Join The Telegram | Join The WhatsApp |
ಮಂಗಳೂರು-
ಮಂಗಳೂರಿನ ಪಂಪ್ ವೆಲ್ ಸಮೀಪದಲ್ಲಿ ಎಬಿಟಿ ಲೈಟ್ಸ್ ನ ಮಳಿಗೆ ನೂತನವಾಗಿ ನವೀಕೃತಗೊಂಡಿದ್ದು, ಹೊಚ್ಚ ಹೊಸ ಮಳಿಗೆಯು ಜನತೆಯ ಸೇವೆಗೆ ಸಜ್ಜಾಗಿದೆ.
ಆರ್ಕಿಟೆಕ್ಚಲ್ ಮತ್ತು ಎಲ್ ಇಡಿ ಹಾಗೂ ಅಲಂಕಾರಿಕ ದೀಪಗಳಿಗೆ ಮನೆ ಮಾತಾಗಿರುವ ಎಬಿಟಿ ಲೈಟ್ಸ್ ಮಳಿಗೆಯನ್ನು ಹೊಚ್ಚ ಹೊಸತಾಗಿ ನವೀಕರಿಸಲಾಗಿದ್ದು, ನೂತನ ಮಳಿಗೆ ಉದ್ಘಾಟನೆಗೊಂಡಿತು.
ಗ್ರಾಹಕರಾದ ಮಂಗಳೂರಿನ ಇಂಟೀರಿಯರ್ ಡಿಸೈನರ್ ಶ್ಯಾನ್ ವಾಸ್ ಮಾತನಾಡಿ, ಎಬಿಟಿ ಲೈಟ್ಸ್ ತನ್ನ ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ನೀಡುತ್ತಿದೆ ಹಾಗೂ ಇಲ್ಲಿ ಗುಣಮಟ್ಟದ ಲೈಟ್ಸ್ ಗಳು ಲಭ್ಯವಿದೆ. ಈ ಮಳಿಗೆ ಇನ್ನಷ್ಟು ಬೆಳವಣಿಗೆ ಕಾಣಲಿ ಎಂದು ಹಾರೈಸಿದರು.
ಮಳಿಗೆಯ ಸಿಬ್ಬಂದಿ ಅನೀಶ್ ಅವರು ಮಾತನಾಡಿ, ಇಲ್ಲಿ ಉತ್ಕೃಷ್ಟ ಗುಣಮಟ್ಟದ ಲೈಟ್ಸ್ ಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ಗ್ರಾಹಕರು ಮಳಿಗೆಗೆ ಭೇಟಿ ನೀಡಿ, ವಿವಿಧ ವಿನ್ಯಾಸ್ ಡೆಕೊರೇಟಿವ್ ಲೈಟ್ಸ್ ಎಲ್ ಇಡಿಗಳನ್ನು ಖರೀದಿಸಬಹುದು ಎಂದು ಹೇಳಿದರು.
ಎಬಿಟಿ ಲೈಟ್ಸ್ ಮಳಿಗೆಯಲ್ಲಿ ಸ್ಪೋಟ್ಸ್ ಲೈಟ್ಸ್, ಕಾಪ್ ಲೈಟ್ಸ್, ಔಟ್ ಡೋರ್, ಇನ್ ಡೋರ್ ಮತ್ತು ಸ್ಟಾರ್ ಲೈಟ್ಸ್ ಇನ್ನಿತರ ವಿವಿಧ ರೀತಿಯ ಆಕರ್ಷಕ ಲೈಟ್ಸ್ ಗಳು ಲಭ್ಯವಿದ್ದು, ಒಂದೇ ಸೂರಿನಡಿಯಲ್ಲಿ ಆರ್ಕಿಟೆಕ್ಷರಲ್ ಮತ್ತು ಎಲ್ ಇಡಿ ಹಾಗೂ ಅಲಂಕಾರಿಕ ದೀಪಗಳು ಹೈ ಕ್ವಾಲಿಟಿಯಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ.
Join The Telegram | Join The WhatsApp |