಥಮ ಸ್ಥಾನ ಗಳಿಸಿದ ತ್ರಿಷಾ ಕ್ರಿಕೆಟರ್ಸ್ ಅರಸಮ್ಮಕಾನು ಮತ್ತು ದ್ವಿತೀಯ ಸ್ಥಾನ ಪಡೆದ ಟಾರ್ಗೆಟ್ ಸಿದ್ದಾಪುರ
ತಂಡಗಳಿಗೆ ಬಹುಮಾನ ಹಾಗೂ ಶಾಶ್ವತ ಫಲಕ ನೀಡಿ ಗೌರವಿಸಲಾಯಿತು.
ಪ್ರಶಾಂತ ಹೆಗ್ಡೆ ಸ್ವಾಗತಿಸಿದರು.ಗಣೇಶ್ ಅರಸಮ್ಮಕಾನು ನಿರೂಪಿಸಿದರು. ವೆಂಕಟೇಶ್ ಉಳ್ಳೂರ್ ವಂದಿಸಿದರು.