ಮಂಗಳೂರು : ಭಾರತೀಯ ನೌಕಾಪಡೆ ಸಂಪೂರ್ಣ ದೇಶಿಯ ತಂತ್ರಜ್ಞಾನವನ್ನು ಒಳಗೊಂಡ ಎರಡು ಹಡಗುಗಳನ್ನು ಲೋಕಾರ್ಪಣೆ ಮಾಡಿದೆ. ಕರ್ನಾಟಕದ ಕರಾವಳಿಯ ಪ್ರಮುಖ ಸ್ಥಳಗಳಾದ ಮಲ್ಪೆ ಮತ್ತು ಮುಲ್ಕಿ ಹೆಸರಿನ ಎರಡು ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆಯನ್ನು ದೇಶ ಸೇವೆಗೆ ನಿಯೋಜಿಸಲಾಗಿದೆ.

ಆಳವಿಲ್ಲದ ನೀರಿನಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವ ಈ ಜಲಾಂತರ್ಗಾಮಿ ವಿರೋಧಿ ಹಡಗುಗಳು ಭಾರತದ ನೌಕಾ ರಕ್ಷಣೆಗೆ ಗಮನಾರ್ಹ ಸೇರ್ಪಡೆ ಎನಿಸಿದೆ. ಸಂಪೂರ್ಣ ಸ್ವದೇಶಿ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತೀಯ ನೌಕಾಪಡೆಯಿಂದ ನಿರ್ಮಿಸಲಾದ ಈ ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆಗಳು ನೀರಿನೊಳಗಿನ ವಸ್ತುಗಳನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿರುವ ಸುಧಾರಿತ ಸೆನ್ಸಾರ್‌ಗಳನ್ನು ಹೊಂದಿವೆ. ನೀರೊಳಗಿನ ಗಣಿಗಳನ್ನು ಪತ್ತೆಹಚ್ಚಲು ಮತ್ತು ಕರಾವಳಿ ಪ್ರದೇಶಗಳ ಸಮೀಪ ಜಲಾಂತರ್ಗಾಮಿ ಚಲನೆಯನ್ನು ಮೇಲ್ವಿಚಾರಣೆ ಮಾಡಲು ಇವುಗಳು ಪ್ರಮುಖ ಪಾತ್ರ ವಹಿಸಲಿದೆ. ಈ ಹಿಂದೆ ಇದೇ ರೀತಿಯ ಎರಡು ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆಗಳನ್ನು ನೌಕಾಪಡೆಗೆ ಹಸ್ತಾಂತರಿಸಲಾಗಿತ್ತು.

ಈ ಯೋಜನೆಯಡಿಯಲ್ಲಿ ಒಟ್ಟು 16 ಜಲಾಂತರ್ಗಾಮಿ ವಿರೋಧಿ ಹಡಗುಗಳನ್ನು ಉತ್ಪಾದಿಸಲು ನಿರ್ಧರಿಸಲಾಗಿದೆ. ಕೊಚ್ಚಿ ಮತ್ತು ಕೋಲ್ಕತ್ತಾದ ಶಿಪ್‌ಯಾರ್ಡ್‌ಗಳು ತಲಾ ಎಂಟು ಜಲಾಂತರ್ಗಾಮಿ ವಿರೋಧಿ ಹಡಗುಗಳನ್ನು ನಿರ್ಮಿಸುವ ಕಾರ್ಯವನ್ನು ವಹಿಸಿಕೊಂಡಿವೆ. ಈ ಯೋಜನೆಯ ಒಪ್ಪಂದಕ್ಕೆ 2019 ರಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಹಿ ಹಾಕಲಾಯಿತು.

ವೈರಿ ಪಡೆಯ ಸಬ್‌ಮೇರಿನ್‌ಗಳನ್ನು ಪತ್ತೆ ಮಾಡುವ ಕ್ಷಮತೆ ಹೊಂದಿರುವ ಎರಡು ನೌಕೆಗಳಿಗೆ ಕರ್ನಾಟಕದ ಬಂದರಿನ ಹೆಸರನ್ನು ಭಾರತೀಯ ನೌಕಾಪಡೆ ಇರಿಸಿದೆ.
ಹಿಂದಿನ ಕಾಲದಲ್ಲಿ ಕರಾವಳಿಯ ಪ್ರಮುಖ ಹಾಗೂ ದೊಡ್ಡ ಬಂದರು ಆಗಿದ್ದ ಮೂಲ್ಕಿ ಹಾಗೂ ಮಲ್ಪೆಯ ಹೆಸರನ್ನೇ ನೌಕಾಪಡೆ ಹೊಸದಾಗಿ ನಿರ್ಮಾಣವಾಗುತ್ತಿರುವ ಹಡಗುಗಳಿಗೆ ಇರಿಸಿದೆ. ಐಎನ್‌ಎಸ್ ಮೂಲ್ಕಿ ಹಾಗೂ ಮಲ್ಪೆ ಹೆಸರಿನ ಈ ಎರಡೂ ನೌಕೆಗಳನ್ನೂ ಕೊಚ್ಚಿನ್ ಶಿಪ್ ಯಾರ್ಡ್‌ಲ್ಲಿ ನಿರ್ಮಾಣ ಮಾಡಲಾಗುತ್ತದೆ. ಇದರ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.

ಕರಾವಳಿ ಕರ್ನಾಟಕದ ಮೂಲ್ಕಿ ಹಾಗೂ ಮಲ್ಪೆ ಬಂದರುಗಳ ಹೆಸರು ಇರಿಸಲು ನಿರ್ದಿಷ್ಟ ಕಾರಣವೂ ಇದೆ. ಈ ಹಿಂದೆಯೂ ಇದೇ ಹೆಸರಿನ ನೌಕೆಗಳು ನೌಕಾಪಡೆಯಲ್ಲಿ ಇದ್ದವು. ರಷ್ಯಾದಿಂದ ಆಮದು ಮಾಡಿಕೊಳ್ಳಲಾಗಿದ್ದ 6 ಮೈನ್‌ಸ್ವೀಪಿಂಗ್ ನೌಕೆಗಳಲ್ಲಿ ಇವೂ ಸೇರಿದ್ದವು.1984 ರಿಂದ 2003(ಮೂಲ್ಕಿ) ಹಾಗೂ 2006(ಮಲ್ಪೆ)ರ ವರೆಗೆ ಕಾರ್ಯಾಚರಿಸಿದ್ದ ಈ ನೌಕೆಗಳನ್ನು ಮುಖ್ಯವಾಗಿ ಸಮುದ್ರ ತಟದಲ್ಲಿ ಕಡಲಿನ ಮೈನ್ ಸ್ಪೋಟಕ ಪತ್ತೆ ಮಾಡುವುದಕ್ಕೆ ಬಳಸಲಾಗುತ್ತಿತ್ತು. ಇವೆರಡನ್ನೂ ನಿವೃತ್ತಿಗೊಳಿಸಲಾಗಿತ್ತು.

ಈ ಹಿಂದೆ ಮೂಲ್ಕಿ ರಾಜ್ಯದ ಪ್ರಮುಖ ಬಂದರುಗಳಲ್ಲಿ ಒಂದಾಗಿತ್ತು. ಆಗ ದೇಶ-ವಿದೇಶಗಳಿಂದ ಸಣ್ಣ ಹಡಗುಗಳು ಮೂಲ್ಕಿ ಸಮುದ್ರದ ವರೆಗೆ ಬಂದು ಅಲ್ಲಿಂದ ಶಾಂಭವಿ ನದಿ ಮೂಲಕ ಒಳಗೆ ಬರುತ್ತಿದ್ದವು. ಪ್ರಮುಖ ವಾಣಿಜ್ಯ ಚಟುವಟಿಕೆಗೆ ಆಗ ಮೂಲ್ಕಿ ಕೇಂದ್ರವಾಗಿತ್ತು. 1930ರಿಂದ 1960ರ ವರೆಗೆ ಪ್ರಯಾಣಿಕರ ಸ್ಟೀಮರ್ ನೌಕೆಗಳೂ ಇಲ್ಲಿಗೆ ಬಂದು ಹೋಗುತ್ತಿದ್ದವು. ಉಡುಪಿಯಿಂದ ಮಂಗಳೂರಿಗೆ ತೆರಳಲು ಫೆರ್ರಿ ಮೂಲಕ ಜನರು ನದಿ ದಾಟುತ್ತಿದ್ದರು. ಹಾಗಾಗಿಯೇ ಬ್ರಿಟಿಷರ ಕಾಲದಲ್ಲೇ ಕಡಲ ನಕ್ಷೆಯಲ್ಲಿ ಮೂಲ್ಕಿ ಹಾಗೂ ಮಲ್ಪೆ ಇವೆರಡರ ಹೆಸರುಗಳಿದ್ದವು.
ಆದರೆ ಯಾವಾಗ ಶಾಂಭವಿ ನದಿಗೆ 1960ರಲ್ಲಿ ಸೇತುವೆ ನಿರ್ಮಾಣಗೊಂಡಿತೋ ಮೂಲ್ಕಿ ಬಂದರು ತನ್ನ ಮಹತ್ವ
ಕಳೆದುಕೊಂಡಿತು. ಈಗ ಇಲ್ಲಿ ಎರಡು ಸೇತುವೆಗಳಿರುವ ಕಾರಣ ಮೂಲ್ಕಿ ಶಾಶ್ವತವಾಗಿ ಬಂದರು ಸ್ಥಾನವನ್ನು ಕಳೆದುಕೊಂಡಂತಾಗಿದೆ. ಆದರೆ ನೌಕಾಪಡೆಯ ನೌಕೆಯಿಂದಾಗಿ ಈ ನೆನಪು ಮರುಕಳಿಸಿದಂತಾಗಿದೆ

ಸಾಮಾನ್ಯವಾಗಿ ಹಾಲಿ ಇರುವ ದೇಶ ಹೆಸರನ್ನೇ ಮತ್ತೆ ಹೊಸ ನೌಕೆಗಳಿಗೆ ಇರಿಸಲಾಗುತ್ತದೆ. ನೌಕಾಪಡೆಯಲ್ಲಿ 150ಕ್ಕೂ ಅಧಿಕ ಹಡಗುಗಳಿವೆ ಎನ್ನುತ್ತಾರೆ ಮೂಲ್ಕಿಯವರೇ ಆಗಿರುವ ನಿವೃತ್ತ ನೌಕಾಪಡೆ ವರೆಗೆ ಅಧಿಕಾರಿ ವೈಸ್ ಅಡ್ಮಿರಲ್ ಬಿ.ಆರ್.ರಾವ್.

ನೌಕಾಪಡೆ ನೌಕೆಗಳಿಗೆ ಸಾಮಾನ್ಯವಾಗಿ ನದಿಗಳ ಹೆಸರು(ಐಎನ್ಎಸ್ ಗಂಗಾ, ಐಎನ್ಎಸ್ ಬ್ರಹ್ಮಪುತ್ರ), ದ್ದವು. ನಗರಗಳ ಹೆಸರು(ಐಎನ್‌ಎಸ್ ಮೈಸೂರ್, ಐಎನ್‌ಎಸ್ ಯಲ್ಲಿ ಮುಂಬಯಿ), ಕೋಟೆ ಹೆಸರು(ಐಎನ್‌ಎಸ್ ಸಿಂಧುದುರ್ಗ) ಇತ್ಯಾದಿ ಇರಿಸಲಾಗುತ್ತದೆ. ಇದಕ್ಕೆಂದೇ ಒಂದು ಆಂತರಿಕ ಹಡಗು ನಾಮಕರಣ ಸಮಿತಿಯೇ ಇದೆ ಮಹತ್ವ ಎನ್ನುತ್ತಾರೆ ಅವರು.