This is the title of the web page
This is the title of the web page

Live Stream

September 2023
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಬೆಳಗಾವಿಯಲ್ಲಿ ಆಹಾರ, ಉಡುಗೆ ತೊಡುಗೆಯಲ್ಲಿ ವಿನೂತನ ಕಲಿಕಾ ಶೈಲಿ !

Join The Telegram Join The WhatsApp

ಬೆಳಗಾವಿ :

ನಗರದ ವಿಟ್ಟಲಾಚಾರ್ಯ ಶಿವಣಗಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ವಿಶೇಷ ಕಲಿಕಾ ಕಾರ್ಯಕ್ರಮದ ಕೊನೆಯ ದಿನವಾಗಿತ್ತು.

ಶಾಲೆಯ ಎಲ್ ಕೆಜಿ ಹಾಗೂ ಯುಕೆಜಿ ವರ್ಗದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಆರು ದಿನಗಳ ಕಾಲ ಆರು ಬಣ್ಣಗಳ ಉಡುಗೆ ತೊಟ್ಟು ಬರುವಂತೆ ಹೇಳಲಾಗಿತ್ತು, ಅದೇ ರೀತಿ, ಅದೇ ಬಣ್ಣದ ಆಹಾರ ತರುವುದನ್ನು ಹೇಳಲಾಗಿತ್ತು, ಆ ಪ್ರಕಾರ ಪೋಷಕರ ಸಹಾಯದಿಂದ ಮಕ್ಕಳೆಲ್ಲ ಅದೇ ಬಣ್ಣಗಳ ಬಟ್ಟೆ ಹಾಗೂ ಆಹಾರ ಪದಾರ್ಥಗಳನ್ನು ತಂದಿದ್ದರು.

ಪ್ರತಿ ವರ್ಷ ಡಿಸೆಂಬರಿನಲ್ಲಿ ಇಂತಾ ವಿಶೇಷ ಕಾರ್ಯಕ್ರಮ ನಡೆಯುತ್ತಿದ್ದು, ಇದರ ಪ್ರಕಾರ ಪ್ರತಿಯೊಂದು ದಿನವೂ ಒಂದು ಬಣ್ಣದ ಬಗ್ಗೆ ವಿಶೇಷವಾಗಿ ಭೋಧನೆ ಮಾಡಿ, ಆ ಬಣ್ಣಗಳ ಬಗ್ಗೆ ಅವರಲ್ಲಿ ಗಾಢವಾದ ಕಲಿಕೆ, ಜ್ಞಾನ ಮೂಡುವಂತೆ ಮಾಡಿದರು, ಇದರಿಂದ ಮಕ್ಕಳಲ್ಲಿಯೂ ಕೂಡಾ ಬಣ್ಣಗಳ ಕಲಿಕೆಯಲ್ಲಿ ಸ್ಪಷ್ಟತೆ ಮೂಡಿತು.

ಶಾಲೆಯ ಶಿಕ್ಷಕಿ ವೀಣಾ ಬಡಿಗೇರ ಮಾತನಾಡಿ, ಈ ತರಗತಿಯಲ್ಲಿ ಓದುವ ಎಷ್ಟೋ ಮಕ್ಕಳಿಗೆ ಬಣ್ಣಗಳ ಬಗ್ಗೆ ಅರಿವು ಇರೋದಿಲ್ಲ, ಅದಕ್ಕಾಗಿ ಆರು ದಿನಗಳ ವಿಶೇಷ ಕಲಿಕಾ ಕಾರ್ಯಕ್ರಮ ಇಟ್ಟುಕೊಂಡಿದ್ದು, ಪ್ರತಿ ದೀನ ಒಂದೊಂದು ಬಣ್ಣದ ಬಟ್ಟೆಯನ್ನ ಮತ್ತು ಅದೇ ಬಣ್ಣದ ಆಹಾರವನ್ನು ತರಲು ಹೇಳಿದ್ದೆವು, ಅದರಂತೆ ಮಕ್ಕಳು ಲವಲವಿಕೆಯಿಂದ ಭಾಗಿಯಾಗಿ, ಕಲಿಕಾ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಿದರು.

ಇದರಲ್ಲಿ ಮಕ್ಕಳು ಹಾಗೂ ಅವರ ಪೋಷಕರು ತುಂಬಾ ಸಹಕಾರ ಮಾಡಿದ್ದು, ಇದರಂತೆ ಸಹಕಾರ ಇದ್ದರೇ ಮುಂದಿನ ದಿನಮಾನದಲ್ಲಿ ಮತ್ತೆ ಮಕ್ಕಳಿಗಾಗಿ ಇಂತಹ ಹಲವಾರು ವಿಶೇಷ ಕಾರ್ಯಕ್ರಮ ಆಯೋಜನೆ ಮಾಡುತ್ತೇವೆ ಎಂದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಮೀನಾಕ್ಷಿ ಒಡೆಯರ ಮಾತನಾಡಿ, ಈ ಬಣ್ಣಗಳ ಕಲಿಕಾ ಕಾರ್ಯಕ್ರಮ ಅಷ್ಟೇ ಅಲ್ಲಾ, ನಮ್ಮ ಶಾಲೆಯಲ್ಲಿ ಅನೇಕ ರಾಷ್ಟ್ರೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಕಾರ್ಯಕ್ರಮಗಳು ನಡೆಯುತ್ತವೆ.

ಈ ವಿಶೇಷ ಕಾರ್ಯಕ್ರಮ ನಡೆದು ಯಶಸ್ವಿಯಾಗಲು ಎಲ್ಲಾ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರಣರಾಗಿದ್ದು, ಶಾಲಾ ಆಡಳಿತ ಮಂಡಳಿಯ ಸಹಕಾರವೂ ತುಂಬಾ ಇದೆ, ಮಕ್ಕಳ ಜ್ಞಾನ ಹಾಗೂ ತಿಳಿವಳಿಕೆ ಹೆಚ್ಚಿಸಲೆಂದೆ ಇಂತಹ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ ಎಂದರು.

ಶಾಲೆಯ ಮುಖ್ಯ ಶಿಕ್ಷಕಿ ಮೀನಾಕ್ಷಿ ಒಡೆಯರ, ಸಹ ಶಿಕ್ಷಕಿಯರಾದ ಮೀನಾ ಬಡಿಗೇರ, ವೀಣಾ ಪಾಟೀಲ, ಸುವರ್ಣಾ ಕುಲಕರ್ಣಿ, ಗೀತಾ ಟೀಚರ್, ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.


Join The Telegram Join The WhatsApp
Admin
the authorAdmin

Leave a Reply