ಹೆಬ್ರಿ : ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಸಂಘ ದ ವತಿಯಿಂದ ಸಿ ಎ ಪೌಂಡೇಶನ್ ಮತ್ತು ಸಿ. ಎಸ್. ಇ. ಇ. ಟಿ. ಮಾಹಿತಿ ಕಾರ್ಯಾಗಾರ ನಡೆಯಿತು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಮೃತ ಭಾರತಿ ಯ ಹಳೆ ವಿದ್ಯಾರ್ಥಿ ಸಿ.ಎ. ಸಂಧ್ಯಾ ಜಿ. ಮಾತನಾಡಿ , ನಮ್ಮ ಜೀವನದ ಎಲ್ಲ ಯಶಸ್ಸಿಗೆ ಸಮಯ ನಿರ್ವಹಣೆ ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ. ಹಣದಷ್ಟೇ ಮುಖ್ಯವಾದುದು ಸಮಯ . ಅದರ ನಿರ್ವಹಣೆಯ ಕಲೆಯನ್ನು ಕಲಿಯಬೇಕು. ಬೇಗನೆ ಗುರಿಯನ್ನು ನಿರ್ಧರಿಸಿ , ಬೇಗನೆ ಸಂಪಾದನೆ ಮಾಡಿ ಜೀವನವನ್ನು ಪಾವನವಾಗಿಸಿಕೊಳ್ಳಿ . ಜೊತೆಗೆ ಮೌಲ್ಯಗಳನ್ನು ಬೆಳೆಸಿಕೊಂಡು ಸತ್ಪ್ರಜೆ ಗಳಾಗಿ ಬಾಳಿ ಎಂದರು.ಪ್ರಾಂಶುಪಾಲ ಅಮರೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಸೃಷ್ಟಿ ಯು. ಶೆಟ್ಟಿ ಸ್ವಾಗತಿಸಿ , ಆರಾಧ್ಯ ವಂದಿಸಿದರು . ಲಕ್ಷ್ಯ ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರು , ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.