
ಕೋಟ (ಬ್ರಹ್ಮಾವರ): ಕೋಟ ಅಮೃತೇಶ್ವರಿ ದೇವಸ್ಥಾನದ ವತಿಯಿಂದ ನಡೆಸಲ್ಪಡುವ ಅಮೃತೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ತಿರುಗಾಟದ ಕೊನೆಯ ಸೇವೆಯಾಟ ಶುಕ್ರವಾರ ನಡೆಯಿತು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆನಂದ ಸಿ. ಕುಂದರ್ ಅವರು ಮೇಳದ ಕಲಾವಿದರಿಗೆ ವಿಮಾ ಸೌಲಭ್ಯದ ಕಾರ್ಡ್ ಹಸ್ತಾಂತರಿಸಿದರು.
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಂ. ಶಿವ ಪೂಜಾರಿ, ಗಣೇಶ ನೆಲ್ಲಿಬೆಟ್ಟು, ಚಂದ್ರ ಆಚಾರ್, ಮೇಳದ ವ್ಯವಸ್ಥಾಪಕ ಕೋಟ ಸುರೇಶ, ಭಾಗವತ ಹಾಲಾಡಿ ರಾಘವೇಂದ್ರ ಮಯ್ಯ, ಕಲಾವಿದ ಜಗದೀಶ ಹೆಗಡೆ, ಮಾಧವ ನಾಗೂರು, ದೇವಸ್ಥಾನದ ವ್ಯವಸ್ಥಾಪಕ ಗಣೇಶ್ ಹೊಳ್ಳ ಭಾಗವಹಿಸಿದ್ದರು.