ಭೋಪಾಲ್‌: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಂದ ತಮ್ಮ ಮೂರನೇ ಮಗ ಎಂದು ಕರೆಯಲ್ಪಟ್ಟಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಮಲನಾಥ್ ಸದ್ಯಕ್ಕೆ ಕಾಂಗ್ರೆಸ್ ತ್ಯಜಿಸದಿರಲು ನಿರ್ಧರಿಸಿದ್ದಾರೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರ ಬಂಡಾಯ ಶಮನವಾಗಿದೆ. ಅವರು ಮಾ.2 ರಿಂದ ಮಾ.6 ರವರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿ ರುವ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.