ಹಿರಿಯರ ಮಾರ್ಗದರ್ಶನ, ಆದರ್ಶ ಗುಣಗಳು ಸಮಾಜದಲ್ಲಿ ಹಲವು ಬದಲಾವಣೆಗಳಿಗೆ ಸಾಕ್ಷಿ-ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ

ದಾನ ಧರ್ಮ ಕಾರ್ಯಗಳು ಶ್ರೇಷ್ಠ,
ಮನುಷ್ಯ ತನ್ನ ಜೀವದಲ್ಲಿ ಮಾಡಿದ ಉತ್ತಮ ಕಾರ್ಯಗಳಿಗೆ ಸಮಾಜದಲ್ಲಿ
ಗೌರವವಿದೆ. ಶೇಡಿಮನೆ ನಾರಾಯಣ ಮಾಸ್ಟರ್ ಸೇವಾ ಕಾರ್ಯಗಳು ಆದರ್ಶವಾಗಿರಲಿ. ನಿತೀಶ್ ಮೆಮೋರಿಯಲ್ ಟ್ರಸ್ಟ್ ಉತ್ತಮ ಸೇವಾ
ಕಾರ್ಯಗಳೊಂದಿಗೆ ಶ್ರೇಷ್ಠತೆಯನ್ನು ಹೊಂದಲಿ -ಎಸ್.ಸಚ್ಚಿದಾನಂದ ಚಾತ್ರ,ಅನುವಂಶಿಕ ಆಡಳಿತ
ಮೊಕ್ತೇಸರರು, ಶ್ರೀ ಕ್ಷೇತ್ರ ಕಮಲಶಿಲೆ.

 

 

ಆರ್ಡಿ : ಹಿರಿಯರ ಮಾರ್ಗದರ್ಶನ, ಆದರ್ಶ ಗುಣಗಳು ಇಂದಿನ ಸಮಾಜದಲ್ಲಿ ಹಲವು ಬದಲಾವಣೆಗಳಿಗೆ ಸಾಕ್ಷಿಯಾಗಿವೆ. ಶೇಡಿಮನೆ
ನಾರಾಯಣ ಮಾಸ್ಟರ್ ಸಾಮಾಜಿಕ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿರುತ್ತಾರೆ. ನಿತೀಶ್ ಮೆಮೋರಿಯಲ್ ಟ್ರಸ್ಟ್ ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ಜನರ ಮೆಚ್ಚುಗೆಗೆ ಪಾತ್ರವಾಗಲಿ
ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ
ಶೆಟ್ಟಿ ಹೇಳಿದರು.
ಶೇಡಿಮನೆ ಪಾಟ್ಲಮಕ್ಕಿ ಎಂಬಲ್ಲಿ ನಿತೀಶ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಿದ ನಿತೀಶ್ ನಾರಾಯಣ ಸ್ಮಾರಕ ಮಂಟಪ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಶೇಡಿಮನೆ ನಿತೀಶ್ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಚೆನ್ನ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಮಲಶಿಲೆ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಳದ
ಅನುವಂಶಿಕ ಆಡಳಿತ ಮೊಕ್ತೇಸರ ಎಸ್.ಸಚ್ಚಿದಾನಂದ ಚಾತ್ರಾ, ಹೆಬ್ರಿ ಎಸ್‌ಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನಾಗರಾಜ ಶೆಟ್ಟಿ, ನಿವೃತ್ತ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಕುಂದಾಪುರ ಬಿಲ್ಲವ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ಮಡಾಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಶೇಡಿಮನೆ, ನಿವೃತ್ತ ಮುಖ್ಯ ಶಿಕ್ಷಕ ವಾಸುದೇವ ಕ್ರಮಧಾರಿ ಅರಸಮ್ಮಕಾನು, ನಿತೀಶ್

ನಾರಾಯಣ ಮೆಮೋರಿಯಲ್ ಟ್ರಸ್ಟ್ ದಾಧಿಕಾರಿಗಳು, ನಿವೃತ್ತ ಶಿಕ್ಷಕ ದಿ.ನಾರಾಯಣ ಪೂಜಾರಿ ಪಾಟ್ಲಮಕ್ಕಿ ಕುಟುಂಬಸ್ಥರು, ಅಭಿಮಾನಿಗಳು ಉಪಸ್ಥಿತರಿದ್ದರು. ಮಡಾಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಶೇಡಿಮನೆ ಇವರಿಗೆ ಶೇಡಿಮನೆ ನಾರಾಯಣ ಮಾಸ್ಟರ್ ಸಾಧಕ ಪ್ರಶಸ್ತಿ ಪ್ರದಾನದೊಂದಿಗೆ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ

ನಡೆಯಿತು.

ಶಿಕ್ಷಕ ಸತೀಶ್ ಪೂಜಾರಿ ಸ್ವಾಗತಿಸಿದರು. ದಿಶಾ, ವರ್ಷಾ, ಶಾರಧ್ಯ ಪ್ರಾರ್ಥಿಸಿದರು. ಶಿಕ್ಷಕ ರಾಜೀವ ಪೂಜಾರಿ ಪ್ರಾಸ್ತಾವಿಕ
ಮಾತನಾಡಿದರು.ಮುಖ್ಯ ಶಿಕ್ಷಕ ಶಶಿಧರ ಶೆಟ್ಟಿ ಶಾಂದ್ರಬೆಟ್ಟು ನಿರೂಪಿಸಿದರು. ಪ್ರಭಾಕರ ಪೂಜಾರಿ ಪಾಟ್ಲಮಕ್ಕಿ ವಂದಿಸಿದರು.