Join The Telegram | Join The WhatsApp |
ಬೆಳಗಾವಿಯ ಬಸವನಕೊಳ್ಳದಲ್ಲಿ ಅತ್ಯಂತ ಕನಿಷ್ಠ 8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಬೆಳಗಾವಿ :
ಇದೀಗ ಕೆಲವು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕ ಚಳಿಯಿಂದ ಜನ ಕಂಗೆಟ್ಟಿದ್ದಾರೆ. ಚಳಿಯ ವಿಕೋಪದಿಂದ ಜನ ಈಗ ಮನೆಯಿಂದ ಹೊರ ಬರಲು ಹಿಂಜರಿಯುವಂತಾಗಿದೆ.
ಬೆಳಗಾವಿ ಚಳಿಗಾಲದ ರಾಜಧಾನಿ ಎಂದೇ ಖ್ಯಾತಿ ಪಡೆದುಕೊಂಡಿದೆ. ಮುಂದಿನ ತಿಂಗಳು ಬೆಳಗಾವಿಯಲ್ಲಿ ವಿಧಾನ ಮಂಡಳದ ವಿಶೇಷ ಅಧಿವೇಶನ ಸೇರಲಿದೆ. ಆ ಹೊತ್ತಿಗೆ ಚಳಿಯ ಪ್ರಮಾಣ ಇನ್ನೂ ಹೆಚ್ಚುವ ಆತಂಕ ಇದೆ.
ಬೆಳಗಾವಿ ಜಿಲ್ಲೆ ಸೇರಿದಂತೆ ಇಡೀ ಉತ್ತರ ಕರ್ನಾಟಕದಲ್ಲಿ ಇದೀಗ ಚಳಿಯಿಂದ ಜನ ಮನೆಯಿಂದ ಹೊರ ಬರಲು ಉದಾಸೀನತೆ ಪಡುವಂತಾಗಿದೆ.
ಫೆಬ್ರವರಿವರೆಗೂ ಚಳಿಯಿಂದ ಹೇಗೆ ಪಾರಾಗುವುದು ಎಂದು ಜನ ಯೋಚಿಸುತ್ತಿದ್ದಾರೆ.
Join The Telegram | Join The WhatsApp |