ಕೇಪ್ ಟೌನ್ :
ನ್ಯೂಲ್ಯಾಂಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಸರಣಿಯ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಜಯ ಸಾಧಿಸಿದೆ.

ಈ ಪಂದ್ಯ ಒಂದೂವರೆ ದಿನದಲ್ಲಿ ಮುಕ್ತಾಯವಾಯಿತು. ನಿನ್ನೆ ಮತ್ತು ಇಂದು (ಗುರುವಾರ) ವೇಗದ ಬೌಲರ್‌ಗಳೇ ಪಾರುಪತ್ಯ ಮೆರೆದರು.

ದಕ್ಷಿಣ ಆಫ್ರಿಕಾದ ಏಡನ್ ಮರ್ಕರಂ ಅವರ ಏಕಾಂಗಿ ಹೋರಾಟದ ಶತಕ (106), ಭಾರತ ವೇಗಿಗಳಾದ ಬೂಮ್ರಾ, ಸಿರಾಜ್‌ ಅವರ ಬೌಲಿಂಗ್‌ ದಾಳಿ ಈ ಪಂದ್ಯದ ಪ್ರಮುಖ ಆರ್ಕಷಣೆಯಾದವು.

ಸರಣಿಯ ಮೊದಲ ಪಂದ್ಯದಲ್ಲಿ ಇನಿಂಗ್ಸ್‌ ಮತ್ತು 32 ರನ್‌ಗಳಿಂದ ಗೆದ್ದಿದ್ದ ಆತಿಥೇಯ ತಂಡವು ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು.