ಬಾಗಲಕೋಟೆ :
ರಾಜ್ಯಸಭೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಲಾಗಿದ್ದು, ಮಾಜಿ ಸಚಿವ ಸೋಮಣ್ಣಗೆ ರಾಜ್ಯಸಭೆ ಟಿಕೆಟ್ ಕೈತಪ್ಪಿದೆ. ಅವರ ಬದಲು ಬಾಗಲಕೋಟೆಯ ನಾರಾಯಣ ನೀಡಲಾಗಿದೆ.

ಬಾಗಲಕೋಟೆ ನಾರಾಯಣ ಬಾಂಡಗೆ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಬಾಂಡಗೆ ಅವರಿಗೆ ಕುಟುಂಬಸ್ಥರು ಸಿಹಿ ತಿನ್ನಿಸಿ ಸಂಭ್ರಮಪಟ್ಟಿದ್ದಾರೆ. ಮನೆಯಲ್ಲಿ ಬಿಜೆಪಿ ಕೇಂದ್ರ ಹಾಗೂ ರಾಜ್ಯ ನಾಯಕರ ಪರ ಘೋಷಣೆ ಮಾಡಿ, ಮನೆಯ ಹೆಣ್ಣು ಮಕ್ಕಳು ವಿಕ್ಟರಿ ಸಿಂಬಾಲ್‌ ತೋರಿಸಿ ಸಂತಸಪಟ್ಟಿದ್ದಾರೆ.

ಈ ಕುರಿತು ಮಾತನಾಡಿದ ನಾರಾಯಣ ಭಾಂಡಗೆ, ‘ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ರಾಜ್ಯಸಭೆ ಟಿಕೆಟ್ ನೀಡಿದ್ದಕ್ಕೆ ಸಂತಸವಾಗಿದೆ. ಇಂತಹ ಕಾರ್ಯ ಕೇವಲ ಬಿಜೆಪಿ ಪಕ್ಷದಲ್ಲಿ ಮಾತ್ರ ಸಾಧ್ಯ. ನಾನು ಅಯೋದ್ಯಾ ರಾಮಮಂದಿರ ಹೋರಾಟದಲ್ಲಿ ಭಾಗಿಯಾಗಿ ಆಗ ಜೈಲು ಸೇರಿದೆ.

ಅಯೋಧ್ಯಾ ವಿವಾದಿತ ಕಟ್ಟಡ ಬೀಳೋದನ್ನು ಕಣ್ಣಾರೆ ಕಂಡವನು. ಈಗ ರಾಮಮಂದಿರ ನಿರ್ಮಾಣವಾಗಿ ರಾಮಲಲ್ಲಾನ ಪ್ರತಿಷ್ಟಾಪನೆ ಕೂಡ ಕಂಡವನು. ಇದೀಗ ನನಗೆ ಡಬಲ್‌ ಖುಷಿಯಾಗಿದೆ ಎಂದರು.

ನಾರಾಯಣಸಾ ಬಾಂಡಗೆ ಅವರು 1951 ನವೆಂಬರ್ 20 ರಂದು ಬಾಗಲಕೋಟೆಯಲ್ಲಿ ಜನಿಸಿದರು. ತಮ್ಮ 17ನೇ ವಯಸ್ಸಿನಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿ ಸಂಘ ಪರಿವಾರ ಸೇರಿದ್ದರು. ಖಟ್ಟರ್ ಆರ್ ಎಸ್ ಎಸ್ ಕಾರ್ಯಕರ್ತರಾದ ಇವರು, ಬಿಜೆಪಿಯಲ್ಲಿ ಸಕ್ರೀಯ ಮುಖಂಡರಾದರು. ಅಯೋಧ್ಯಾ ರಾಮಮಂದಿರ ಹೋರಾಟದಲ್ಲಿ ಭಾಗಿಯಾದ ಪ್ರಮುಖರಲ್ಲಿ ಇವರು ಕೂಡ ಒಬ್ಬರು. ಅಷ್ಟೇ ಅಲ್ಲ, ಕಾಶ್ಮೀರ ತಿರಂಗಾ ಹೋರಾಟದಲ್ಲಿ ಭಾಗಿ, ಗೋವಾ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ತೆಲಂಗಾಣ ಬಿಜೆಪಿ ಚುನಾವಣಾ ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸಿದರು.

ಆರ್‌ಎಸ್‌ಎಸ್‌ ಪ್ರಮುಖರ ಜೊತೆ ನಿಕಟ ಸಂಪರ್ಕ ಹೊಂದಿದ್ದ ಇವರು, ರಾಮಮಂದಿರ ಹೋರಾಟದಲ್ಲಿ ಭಾಗಿಯಾಗಿದ್ದಾಗ ಮಧ್ಯಪ್ರದೇಶದಲ್ಲಿ ಬಂಧನವಾಗಿದ್ದರು. ರಾಮಮಂದಿರ ಹೋರಾಟ, ಕಾಶ್ಮೀರ ತಿರಂಗಾ ಹೋರಾಟ ಸೇರಿದಂತೆ ಅನೇಕ ಹೋರಾಟದಲ್ಲಿ
ಮಧ್ಯಪ್ರದೇಶದಲ್ಲಿ ಬಂಧನವಾಗಿದ್ದರು. ರಾಮಮಂದಿರ ಹೋರಾಟ, ಕಾಶ್ಮೀರ ತಿರಂಗಾ ಹೋರಾಟ ಸೇರಿದಂತೆ ಅನೇಕ ಹೋರಾಟದಲ್ಲಿ ಭಾಗಿಯಾಗಿದ್ದ ಇವರು, ಬರೊಬ್ಬರಿ 10 ರಿಂದ 15 ಸಾರಿ ಜೈಲು ವಾಸ ಅನುಭವಿಸಿದ್ದಾರೆ. ಕಳೆದ 2010 ರಿಂದ 2016 ರವರೆಗೆ ಅವಧಿಯಲ್ಲಿ ಎಮ್‌ಎಲ್‌ಸಿ ಆಗಿ ಕರ್ತವ್ಯ ನಿರ್ವಹಿಸಿದ್ದರು. ವಾಜಪೇಯಿ ಅವರ ಅನುಯಾಯಿಯಾದ ಇವರು ವಾಜಪೇಯಿ ಭಾಷಣವನ್ನು ಉತ್ತರ ಕರ್ನಾಟಕದಲ್ಲಿ ಹಿಂದಿಯಿಂದ ಕನ್ನಡ ಅನುವಾದ
ಮಾಡುವಲ್ಲಿ ಯಶಸ್ವಿಯಾಗಿದ್ದರು.

ಬಾಗಲಕೋಟೆ ಜಿಲ್ಲಾ ಬಿಜೆಪಿ ಪ್ರಥಮ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಬಾಂಡಗೆ ಅವರು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾಗಿ ಎರಡು ಬಾರಿ ಆಯ್ಕೆಯಾಗಿದ್ದಾರೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ, ಬಾಗಲಕೋಟೆ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಅಧ್ಯಕ್ಷ, ಎಬಿವಿಪಿ ಬಾಗಲಕೋಟೆ ಶಾಖೆಯ ಪ್ರಾರಂಭಿಕ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕರ್ನಾಟಕ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ರಾಜ್ಯಾಧ್ಯಕ್ಷ ಹುದ್ದೆ ಅಲಂಕರಿಸಿದ್ದರು ಎನ್ನುವುದು ವಿಶೇಷ.