Join The Telegram | Join The WhatsApp |
ನವದೆಹಲಿ-
ಕಿಸಾನ್ ಸಮ್ಮಾನ್ ನಿಧಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ 10 ಕೋಟಿ ರೈತರ ಖಾತೆಗಳಿಗೆ ಸರ್ಕಾರದಿಂದ 12ನೇ ಕಂತಿನ ಹಣ ವರ್ಗಾವಣೆಯಾಗಿದೆ. ಹಿಂದಿನ ಕಂತಿನ ಎರಡು ತಿಂಗಳು ಮುಗಿದು ಡಿಸೆಂಬರ್ ಆರಂಭವಾಗುತ್ತಿದ್ದಂತೆ ಕೋಟ್ಯಂತರ ರೈತರು 13ನೇ ಕಂತು ಬರುವುದನ್ನೇ ಕಾಯುತ್ತಿದ್ದಾರೆ. ಈ ಯೋಜನೆಯಲ್ಲಿ ಕೇಂದ್ರದ ಮೋದಿ ಸರ್ಕಾರದಿಂದ ಅರ್ಹ ರೈತರಿಗೆ ವಾರ್ಷಿಕ 6 ಸಾವಿರ ರೂ. ನೀಡುವ ಯೋಜನೆಯಾಗಿದೆ.
ರೈತರಿಗೆ ತಲಾ ಎರಡು ಸಾವಿರ ರೂಪಾಯಿಯಂತೆ ಮೂರು ಕಂತುಗಳಲ್ಲಿ ಆರು ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುವ ಯೋಜನೆಯಾಗಿದೆ. ಪಿಎಂ ಕಿಸಾನ್ ನಿಧಿಯ 13 ನೇ ಕಂತು ಡಿಸೆಂಬರ್ ಮತ್ತು ಮಾರ್ಚ್ ನಡುವೆ ಬಿಡುಗಡೆಯಾಗಲಿದೆ. ಡಿಸೆಂಬರ್ 15 ರಿಂದ 20 ರೊಳಗೆ ರೈತರಿಗೆ ಈ ಕಂತನ್ನು ನೀಡಲು ಸರ್ಕಾರ ಯೋಜಿಸುತ್ತಿದೆ ಎಂದು ಮೂಲಗಳು ಹೇಳುತ್ತವೆ. ಪ್ರತಿ ಬಾರಿಯಂತೆ ಈ ಬಾರಿಯೂ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ರೈತರ ಖಾತೆಗೆ ಹಣ ರವಾನೆಯಾಗಲಿದೆ. ಆದರೆ, ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
Join The Telegram | Join The WhatsApp |