Join The Telegram | Join The WhatsApp |
ಮೀರ್ ಪುರ್-
ಢಾಕಾದ ಷೇರ್ ಬಾಂಗ್ಲಾ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶವು ಕೊನೆಯ ವಿಕೆಟ್ ನಲ್ಲಿ 51 ರನ್ ಗಳ ಜೊತೆಯಾಟದ ನೆರವಿನಿಂದ 1 ವಿಕೆಟ್ ಗಳ ರೋಚಕ ಗೆಲುವು ಪಡೆದಿದೆ.
ಮೆಹಡಿ ಹಸನ್ ಮಿರ್ಜಾ ಅವರ ಅಮೂಲ್ಯ 38 , ಮುಸ್ತಾಪಿಜರ್ ರೆಹಮಾನ್ 10 ರನ್ ಗಳ ನೆರವಿನಿಂದ ಗೆಲುವು ದಾಖಲಿಸಿತು. ಬಾಂಗ್ಲಾದೇಶದ ಪರ ಲಿಟ್ಟನ್ ದಾಸ್ 41 ರನ್ ಗಳಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ವಿಶ್ವದ ನಂ.3ನೇ ಶ್ರೇಯಾಂಕದ ಭಾರತ ತಂಡ ಪೂರ್ಣ 50 ಓವರ್‌ಗಳ ಬ್ಯಾಟಿಂಗ್ ಮಾಡಲು ವಿಫಲವಾಯಿತು. 41.2 ಓವರ್‌ಗಳಲ್ಲಿ 186 ರನ್‌ಗಳಿಗೆ ಸರ್ವಪತನ ಕಂಡಿತು. ಉಪನಾಯಕ ಕೆಎಲ್ ರಾಹುಲ್ ಮಾತ್ರ ಏಕಾಂಗಿಯಾಗಿ ಬ್ಯಾಟಿಂಗ್ ಮಾಡಿದರು.
70 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 5 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಮೇತ 73 ರನ್ ಗಳಿಸಿ ಭಾರತದ ಪರ ಹೆಚ್ಚಿನ ಸ್ಕೋರರ್ ಎನಿಸಿದರು. ಉಳಿದ ಯಾವ ಬ್ಯಾಟ್ಸ್‌ಮನಗಳು ಬಾಂಗ್ಲಾದೇಶ ಬೌಲರ್‌ಗಳನ್ನು ಎದುರಿಸಲು ವಿಫಲರಾದರು.
ಬಾಂಗ್ಲಾದೇಶ ಪರ ಬೌಲಿಂಗ್‌ನಲ್ಲಿ ಆಲ್‌ರೌಂಡರ್ ಶಕಿಬ್ ಅಲ್ ಹಸನ್ 36 ರನ್‌ಗಳಿಗೆ 5 ವಿಕೆಟ್ ಕಬಳಿಸಿದರೆ, ಎಬಾಡೋಟ್ ಹೊಸೈನ್ 47 ರನ್‌ಗಳಿಗೆ 4 ವಿಕೆಟ್ ಪಡೆದು ಮಿಂಚಿದರು.
ದಿಗ್ಗಜ ಬ್ಯಾಟಿಂಗ್ ಪಡೆ ಹೊಂದಿದ್ದರೂ ಬಾಂಗ್ಲಾದೇಶ ಯುವ ಬೌಲರ್‌ಗಳ ಬೌಲಿಂಗ್ ತಂತ್ರಕ್ಕೆ ವಿಕೆಟ್ ಒಪ್ಪಿಸಿದರು. ಹೀಗಾಗಿ ಭಾರತ 200ರ ಗಡಿ ಮುಟ್ಟಲು ಹೋರಾಟ ನಡೆಸಿದರೂ ಆಗಲಿಲ್ಲ.
Join The Telegram | Join The WhatsApp |