Join The Telegram | Join The WhatsApp |
ಕೇನ್ಯ-
ಕೇನ್ಯ ಗ್ರಾಮದ ಕಾಯಂಬಾಡಿ ನಾಗಬ್ರಹ್ಮ ಮುಗೇರ್ಕಳ ದೈವಸ್ಥಾನ ದ ವಠಾರದಲ್ಲಿ ದಿನಾಂಕ 19-02-2023 ರಂದು 65 ಕೆ ಜಿ ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ನಿವೃತ್ತ ತಹಶೀಲ್ದಾರ್ ಶ್ರೀ ತಮ್ಮಯ್ಯ ಗೌಡ ಗೆಜ್ಜೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಸತ್ಯನಾರಾಯಣ ಭಟ್ ಕಾಯಂಬಾಡಿ, ಶ್ರೀ ರಾಜೀವ್ ಗೌಡ ಕಣ್ಕಲ್, ಶ್ರೀಮತಿ ಕುಸುಮ ಎಸ್ ರೈ ಕೇನ್ಯ ಹೊಸಮನೆ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾದ ಶ್ರೀ ಶಿವಪ್ರಸಾದ್ ರೈ ಮೈಲೇರಿ ಶ್ರೀ ಭರತ ಕೊಳಂಬೆ, ಕ್ಲಬ್ ನ ಅಧ್ಯಕ್ಷರಾದ ಶ್ರೀ ವೆಂಕಪ್ಪ ಗೌಡ ಕಾಯಂಬಾಡಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಸುಂತಾರ್ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಸತಾಯುಷಿ ಶ್ರೀಮತಿ ರಾಮಕ್ಕ ಅತ್ಲಾಜೆ, ಶ್ರೀಮತಿ ಲಕ್ಷ್ಮಿ ಪೂಜಾರಿ, ಶ್ರೀ ಪರಮೇಶ್ವರ ಆಚಾರ್ಯ ಪೇರಳಕಟ್ಟೆ ಇವರನ್ನು ಸನ್ಮಾನಿಸಲಾಯಿತು. ಶ್ರೀ ಉದಯ ಅಮ್ಮಣ್ಣಾಯ ಕೇನ್ಯ ಕಬಡ್ಡಿ ಅಂಕಣವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಕೇನ್ಯ, ನೇಲ್ಯಡ್ಕ, ಕಣ್ಕಲ್ ಶಾಲಾ ಮಕ್ಕಳಿಂದ ಪ್ರದರ್ಶನ ಪಂದ್ಯಾಟ ನಡೆಯಿತು.
Join The Telegram | Join The WhatsApp |