ಶಿರ್ತಾಡಿ: ಶಿರ್ತಾಡಿಯ ಭುವನ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ನಲ್ಲಿ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನೆ ನೆರವೇರಿತು. ವಿದ್ಯಾರ್ಥಿಗಳಲ್ಲಿರುವ ನಾಯಕತ್ವವನ್ನು ಘೋಷಿಸಲು ಮತ್ತು ಅವರಲ್ಲಿರುವ ಬದ್ಧತೆಯನ್ನು ಎತ್ತಿ ತೋರಿಸಲು ವಿದ್ಯಾರ್ಥಿ ಪರಿಷತ್ ಕೆಲಸ ಮಾಡಲಿದೆ. ಮೂಡುಬಿದರೆಯ ಹಿರಿಯ ವಕೀಲ ಕೆ.ಆರ್. ಪಂಡಿತ್ ಮಾತನಾಡಿ, ನೂತನವಾಗಿ ನೇಮಕಗೊಂಡ ವಿದ್ಯಾರ್ಥಿ ನಾಯಕರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಕಾಲೇಜಿನಲ್ಲಿ ಸಿಕ್ಕಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಜನನಾಯಕರಾಗಿ ಗುರುತಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಶಾಂತ ಡಿಸೋಜಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಉತ್ತಮ ಭವಿಷ್ಯ ರೂಪಿಸುವಲ್ಲಿ ವಿದ್ಯಾರ್ಥಿ ಪರಿಷತ್ತು ಸಕ್ರಿಯ ಪಾತ್ರ ವಹಿಸುವ ಜೊತೆಗೆ ಅವರಲ್ಲಿ ನಾಯಕತ್ವವನ್ನು ಗುರುತಿಸಲು ಅನುಕೂಲ ಮಾಡಿಕೊಡುತ್ತದೆ ಎಂದರು. ಪ್ರಶಾಂತ ಎನ್, ಕೋಶಾಧಿಕಾರಿ ಲತಾ, ಸಲಹೆಗಾರ ಶರಣಪ್ಪ ಬಾವಿ, ಪ್ರಾಂಶುಪಾಲ ಡಾ. ಪ್ರದೀಪ ಎಂ.ಡಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಕೌಶಿಕ್ ಸಿ ಉಪಸ್ಥಿತರಿದ್ದರು. ಡಾ. ಕೌಶಿಕ್ ಸಿ ಅವರ ನೇತೃತ್ವದಲ್ಲಿ ಪ್ರಮಾಣವಚನ ಸ್ವೀಕಾರ ನೆರವೇರಿತು. ವಿಖಿಲ್ ಸಾಲಿಯಾನ್ ನಿರೂಪಿಸಿದರು.