Join The Telegram | Join The WhatsApp |
ಹ್ಯಾಮಿಲ್ಟನ್-
ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯಕ್ಕೆ ಮಳೆ ಕಾಟ ಎದುರಾಗಿದ್ದು, ಭಾರತದ ಬ್ಯಾಟಿಂಗ್ ವೇಳೆ ಜಿಟಿಜಿಟಿ ಮಳೆಯ ಪರಿಣಾಮ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಮಳೆಯಿಂದಾಗಿ 4.5 ಓವರ್ ಗೆ ಪಂದ್ಯವನ್ನು ನಿಲ್ಲಿಸಲಾಗಿದ್ದು, ಈವರೆಗೆ ಟೀಂ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ 22 ರನ್ ಗಳಿಸಿದೆ. ಶುಭಮನ್ ಗಿಲ್ (19) ಮತ್ತು ಶಿಖರ್ ಧವನ್ (2) ಕ್ರೀಸ್ ನಲ್ಲಿದ್ದಾರೆ.
ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ್ದು, 4.5 ಓವರ್ ಗಳಲ್ಲಿ ಭಾರತದ ಸ್ಕೋರ್ 22/0 ಆಗಿದೆ. ಇನ್ನು ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ ಮತ್ತು ಶಾರ್ದೂಲ್ ಠಾಕೂರ್ ಬದಲಿಗೆ ದೀಪಕ್ ಹೂಡಾ ಮತ್ತು ದೀಪಕ್ ಚಹಾರ್ ಅವರನ್ನು ಬದಲಾವಣೆಗಳನ್ನು ಮಾಡಲಾಗಿದೆ.
ಇಂದಿನ ಹವಾಮಾನ ಮುನ್ಸೂಚನೆಯು ಹ್ಯಾಮಿಲ್ಟನ್ನಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿತ್ತು. ಇದೀಗ ಭವಿಷ್ಯವು ನಿಜವಾಗಿದೆ ಎಂದು ತೋರುತ್ತಿದೆ. ಸದ್ಯಕ್ಕೆ ಕಾದು ನೋಡುವ ಪರಿಸ್ಥಿತಿ ಎದುರಾಗಿದೆ.
ಈಗಾಗಲೆ ಮೊದಲ ಪಂದ್ಯ ಸೋತಿರುವ ಟೀಂ ಇಂಡಿಯಾ ಸದ್ಯ ಸರಣಿಯಲ್ಲಿ 0-1 ಹಿನ್ನಡೆಯಲ್ಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ ಎರಡನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ ಮಾಡಿದ್ದು, ನ್ಯೂಜಿಲೆಂಡ್‌ನಲ್ಲಿ ಸರಣಿ ಗೆಲ್ಲುವ ಕನಸಿಗೆ ಬ್ರೇಕ್ ಬೀಳುತ್ತಾ ಎಂಬ ಅನುಮಾನ ಮೂಡಿದೆ.
Join The Telegram | Join The WhatsApp |