Join The Telegram | Join The WhatsApp |
ಬೆಳಗಾವಿ :
ನಗರದ ಕೆ ಎಲ್ ಇ ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿನಾಂಕ 06/ 12 /2022 ರಂದು ಬೆಳಿಗ್ಗೆ 10 ಗಂಟೆಗೆ ಸರ್ ಸಿ ವಿ ರಾಮನ್ ಸಭಾಂಗಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಅಂತರ್ ಶಾಲಾ ವಿಜ್ಞಾನ ವಸ್ತು ಪ್ರದರ್ಶನ ಸೈನ್ಸಿಯಾ ವೆನಾರಿ 3.0 ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಮಂಜಣ್ಣ ಅವರು ಭಾರತವು ಋಷಿಮುನಿಗಳಿಂದ ಇಂದಿನವರೆಗೂ ಸಂಶೋಧನೆಗಳ ನೆಲೆ ಯಾಗಿದೆ.ಆವಿಷ್ಕಾರಗಳ ಪ್ರಕ್ರಿಯೆ ನಿರಂತರವಾಗಿದೆ. ಭೂಮಿಯ ಮೇಲಿರುವ ಯಾವುದು ತ್ಯಾಜ್ಯವಾದುದಲ್ಲ. ಹೊಸ ತಂತ್ರಜ್ಞಾನದಿಂದ ತ್ಯಾಜ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಉತ್ತಮ ಪರಿಸರ. ಪೌಷ್ಟಿಕ ಆಹಾರ ಸೇವಿಸಿದರೆ ಉತ್ತಮ ಆರೋಗ್ಯ ಹೊಂದಬಹುದು. ವಿದ್ಯಾರ್ಥಿಗಳು ಹೊಸ ಹೊಸ ಆವಿಷ್ಕಾರಗಳು ಬಗ್ಗೆ ಚಿಂತನೆ ಮಂಥನ ಮಾಡಬೇಕು. ವಸ್ತುವಿನ ಅಳತೆ ಸಂರಚನೆ ಸಂವಾದ ಮಾಡಿ ಸಣ್ಣ ಯೋಜನೆಗಳನ್ನು ಪ್ರಾರಂಭಿಸಬೇಕು. ಇಂದಿನ ಯುವ ಜನಾಂಗ ಜ್ಞಾನ ಕ್ಷಿತಿಜವನ್ನು ಪಡೆದುಕೊಂಡು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ಬದ್ದರಾಗಬೇಕೆಂದು ಕರೆ ನೀಡಿದರು.
ಕರ್ನಾಟಕ ಸರ್ಕಾರ ಮಾಜಿ ಮುಖ್ಯ ಸಚೇತಕ ಮಹಾಂತೇಶ್ ಎಂ. ಕವಟಗಿಮಠ ಮಾತನಾಡಿ, 21ನೇ ಶತಮಾನದ ವೈಜ್ಞಾನಿಕ ಆವಿಷ್ಕಾರಗಳು ಸಮಾಜ ಪ್ರತಿಯೊಬ್ಬ ವ್ಯಕ್ತಿಗೆ ತಲುಪಬೇಕು. ವಿಜ್ಞಾನವು ಸಮಾಜಕ್ಕೆ ಬಳಕೆಯಾಗಬೇಕು. ಗ್ರಾಮೀಣ ಪ್ರದೇಶದ ಪ್ರತಿಭೆಗಳ ಆವಿಷ್ಕಾರ ಮತ್ತು ಸಾಧನೆಗಳನ್ನು ಅನಾವರಣ ಗೊಳಿಸುವುದಕ್ಕೆ ಕಾಲೇಜು ಅತ್ಯುತ್ತಮ ಒಂದು ವೇದಿಕೆ ಒದಗಿಸಿ ಕೊಟ್ಟಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಬದ್ಧತೆ, ಛಲಗಳಿಂದ ಸಾಧನೆಯಿಂದ ಮಾಡಿ ಮುಂದಿನ ಭವಿಷ್ಯ ಉಜ್ವಲವಾಗಬೇಕೆಂದು ನುಡಿದರು.
ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಸ್ತುಪ್ರದರ್ಶನ ಯೋಜನೆಗಳನ್ನು ವಿಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಆರ್ ಎಲ್ ಎಸ್ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಲ್.ವಿ. ದೇಸಾಯಿ ಮಾತನಾಡಿ, ವಿದ್ಯಾರ್ಥಿಗಳ ಯೋಜನಾ ಬದ್ಧವಾಗಿರಬೇಕು. ಆವಿಷ್ಕಾರಗಳ ಪ್ರಯೋಗಗಳು ಅವರು ಮನಸ್ಸಿನ ಮೇಲೆ ಪ್ರಭಾವ ಬೀರಬೇಕೆಂದು ಹೇಳಿದರು.
ಪದವಿ ಪ್ರಾಚಾರ್ಯ ಡಾ. ಜ್ಯೋತಿ ಕವಳೇಕರ , ಕೆ ಎಲ್ ಇ ಸಂಸ್ಥೆಯ ಅಜೀವ ಸದಸ್ಯ ಎಸ್. ಜಿ.ನಂಜಪ್ಪನವರ ಡಾ.ಸತೀಶ ಎಂ.ಪಿ , ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಡಾ. ಸಂದೀಪ ಜವಳಿ ಉಪಸ್ಥಿತರಿದ್ದರು. ಶ್ರೇಯಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಸಿ ಕಾಮಗೋಳ ಸ್ವಾಗತಿಸಿದರು. ಎಂ.ಎಲ್. ಪಾಟೀಲ ಪರಿಚಯಿಸಿದರು. ವರ್ಷಾ ಭದ್ರಿ ವಂದಿಸಿದರು. ಸೈಲಿ ಮನೇರಿಕರ ನಿರೂಪಿಸಿದರು. ಜಿಲ್ಲೆಯ ನೂರಕ್ಕೂ ಹೆಚ್ಚು ಪ್ರೌಢಶಾಲೆಗಳು ಆವಿಷ್ಕಾರ ಪ್ರಯೋಗಗಳು ಸಿದ್ಧಪಡಿಸಿಕೊಂಡು ಪ್ರಸ್ತುತ ಪಡಿಸಿದರು. ಬೆಳಗಾವಿ ನಗರದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸ್ತು ಪ್ರದರ್ಶನ ವೀಕ್ಷಿಸಿದರು. ಸಮಾರಂಭದಲ್ಲಿ ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಕಾರ್ಯಕ್ರಮ ಗೊಳಿಸಿದರು ಯಶಸ್ವಿಗೊಳಿಸಿದರು.
Join The Telegram | Join The WhatsApp |