This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

National News

ಪಿಎಂ ಕಿಸಾನ್ ಯೋಜನೆಯ ಕಂತುಗಳಲ್ಲಿ ಹೆಚ್ಚಳ ಸಾಧ್ಯತೆ

Join The Telegram Join The WhatsApp

ನವದೆಹಲಿ-

ದೇಶದ ಮುಂಬರುವ ಕೇಂದ್ರ ಬಜೆಟ್ 2023 ರಲ್ಲಿ ರೈತರಿಗೆ ಒಳ್ಳೆಯ ಸುದ್ದಿ ಬರಲಿದೆ. ಫೆಬ್ರವರಿ 1, 2023 ರಂದು, ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24 ರ ಹಣಕಾಸು ವರ್ಷಕ್ಕೆ (ಕೇಂದ್ರ ಬಜೆಟ್ 2023-24) ಬಜೆಟ್ ಮಂಡಿಸಲಿದ್ದಾರೆ. ತೆರಿಗೆದಾರರಿಂದ ಹಿಡಿದು ರೈತರವರೆಗೆ ಈ ಬಜೆಟ್ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ದೇಶದ ಸಾರ್ವತ್ರಿಕ ಚುನಾವಣೆಗಳು 2024ರಲ್ಲಿ ನಡೆಯಲಿವೆ.

ಮೂಲಗಳ ಪ್ರಕಾರ ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ರೈತರಿಗೆ ಭರ್ಜರಿ ಗಿಫ್ಟ್ ನೀಡಬಹುದು. ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೊತ್ತವನ್ನು ಹೆಚ್ಚಿಸಲು ಹಣಕಾಸು ಸಚಿವರು ಘೋಷಿಸುವ ಸಾಧ್ಯತೆಯಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ವಾರ್ಷಿಕವಾಗಿ ಪಡೆಯುವ 6 ಸಾವಿರ ರೂಪಾಯಿ ಮೊತ್ತವನ್ನು ಹೆಚ್ಚಿಸಬಹುದು. ರೈತರಿಗೆ ನೀಡುವ ಮೊತ್ತವನ್ನು ಈಗ 3 ಕಂತಿನ ಬದಲು 4 ಕಂತುಗಳಲ್ಲಿ ವಿಂಗಡಿಸಬಹುದು ಎಂದು ಕೃಷಿ ಸಚಿವಾಲಯದ ಮೂಲಗಳು ತಿಳಿಸಿವೆ. ಇದರಲ್ಲಿ ಪ್ರತಿ ತ್ರೈಮಾಸಿಕದಲ್ಲಿ ಅದೇ 2000 ರೂಪಾಯಿ ಕಂತು ನೀಡಬಹುದು. ಈ ಹಿಂದೆ, ಕೃಷಿ ತಜ್ಞರು ಮತ್ತು ಎಸ್‌ಬಿಐ ಇಕೋವ್ರಾಪ್‌ನ ವರದಿಗಳಲ್ಲಿ, ರೈತರಿಗೆ ಮೊತ್ತವನ್ನು ಹೆಚ್ಚಿಸುವ ಬಗ್ಗೆ ತಿಳಿಸಲಾಗಿದೆ.

ಬೀಜಗಳು ಮತ್ತು ರಸಗೊಬ್ಬರಗಳ ಬೆಲೆಯಲ್ಲಿ ನಿರಂತರ ಏರಿಕೆಯಿಂದಾಗಿ, ರೈತರು ಪಿಎಂ ಕಿಸಾನ್ ಮೊತ್ತವನ್ನು ಹೆಚ್ಚಿಸಲು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಸರಕಾರದೊಂದಿಗೆ ಹಲವು ಬಾರಿ ಸಭೆ ನಡೆಸಲಾಗಿದ್ದರೂ ಇನ್ನೂ ಮೊತ್ತ ಹೆಚ್ಚಿಸಿಲ್ಲ.

 

 


Join The Telegram Join The WhatsApp
Admin
the authorAdmin

Leave a Reply