Join The Telegram | Join The WhatsApp |
ನವದೆಹಲಿ-
ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ಶ್ರೀಲಂಕಾ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಆರು ಪಂದ್ಯಗಳ ಸರಣಿಯು ಮುಂಬೈ, ಪುಣೆ, ರಾಜ್‌ಕೋಟ್, ಗುವಾಹಟಿ, ಕೋಲ್ಕತ್ತಾ ಮತ್ತು ತಿರುವನಂತಪುರಂನಲ್ಲಿ ನಡೆಯಲಿದೆ. ಹಾರ್ದಿಕ್ ಪಾಂಡ್ಯ T20 ನಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ ಮತ್ತು ರೋಹಿತ್ ಶರ್ಮಾ ODI ಗೆ ನಾಯಕರಾಗಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರು ಶ್ರೀಲಂಕಾ ವಿರುದ್ಧ 2023 ರ ಮೊದಲ ತವರು ಸರಣಿಯಲ್ಲಿ ಭಾರತದ T20I ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ.
ರೋಹಿತ್ ಹೆಬ್ಬೆರಳಿನ ಗಾಯದಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವಾಗ, ಪಾಂಡ್ಯ ಅವರ ನೇಮಕವು ಶಾಶ್ವತ ಬದಲಾವಣೆಯೇ ಅಥವಾ ಕೇವಲ ಒಂದು ಸರಣಿಗೆ ಮಾತ್ರವೇ ಎಂಬುದರ ಕುರಿತಾಗಿ ಬಿಸಿಸಿಐ ಇನ್ನೂ ಏನು ಹೇಳಿಲ್ಲ.
ಧವನ್, ಪಂತ್ ಅವರನ್ನು ODIಗಳಿಂದ ಕೈಬಿಡಲಾಗಿದೆ; ಶಮಿ ವಾಪಸ್ಸು-
ಇತ್ತೀಚಿನ ಸರಣಿಯಲ್ಲಿ ರನ್‌ಗಳ ಬರ ಎದುರಿಸುತ್ತಿರುವ ಭಾರತದ ಹಿರಿಯ ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ODI ತಂಡದಿಂದ ಕೈಬಿಡಲಾಯಿತು. ಧವನ್ 2022 ರ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಭಾರತದ ಎರಡನೇ ತಂಡವನ್ನು ಮುನ್ನಡೆಸಿದ್ದರು ಆದರೆ ಕ್ರಮಾಂಕದಲ್ಲಿ ತಮ್ಮ ಪಾತ್ರವನ್ನು ನೀಡಲು ವಿಫಲರಾದರು. ಹಾಗೇ ವ್ರಷಬ್ ಪಂತ ಕೂಡ ಸ್ಥಾನ ಗಳಿಸಲು ವಿಫಲರಾಗಿದ್ದಾರೆ.
ರಾಹುಲ್ ಮತ್ತು ಕೊಹ್ಲಿ ODIಗಳಲ್ಲಿ ರೋಹಿತ್ ಜೊತೆಗೆ ಮರಳಿದರೆ, ಸೀಮರ್ ಮೊಹಮ್ಮದ್ ಶಮಿ ಅವರು ಡಿಸೆಂಬರ್ ಆರಂಭದಲ್ಲಿ ಅನುಭವಿಸಿದ ಭುಜದ ಗಾಯದ ನಂತರ ಪುನರಾಗಮನ ಮಾಡಲಿದ್ದಾರೆ.
ಭಾರತ vs ಶ್ರೀಲಂಕಾ T20I ಸರಣಿ ವೇಳಾಪಟ್ಟಿ:
⦿ 1 ನೇ T20I (ಜನವರಿ 3, ಮುಂಬೈ)
⦿ 2ನೇ T20I (ಜನವರಿ 5, ಪುಣೆ)
⦿ 3ನೇ T20I (ಜನವರಿ 7, ರಾಜ್‌ಕೋಟ್)
ಭಾರತ vs ಶ್ರೀಲಂಕಾ ಏಕದಿನ ಸರಣಿ ವೇಳಾಪಟ್ಟಿ:
⦿ 1 ನೇ ODI (ಜನವರಿ 10, ಗುವಾಹಟಿ)
⦿ 2ನೇ ODI (ಜನವರಿ 12, ಕೋಲ್ಕತ್ತಾ)
⦿ 3ನೇ ODI (ಜ. 15; ತಿರುವನಂತಪುರ)
ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್ ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಅರ್ಶ್ದೀಪ್ ಪಟೇಲ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್ ), ಇಶಾನ್ ಕಿಶನ್ (ವಿಕೆಟ್ ಕೀಪರ್ ), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ಮೊ. ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್
Join The Telegram | Join The WhatsApp |