
ಹೆಬ್ರಿ : ಹೆಬ್ರಿಯ ಎಸ್.ಆರ್. ಪಬ್ಲಿಕ್ ಸ್ಕೂಲ್ 4 ನೇ ತರಗತಿಯ ವಿದ್ಯಾರ್ಥಿನಿ ಆಪ್ತಿ ಆಚಾರ್ಯ ಅವರು, 2025 ಮಾರ್ಚ್ 1 ರಂದು ಜಿಮ್ನಾಸ್ಟಿಕ್ ನ ಒಂದು ಭಾಗವಾದ ಹೈಡ್ರೋಲ್ ಅನ್ನು ಗರಿಷ್ಟ 4 ನಿಮಿಷ 40 ಸೆಕೆಂಡ್ ನಲ್ಲಿ ಸತತ 65 ರೌಂಡುಗಳನ್ನು ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿದ್ದಾಳೆ. ಈಕೆ ಮುನಿಯಾಲಿನ ಶ್ರೀಮತಿ ಲತಾ ಹಾಗೂ ಶಿವಾನಂದ ಆಚಾರ್ಯ ಅವರ ಮಗಳು.
ವಿದ್ಯಾರ್ಥಿನಿಯನ್ನು ಎಸ್. ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್. ನಾಗರಾಜ್ ಶೆಟ್ಟಿ ಹಾಗೂ ಕಾರ್ಯದರ್ಶಿ ಸಪ್ನಾ ಎನ್ ಶೆಟ್ಟಿ ಅಭಿನಂದಿಸಿದ್ದಾರೆ.