ಬೆಳಗಾವಿ : ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ 78 ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಂ. ಜಿ. ಹೆಗಡೆಯವರು ಧ್ವಜಾರೋಹಣವನ್ನು ಮಾಡಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಕ್ಕಾಗಿ ಸಂಗೊಳ್ಳಿ ರಾಯಣ್ಣನಂತಹ ಅದೆಷ್ಟೋ ಮಹನೀಯರು ತಮ್ಮ ತನುಮನ ಅರ್ಪಿಸಿ ಭಾರತವನ್ನು ಗುಲಾಮಿತನದಿಂದ ಮುಕ್ತಗೊಳಿಸಿದರು. ಆದರೆ ಇಂದು ಮಾನಸಿಕವಾಗಿ ಗುಲಾಮಿತನದಿಂದ ಮುಕ್ತರಾಗಿದ್ದೇವೆಯೇ ಎಂಬುದು ನಾವು ಪ್ರಶ್ನಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರದಿಂದ ಬಳಸದೇ ತಮ್ಮನ್ನು, ಸಮಾಜ ಮತ್ತು ದೇಶ ಕಟ್ಟುವ ಹಿನ್ನೆಲೆಯಲ್ಲಿ ಸರಿಯಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಸ್ವಾಭಿಮಾನ ಮತ್ತು ಸಮಾನತೆಯಿಂದ ಬದುಕಬೇಕು. ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತದಲ್ಲಿ ಸ್ವಾತಂತ್ರ್ಯದ ನಂತರದ ಈ ಎಪ್ಪತ್ತೆಂಟು ವರ್ಷಗಳಲ್ಲಿ ಭಾರತವು ಸಾಧಿಸಿದ್ದೇನು, ಸಾಧಿಸಬೇಕಾದುದನ್ನು ಅವಲೋಕಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.