ನವದೆಹಲಿ: ಬಾಂಗ್ಲಾದೇಶವು ಆ ದೇಶದ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಇಸ್ಕಾನ್ ಅನ್ನು “ಧಾರ್ಮಿಕ ಮೂಲಭೂತವಾದಿ” ಸಂಘಟನೆ ಎಂದು ಕರೆದಿದೆ. ಆಗಸ್ಟ್‌ನ ವಿದ್ಯಾರ್ಥಿಗಳ ನೇತೃತ್ವದ ದಂಗೆ ಆಗಿನ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಅಧಿಕಾರದಲ್ಲಿರುವ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ “ಇಸ್ಕಾನ್ ಬಗ್ಗೆ ಪರಿಶೀಲನೆ ನಡೆಸುತ್ತಿದೆ ” ಎಂದು ಹೇಳಿದರು.

ಇದು ಸೋಮವಾರದಂದು ಹಿಂದೂ ಸ್ವಾಮೀಜಿ ಚಿನ್ಮಯ ಕೃಷ್ಣ ದಾಸ ಬ್ರಹ್ಮಚಾರಿಯ ಬಂಧನದ ವಿರುದ್ಧ ನಡೆದ ಬೃಹತ್‌ ಪ್ರತಿಭಟನೆಗಳ ನಡೆದ ನಂತರ ಸರ್ಕಾರದಿಂದ ಕೋರ್ಟ್‌ನಲ್ಲಿ ಈ ಹೇಳಿಕೆ ಬಂದಿದೆ. ದೇಶದಲ್ಲಿ ಹಿಂದೂ ಸಮುದಾಯದ ಮೇಲಿನ ದಾಳಿಗಳು ತೀವ್ರಗೊಂಡ ನಂತರ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ಅನ್ನು ನಿಷೇಧಿಸುವಂತೆ ಕೋರಿ ಬಾಂಗ್ಲಾದೇಶದ ಹೈಕೋರ್ಟ್‌ನಲ್ಲಿ ಐಎ ಅರ್ಜಿ ಸಲ್ಲಿಸಲಾಗಿದೆ. ಪ್ರತಿಭಟನೆಗಳು ತೀವ್ರಗೊಂಡಿದ್ದರಿಂದ ಯಾವುದೇ ಅಹಿತಕರ ಪರಿಸ್ಥಿತಿಯನ್ನು ತಪ್ಪಿಸಲು ಚಿತ್ತಗಾಂಗ್ ಮತ್ತು ರಂಗಪುರದಲ್ಲಿ ತುರ್ತು ಪರಿಸ್ಥಿತಿ ಹೇರಲು ನಿರ್ದೇಶನ ನೀಡಬೇಕು ಎಂದು ಕೋರ್ಟಿಗೆ ಸಲ್ಲಿಸಿದ ಅರ್ಜಿಯಲ್ಲಿ ಕೋರಲಾಗಿದೆ. ನ್ಯಾಯಾಲಯವು ಈ ವಿಷಯದ ಬಗ್ಗೆ ಸರ್ಕಾರದಿಂದ ಪ್ರತಿಕ್ರಿಯೆ ಕೋರಿತು.

ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಉತ್ತರಕ್ಕೆ 300 ಕಿಮೀ ದೂರದಲ್ಲಿರುವ ರಂಗಪುರ ನಗರದಲ್ಲಿ ಹಿಂದೂ ಸಮುದಾಯವು ತಮ್ಮನ್ನು ರಕ್ಷಿಸಲು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ರಕ್ಷಿಸಲು ಬಲವಾದ ಕಾನೂನುಗಳನ್ನು ಒತ್ತಾಯಿಸಿ ಪ್ರತಿಭಟಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಬಾಂಗ್ಲಾದೇಶದ 17 ಕೋಟಿ ಜನಸಂಖ್ಯೆಯಲ್ಲಿ ಜನರಲ್ಲಿ ಹಿಂದೂಗಳು ಎಂಟು ಪ್ರತಿಶತ ಇದ್ದಾರೆ.
ಶೇಖ್ ಹಸೀನಾ ಅವರು ಅಧಿಕಾರ ತ್ಯಜಿಸಿ ದೇಶದಿಂದ ಪಲಾಯನ ಮಾಡಿದ ನಂತರ ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನಸ್ ನೇತೃತ್ವದ ಮಿಲಿಟರಿ ಬೆಂಬಲಿತ ಮಧ್ಯಂತರ ಸರ್ಕಾರವು ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರವನ್ನು ನಿಯಂತ್ರಿಸಲು ವಿಫಲವಾಗಿದೆ ಎಂಬ ಟೀಕೆಗಳನ್ನು ಎದುರಿಸುತ್ತಿದೆ.

ಇಸ್ಕಾನ್‌ (ISKON) ಅನ್ನು “ಧಾರ್ಮಿಕ ಮೂಲಭೂತವಾದಿ” ಸಂಘಟನೆ ಎಂದು ಉಲ್ಲೇಖಿಸಿರುವುದು ಬಾಂಗ್ಲಾದೇಶದಲ್ಲಿ ಇಸ್ಕಾನ್‌ ಮೂಲದ ಪ್ರಶ್ನೆಗೆ ಬಾಂಗ್ಲಾದೇಶದ ಅಟಾರ್ನಿ ಜನರಲ್ ಅವರ ಪ್ರತಿಕ್ರಿಯೆಯ ಭಾಗವಾಗಿದೆ.
ವರದಿಯ ಪ್ರಕಾರ, ಅಟಾರ್ನಿ ಜನರಲ್ ಮೊಹಮ್ಮದ್. ಅಸಾದುಝಾಮಾನ್ ತಮ್ಮ ಪ್ರತಿಕ್ರಿಯೆಯಲ್ಲಿ,”… ಇಸ್ಕಾನ್‌ ಧಾರ್ಮಿಕ ಮೂಲಭೂತವಾದಿ ಸಂಘಟನೆಯಾಗಿದೆ. ಸರ್ಕಾರವು ಈಗಾಗಲೇ ಅವುಗಳ ಬಗ್ಗೆ ಪರಿಶೀಲಿಸುತ್ತಿದೆ” ಎಂದು ಹೇಳಿದ್ದಾರೆ. ಇಸ್ಕಾನ್‌ (ISKON) ಬಗ್ಗೆ ಅಧಿಕಾರಿಗಳ ಪ್ರತಿಕ್ರಿಯೆ ಮತ್ತು ದೇಶದಲ್ಲಿ ಚಾಲ್ತಿಯಲ್ಲಿರುವ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಟಿಪ್ಪಣಿ ಸಲ್ಲಿಸಲು ಸರ್ಕಾರಕ್ಕೆ ತಿಳಿಸಲಾಯಿತು.

ಇಸ್ಕಾನ್‌ ಸ್ವಾಮೀಜಿ ಚಿನ್ಮಯ ಬ್ರಹ್ಮಚಾರಿಯ ಬಂಧನದ ನಂತರ ಬಾಂಗ್ಲಾದೇಶದಲ್ಲಿ ಮತ್ತೆ ಉಗ್ರ ಮತ್ತು ಹಿಂಸಾತ್ಮಕ ಪ್ರತಿಭಟನೆಗಳು ನಡೆದವು. ಬುಧವಾರ ಬೆಳಿಗ್ಗೆ ಚಟ್ಟೋಗ್ರಾಮದ ದೇವಸ್ಥಾನಕ್ಕೆ ಹಾನಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇಸ್ಕಾನ್ ವಕ್ತಾರರಾದ ರಾಧಾರಾಮ ದಾಸ್ ಅವರು X ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, “ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಹಿಂದೂ ಪೂಜಾ ಸ್ಥಳಗಳ ಮೇಲೆ 24×7 ದಾಳಿ ನಡೆಯುತ್ತಿದೆ. ಇದೆಲ್ಲ ಯಾವಾಗ ನಿಲ್ಲುತ್ತದೆ?” ಎಂದು ಬರೆದಿದ್ದಾರೆ, ಇಸ್ಕಾನ್‌ನ ಬಾಂಗ್ಲಾದೇಶ ಘಟಕವು ಹಿಂದೂ ಸಮುದಾಯದ ಸದಸ್ಯರ ಬಂಧನ ಮತ್ತು ಹಿಂಸಾಚಾರವನ್ನು ಖಂಡಿಸಿದೆ. ಈ ಬಂಧನವು ಭಾರತ ಮತ್ತು ಬಾಂಗ್ಲಾದೇಶದ ನಡುವೆ ರಾಜಕೀಯ ಘರ್ಷಣೆಗೆ ಕಾರಣವಾಗಿದೆ.

ಚಿನ್ಮಯ ಬ್ರಹ್ಮಚಾರಿ ಬಂಧನದ ಬಗ್ಗೆ ದೆಹಲಿ ಬಲವಾದ ಖಂಡನೆಯನ್ನು ವ್ಯಕ್ತಪಡಿಸಿದೆ ಮತ್ತು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಿ ಎಂದು ಬಾಂಗ್ಲಾದೇಶದ ಸರ್ಕಾರವನ್ನು ಒತ್ತಾಯಿಸಿದೆ. ಇದನ್ನು ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯವು ತನ್ನ “ಆಂತರಿಕ ವ್ಯವಹಾರಗಳಲ್ಲಿ” ಭಾರತದ ಹಸ್ತಕ್ಷೇಪ ಎಂದು ಎಂದು ಹೇಳಿದೆ. ಆದರೆ ನಂತರ ಯೂನಸ್ ಸರ್ಕಾರವು ನಂತರ “ಪ್ರಬಲ ಪದಗಳಲ್ಲಿ” ಪ್ರತಿ ಬಾಂಗ್ಲಾದೇಶಿ, ಅವರ ಧಾರ್ಮಿಕ ಗುರುತನ್ನು ಲೆಕ್ಕಿಸದೆ, “ಸಂಬಂಧಿತ ಧಾರ್ಮಿಕ ಆಚರಣೆಗಳನ್ನು ನಿರ್ವಹಿಸುವ ಅಥವಾ ಅಡೆತಡೆಯಿಲ್ಲದೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು ಹೊಂದಿದೆ” ಎಂದು ಪುನರುಚ್ಚರಿಸಿತು.