Join The Telegram | Join The WhatsApp |
ಮುಂಬೈ-
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಿಮ್ ಇಂಡಿಯಾ ಬೌಲಿಂಗ್ ವಿಭಾಗ ಅಬ್ಬರಿಸಿದೆ. ಅದರಲ್ಲೂ ವಾಂಖೆಡೆಯ ಹಸಿರು ಪಿಚ್‌ನ ಲಾಭವನ್ನು ಅದ್ಭುತವಾಗಿ ಬಳಸಿಕೊಂಡ ಟೀಮ್ ಇಂಡಿಯಾದ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಆಘಾತ ನೀಡಿದರು ಹಾಗೂ ಸತತ ಬ್ಯಾಟಿಂಗ್ ವೈಪಲ್ಯ ಅನುಭವಿಸುತ್ತಿರುವ ಕೆಎಲ್ ರಾಹುಲ್ ಅಜೇಯ 75 ರನ್ ಗಳಿಸಿ ಗೆಲುವಿಗೆ ಕಾರಣರಾದರು.
ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಮಿಚೆಲ್ ಮಾರ್ಶ್ ರ 81 ರನ್‌ಗಳ ನೆರವಿನಿಂದ ಅಂತಿಮವಾಗಿ ಆಸ್ಟ್ರೇಲಿಯಾ ತಂಡ 35.4 ಓವರ್‌ಗಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 188 ರನ್‌ಗಳಿಗೆ ಆಲೌಟ್ ಆಯಿತು.
ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ ಆರಂಭಿಕ ಬ್ಯಾಟ್ಸಮನ್ ಗಳ ಅಘಾತ ಅನುಭವಿಸಿತು. ಆದರೆ ಕೆಎಲ್ ರಾಹುಲ್-ರವೀಂದ್ರಾ ಜಡೇಜಾ ಜೋಡಿ 6ನೇ ವಿಕೆಟ್ ಗೆ ಶತಕದ ಜೊತೆಯಾಟವಾಡಿ ಭಾರತಕ್ಕೆ ಗೆಲುವು ತಂದುಕೊಟ್ಟರು.
ಸಂಕ್ಷಿಪ್ತ ಸ್ಕೋರ್ ವಿವರ-
ಆಸ್ಟ್ರೇಲಿಯಾ – 188 (35.4)
ಭಾರತ – 191/5 (39.5)
ಪಂದ್ಯ ಶ್ರೇಷ್ಠ- ಕೆಎಲ್ ರಾಹುಲ್
ಮುಂದಿನ ಪಂದ್ಯ-ರವಿವಾರ ಮಾ. 19ಕ್ಕೆ
Join The Telegram | Join The WhatsApp |