ಗಾಜಾದ ದಕ್ಷಿಣ ಪ್ರದೇಶವಾದ ಖಾನ್ ಯೂನಿಸ್‌ನಲ್ಲಿ ಕಳೆದ ತಿಂಗಳು ನಡೆಸಿದ ದಾಳಿಯಲ್ಲಿ ಹಮಾಸ್ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ಡೀಫ್ ಕೊಲ್ಲಲ್ಪಟ್ಟಿದ್ದಾನೆ ಎಂದು ಇಸ್ರೇಲಿ ಸೇನೆ ಗುರುವಾರ ಘೋಷಣೆ ಮಾಡಿದೆ.

ಟೆಹ್ರಾನ್‌ನಲ್ಲಿ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಹತ್ಯೆಯಾಗಿದ್ದಾರೆ ಎಂದು ಇರಾನ್ ರೆವುಲ್ಯಶನರಿ ಗಾರ್ಡ್‌ಗಳು ಮತ್ತು ಹಮಾಸ್‌ ಪ್ರಕಟಿಸಿದ ಒಂದು ದಿನದ ನಂತರ ತಾನು ಹಮಾಸ್ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ಡೀಫ್‌ನನ್ನು ಕೊಂದಿರುವುದಾಗಿ ಸೇನೆಯ ದೃಢೀಕರಣ ಬಂದಿದೆ.
“ಜುಲೈ 13, 2024 ರಂದು IDF ಫೈಟರ್ ಜೆಟ್‌ಗಳು ಖಾನ್ ಯೂನಿಸ್ ಪ್ರದೇಶದಲ್ಲಿ ಮೊಹಮ್ಮದ್ ಡೀಫ್‌ನನ್ನು ಹೊಡೆದುರುಳಿಸಿವೆ ಎಂದು ಐಡಿಎಫ್‌ (IDF) ಘೋಷಿಸಿತು ಮತ್ತು ಗುಪ್ತಚರ ಮೌಲ್ಯಮಾಪನದ ನಂತರ, ಮುಹಮ್ಮದ್ ಡೀಫ್ ಅನ್ನು ದಾಳಿ ಮೂಲಕ ತೆಗೆದುಹಾಕಲಾಯಿತು ಎಂದು ದೃಢೀಕರಿಸಬಹುದು” ಎಂದು ಇಸ್ರೇಲಿ ಮಿಲಿಟರಿ ಹೇಳಿಕೆ ತಿಳಿಸಿದೆ. .

ಅಧಿಕೃತ ಇಸ್ರೇಲಿ ಅಂಕಿಅಂಶಗಳ ಆಧಾರದ ಮೇಲೆ ಎಎಫ್‌ಪಿ (AFP) ಲೆಕ್ಕಾಚಾರದ ಪ್ರಕಾರ, 1197 ಜನರ ಸಾವಿಗೆ ಕಾರಣವಾದ ದಕ್ಷಿಣ ಇಸ್ರೇಲ್‌ನ ಮೇಲೆ ಹಮಾಸ್ ದಾಳಿಯ ನೇತೃತ್ವ ವಹಿಸಿದ್ದು, “ಡೀಫ್ ಅಕ್ಟೋಬರ್ 7 ರ ಹತ್ಯಾಕಾಂಡ ಯೋಜಿಸಿದ, ಪ್ರಾರಂಭಿಸಿದ ಮತ್ತು ಕಾರ್ಯಗತಗೊಳಿಸಿದ ” ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
ಜುಲೈ 13 ರ ಇಸ್ರೇಲಿ ದಾಳಿಯ ಸಮಯದಲ್ಲಿ 90 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು ಎಂದು ಹಮಾಸ್ ಆಡಳಿತದ ಗಾಜಾದ ಆರೋಗ್ಯ ಅಧಿಕಾರಿಗಳು ಎಂದು ಹೇಳಿದ್ದರು. ಆದರೆ ಹಮಾಸ್ ಅವರಲ್ಲಿ ಡೀಫ್ ಇದ್ದಾನೆ ಎಂದು ಎಂಬುದನ್ನು ನಿರಾಕರಿಸಿತ್ತು.
ಶಂಕಿತ 2,000-ಪೌಂಡ್ ಬಾಂಬ್ (900 ಕಿಲೋಗ್ರಾಂಗಳಷ್ಟು ತೂಕ) ಹಮಾಸ್ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ಡೀಫ್ ತನ್ನ ಪ್ರತಿನಿಧಿಗಳೊಂದಿಗೆ ಆಶ್ರಯ ಪಡೆದಿದ್ದಾನೆಂದು ಹೇಳಲಾದ ಮನೆಯ ಸುತ್ತಲೂ ದೈತ್ಯ ಕುಳಿಯನ್ನು ಬಿಟ್ಟಿದೆ.

ಹಮಾಸ್‌ನ ಸಶಸ್ತ್ರ ವಿಭಾಗವಾದ ಎಝೆಡಿನ್ ಅಲ್-ಕಸ್ಸಾಮ್ ಬ್ರಿಗೇಡ್‌ನ ಮುಖ್ಯಸ್ಥ ಡೀಫ್ ಸುಮಾರು ಮೂರು ದಶಕಗಳಿಂದ ಇಸ್ರೇಲ್‌ನ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿದ್ದ. 2015 ರಿಂದ ಅಮೆರಿಕದ “ಅಂತಾರಾಷ್ಟ್ರೀಯ ಭಯೋತ್ಪಾದಕರ” ಪಟ್ಟಿಯಲ್ಲಿದ್ದ. ಡೀಫ್ ಇಸ್ರೇಲ್ ವಿರುದ್ಧ ಹಲವಾರು ದಾಳಿಗಳನ್ನು ನಡೆಸಿದ್ದಾನೆ ಎಂದು ಮಿಲಿಟರಿ ಹೇಳಿದೆ. ಡೀಫ್ ಗಾಜಾದಲ್ಲಿ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ನೊಂದಿಗೆ ಸೇರಿ ಕಾರ್ಯಾಚರಣೆ ನಡೆಸುತ್ತಿದ್ದ ಎಂದು ಸೇನೆ ತಿಳಿಸಿದೆ.

“ಯುದ್ಧದ ಸಮಯದಲ್ಲಿ, ಆತ ಹಮಾಸ್‌ನ ಮಿಲಿಟರಿ ವಿಭಾಗದ ಹಿರಿಯ ಸದಸ್ಯರಿಗೆ ಆಜ್ಞೆಗಳು ಮತ್ತು ಸೂಚನೆಗಳನ್ನು ನೀಡುವ ಮೂಲಕ ಗಾಜಾ ಪಟ್ಟಿಯಲ್ಲಿ ಹಮಾಸ್‌ನ ಭಯೋತ್ಪಾದಕ ಚಟುವಟಿಕೆಯನ್ನು ಆಜ್ಞಾಪಿಸುತ್ತಿದ್ದ” ಎಂದು ಅದು ಹೇಳಿದೆ.
ಹಮಾಸ್ ದಾಳಿಯ ಸಮಯದಲ್ಲಿ ಉಗ್ರಗಾಮಿಗಳು 251 ಜನರನ್ನುಒತ್ತೆಯಾಳಾಗಿಸಿ ಗಾಜಾಕ್ಕೆ ಒಯ್ದರು. 111 ಜನರು ಇನ್ನೂ ಗಾಜಾದಲ್ಲಿ ಸೆರೆಯಲ್ಲಿದ್ದಾರೆ, ಇದರಲ್ಲಿ 39 ಮಂದಿ ಸತ್ತಿದ್ದಾರೆ ಎಂದು ಮಿಲಿಟರಿ ಹೇಳಿದೆ.
ಅಂದಿನಿಂದ ಇಸ್ರೇಲ್‌ನ ಪ್ರತೀಕಾರದ ಮಿಲಿಟರಿ ಕಾರ್ಯಾಚರಣೆಯು 39,480 ಜನರನ್ನು ಕೊಂದಿದೆ ಎಂದು ಹಮಾಸ್ ನಡೆಸುತ್ತಿರುವ ಗಾಜಾದಲ್ಲಿನ ಆರೋಗ್ಯ ಸಚಿವಾಲಯ ಹೇಳಿದೆ. ಇದು ನಾಗರಿಕರು ಮತ್ತು ಉಗ್ರಗಾಮಿಗಳ ಸಾವಿನ ವಿವರಗಳನ್ನು ನೀಡಿಲ್ಲ.