ಬೆಂಗಳೂರು: ಕನ್ನಡಿಗರ ಐಪಿಎಲ್ ಕ್ರಿಕೆಟ್ ತಂಡ ಎಂದೇ ಹೆಸರುವಾಸಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಐಪಿಎಲ್ ಕಪ್ ಎನ್ನುವುದು ಗಗನ ಕುಸುಮವಾಗಿದೆ. ಎಷ್ಟೇ ಪ್ರಸಿದ್ಧ ಆಟಗಾರರನ್ನು ಹೊಂದಿದ್ದರೂ ಸಹ ಬೆಂಗಳೂರು ತಂಡಕ್ಕೆ ಇದುವರೆಗೆ ಟ್ರೋಫಿ ಗೆಲ್ಲಲು ಸಾಧ್ಯವಾಗದೇ ಇರುವುದು ಕನ್ನಡಿಗರ ಬೇಸರಕ್ಕೆ ಕಾರಣವಾಗಿದೆ. ಪ್ರತಿಸಲವೂ ಈ ಸಲ ಕಪ್ ನಮ್ದೆ ಎಂಬ ಘೋಷವಾಕ್ಯ ಮೊಳಗುತ್ತದೆ. ಆದರೆ, ಅದು ಸಾಕಾರವಾಗದೆ ಇರುವುದು ಸೋಜಿಗವೇ ಸರಿ. ಇದೀಗ

ಸೌದಿ ಅರೇಬಿಯಾದ ಜಿದ್ದಾದಲ್ಲಿ
ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಮೊದಲ ದಿನದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಮಿಶ್ರಫಲವನ್ನು ಕಂಡಿದೆ. ಕೆಲವು ಪ್ರಮುಖ ಆಟಗಾರರನ್ನು ಖರೀದಿಸಲು ಆರ್‌ಸಿಬಿ ಆಸಕ್ತಿ ತೋರದಿರುವುದು ಅಭಿಮಾನಿಗಳಲ್ಲಿ ನಿರಾಸೆಗೆ ಕಾರಣವಾಗಿದೆ. ಇದರ ನಡುವೆಯೂ ಕೆಲವೊಂದು ಗಮನಾರ್ಹ ಖರೀದಿಗಳನ್ನು ಮಾಡುವಲ್ಲಿ ಯಶಸ್ವಿಯಾಗಿದೆ. ಈ ಆಟಗಾರರು ಈ ಸಲವಾದರೂ ಬೆಂಗಳೂರು ತಂಡಕ್ಕೆ ಟ್ರೋಫಿ ಗೆದ್ದು ಕೊಡುವಲ್ಲಿ ಯಾವ ರೀತಿ ಕೊಡುಗೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.

ಆರ್‌ಸಿಬಿ ಇಂದು ಅತಿ ಹೆಚ್ಚು ₹12.50 ನೀಡಿ ಜೋಶ್‌ ಹ್ಯಾಜಲ್‌ವುಡ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಹ್ಯಾಜಲ್‌ವುಡ್ ತವರು ತಂಡಕ್ಕೆ ಮರಳಲಿದ್ದಾರೆ.

ಮೆಗಾ ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡ‌ರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಸಕ್ತಿ ತೋರಲಿಲ್ಲ.

ಇದರ ಪರಿಣಾಮ ಮ್ಯಾಕ್ಸ್‌ವೆಲ್ ₹4.20 ಕೋಟಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ.

ಈ ಮೊದಲು ಮೊಹಮ್ಮದ್ ಸಿರಾಜ್ ಅವರನ್ನು ಖರೀದಿಸಲು ಆರ್‌ಸಿಬಿ ಮನಸ್ಸು ಮಾಡಿರಲಿಲ್ಲ. ಮೊಹಮ್ಮದ್ ಸಿರಾಜ್ ಅವರನ್ನು ಬರೋಬ್ಬರಿ ₹12.2ಕೋಟಿಗೆ ಗುಜರಾತ್ ಟೈಟನ್ಸ್ ಖರೀದಿಸಿದೆ.

ಮತ್ತೊಂದೆಡೆ ₹12.2ಕೋಟಿ ನೀಡಿ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಆರ್‌ಸಿಬಿ ಖರೀದಿಸಿದೆ.

2022ರ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದ ಜಿತೇಶ್​ಗೆ ಅದೇ ಚೊಚ್ಚಲ ಆವೃತ್ತಿಯಾಗಿತ್ತು. ಕಳೆದ ಎರಡು ಆವೃತ್ತಿಗಳಲ್ಲಿ ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದ್ದ ಜಿತೇಶ್​ರನ್ನು ಆರ್​ಸಿಬಿ 11 ಕೋಟಿ ನೀಡಿ ಖರೀದಿಸಿದೆ.
2025 ರ ಮೆಗಾ ಹರಾಜಿಗೆ 1 ಕೋಟಿ ಮೂಲ ಬೆಲೆಯೊಂದಿಗೆ ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದ ಟೀಂ ಇಂಡಿಯಾದ ವಿಕೆಟ್​ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆದಿದ್ದ ಜಿತೇಶ್, ತಮ್ಮ ಚೊಚ್ಚಲ ಆವೃತ್ತಿಯಲ್ಲಿ ಆಡಿದ್ದ 12 ಪಂದ್ಯಗಳಲ್ಲಿ 164 ರ ಸ್ಟ್ರೈಕ್ ರೇಟ್‌ನಲ್ಲಿ 234 ರನ್ ಕಲೆಹಾಕಿದ್ದರು. ಹಾಗೆಯೇ 2023 ರ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್‌ ಪರ ಎಲ್ಲಾ 14 ಪಂದ್ಯಗಳನ್ನು ಆಡಿದ್ದ ಅವರು 155 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 309 ರನ್ ಗಳಿಸಿದ್ದರು. ಇದುವರೆಗೆ ಜಿತೇಶ್ ಟೀಂ ಇಂಡಿಯಾ ಪರ 9 ಪಂದ್ಯಗಳನ್ನು ಆಡಿದ್ದಾರೆ.
ಐಪಿಎಲ್‌ನಲ್ಲಿನಲ್ಲಿ ಆಡಿದ್ದ ಎರಡು ಆವೃತ್ತಿಗಳಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ಜಿತೇಶ್​ಗೆ 2023ರಲ್ಲಿ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. ಇದುವರೆಗೆ ಜಿತೇಶ್ ಟೀಂ ಇಂಡಿಯಾ ಪರ 9 ಪಂದ್ಯಗಳನ್ನು ಆಡಿದ್ದಾರೆ. ಈ ಬಾರಿಯ ಮೆಗಾ ಹರಾಜಿನಲ್ಲಿ ಜಿತೇಶ್ ಶರ್ಮಾ ಅವರನ್ನು ಖರೀದಿಸಲು ಲಕ್ನೋ, ಸಿಎಸ್​ಕೆ, ಡೆಲ್ಲಿ ಕ್ಯಾಪಿಟಲ್ಸ್ ಸೇರಿದಂತೆ ಇತರ ಫ್ರಾಂಚೈಸಿಗಳು ಮುಗಳಿ ಬಿದ್ದವು. ಆದರೆ ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಿತೇಶ್ ಶರ್ಮಾ ಅವರನ್ನು 11 ಕೋಟಿಗೆ ಖರೀದಿಸಿತು.

ಎರಡು ದಿನಗಳ ಕಾಲ ನಡೆಯುತ್ತಿರುವ ಮೆಗಾ ಹರಾಜಿನ ಮೊದಲ ದಿನದ ಆರ್‌ಸಿಬಿ ಫ್ರಾಂಚೈಸಿ ಖರೀದಿಸಿದ ಆಟಗಾರರ ಪಟ್ಟಿ ಇಲ್ಲಿದೆ.

ಜೋಶ್ ಹ್ಯಾಜಲ್‌ವುಡ್

ಖರೀದಿ ಮೊತ್ತ: ₹12.50 ಕೋಟಿ

ಫಿಲ್ ಸಾಲ್ಟ್

ಖರೀದಿ ಮೊತ್ತ: ₹11.50 ಕೋಟಿ

ಜಿತೇಶ್ ಶರ್ಮಾ

ಖರೀದಿ ಮೊತ್ತ: ₹11 ಕೋಟಿ

ಲಿಯಾಮ್ ಲಿವಿಂಗ್‌ಸ್ಟೋನ್‌

ಖರೀದಿ ಮೊತ್ತ: ₹8.75 ಕೋಟಿ