ಬೆಳಗಾವಿ : ಹಿಂದವಾಡಿಯ ಗೋಮಟೇಶ ವಿದ್ಯಾಪೀಠದಲ್ಲಿ ಇಂದು ಭಾರತದ ೭೮ ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಗೋಮಟೇಶ ವಿದ್ಯಾಪೀಠದ ಅಧಿಷ್ಠಾತಾ ಹಾಗೂ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಮಾಜಿ ಅಧ್ಯಕ್ಷ, ಬೆಳಗಾವಿ ಗ್ರಾಮೀಣ ವಿಧಾನ ಸಭಾ ಮತಕ್ಷೇತ್ರದ ಮಾಜಿ ಶಾಸಕ ಸಂಜಯ ಪಾಟೀಲ ರಾಷ್ಟೃಧ್ವಜಾರೋಹಣ ನೆರವೇರಿಸಿದರು.

ಗೋಮಟೇಶ ವಿದ್ಯಾಪೀಠದ ನಿರ್ದೇಶಕರಾದ ಸನತಕುಮಾರ ವ್ಹಿ. ವ್ಹಿ., ರಾಜೇಶ ಬಿ ಪಾಟೀಲ ಮತ್ತು ಗೋಮಟೇಶ ವಿದ್ಯಾಪೀಠದ ಪ್ರಾಂಶುಪಾಲ ಡಿ.ಎಸ್.ಹನಗಂಡಿ, ಸುನೀಲ ಪಾಟೀಲ, ಅಕ್ಷಯ ನಂದಗಾವಿ, ಮಹೇಶ ಕಾರೇಕರ, ಮುಖ್ಯಾಧ್ಯಾಪಕರಾದ ಜ್ಯೋತ್ಸ್ನಾ ಹನಮಗೊಂಡ, ಸರೋಜಾ ಎಂ ಪಾಟೀಲ. ಹಾಗೂ ಬೈರು ಪಾಟೀಲ ಜ್ಯೋತಿ ಮೋರೆ, ಎಸ್.ಕೆ.ಕಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಗೋಮಟೇಶ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಡಿ.ಎಸ್.ಹನಗಂಡಿ ಸ್ವಾಗತಿಸಿದರು. ವಿದ್ಯಾಪೀಠದ ಶಾಲಾ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ದೇಶ ಭಕ್ತಿಗೀತೆಗಳು, ಭಾಷಣಗಳನ್ನು ಏರ್ಪಡಿಸಲಾಗಿತ್ತು.