ಪರ್ತ್‌:

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಬೇಕು ಎನ್ನುವುದು ಬಹುದಿನಗಳ ದೇಶವಾಸಿಗಳ ಕನಸು. ಆ ನಿಟ್ಟಿನಲ್ಲಿ ಭಾರತ ಕಾಲಕಾಲಕ್ಕೆ ತನ್ನ ಹಕ್ಕನ್ನು ಪ್ರತಿಪಾದಿಸುತ್ತಾ ಬಂದಿದೆ. ಇದೀಗ ವಿದೇಶಾಂಗ ಸಚಿವರು ಭಾರತಕ್ಕೆ ಭದ್ರತಾ ಮಂಡಳಿಯಲ್ಲಿ ಸದಸ್ಯತ್ವ ನೀಡುವ ಕುರಿತು ಮತ್ತೊಮ್ಮೆ ಧ್ವನಿಯೆತ್ತಿದ್ದಾರೆ.

ಬಹಳಷ್ಟು ರಾಷ್ಟ್ರಗಳು ಅದಕ್ಕೆ ಅಡ್ಡಗಾಲು ಹಾಕುತ್ತಿರು ವುದರಿಂದ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವದ ಭಾರತದ ಹಾದಿ ಕಠಿಣವಾಗಿದ್ದು, ಆದರೆ ಖಂಡಿತ ವಾಗಿಯೂ ಸಿಕ್ಕೇ ಸಿಗುತ್ತದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಿಂದೂ ಮಹಾಸಾಗರ ಸಮ್ಮೇಳನದಲ್ಲಿ ಶನಿವಾರ ಮಾತನಾಡಿ, ಕಾಯಂ
ಸದಸ್ಯತ್ವಕ್ಕೆ ಇಡೀ ಜಗತ್ತೇ ಸ್ಪರ್ಧೆಯಲ್ಲಿದೆ. ಕೆಲವರು ನಮ್ಮ ದಾರಿ ಮುಚ್ಚಲು ಯತ್ನಿಸುತ್ತಿದ್ದಾರೆ. ಹೀಗಾಗಿ ಈ ಹಾದಿಯಲ್ಲಿ ಮುಂದೆ ಸಾಗುವುದು ಕಠಿಣವಾಗಿದೆ. ಆದರೆ ಆ ತಡೆ ತೆರವು ಪ್ರಕ್ರಿಯೆ ಪ್ರಗತಿಯಲ್ಲಿದೆ. ಹಿಂದಿನ ದಿನ ಗಳಿಗೆ ಹೋಲಿಸಿದಲ್ಲಿ ಈಗ ಭರವಸೆ ಹೆಚ್ಚಿದೆ ಎಂದರು. ಜಗತ್ತಿನ ರಾಷ್ಟ್ರಗಳು ಭಾರತವನ್ನು ನೋಡುತ್ತಿರುವ ದೃಷ್ಟಿಕೋನ ಬದಲಾಗಿದೆ. ಜಗತ್ತಿನ ವಿಶ್ವಾಸ ಹಾಗೂ ನಂಬಿಕೆ ಗಳಿಸುವಲ್ಲಿ ಭಾರತ ಯಶಸ್ವಿಯಾ ಗಿದೆ. ಈ 25 ವರ್ಷಗಳು ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ಇದು ಭಾರತದ ಭವಿಷ್ಯದ ದಿಕ್ಕನ್ನೇ ಬದಲಿಸುವುದರ ಜತೆಗೆ, ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನವನ್ನು ಇನ್ನಷ್ಟು ಎತ್ತರಕ್ಕೆ ಏರಿಸಲಿದೆ’ ಎಂದು ಜೈಶಂಕ‌ರ್ ವಿಶ್ವಾಸ ವ್ಯಕ್ತಪಡಿಸಿದರು.