Join The Telegram | Join The WhatsApp |
ಢಾಕಾ-
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ದಲ್ಲಿ ಭಾರತವು 5ರನ್ ಗಳ ಅಂತರದಿಂದ ಸೋತು ಸರಣಿ ಸೋಲನ್ನು ಒಪ್ಪಿಕೊಂಡಿತು. ಈ ಸೋಲಿನಿಂದ ದಿಗ್ಗಜ ಆಟಗಾರರನ್ನು ಹೊಂದಿರುವ ಭಾರತ ತಂಡವು ತಲೆ ತಗ್ಗಿಸುವಂತಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ತಂಡವು ಮೆಹದಿ ಮಿರಾಜ್ ಅವರ ಆಕರ್ಷಕ ಶತಕ ಹಾಗೂ ಮಹಮ್ಮದುಲ್ಲಾ 77 ರನ್ ಗಳ ನೆರವಿನಿಂದ 50 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 271 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ ತಂಡವು ಶ್ರೇಯಸ್ ಅಯ್ಯರ್ 82, ಅಕ್ಷರ ಪಟೇಲ್ 56 ರನ್, ನಾಯಕ ರೋಹಿತ್ ಶರ್ಮಾ ಅವರ ಸ್ಪೋಟಕ ಅಜೇಯ 51 ರನ್ ಗಳಿಸಿದರು ಗೆಲುವಿನ ದಡ ಸೇರಲಿಲ್ಲ.
ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ತಂಡ ಒಂದು ವಿಕೆಟ್‌ನಿಂದ ಪ್ರವಾಸಿ ಭಾರತ ತಂಡವನ್ನು ಸೋಲಿಸಿತ್ತು.
Join The Telegram | Join The WhatsApp |