ಬೆಳಗಾವಿ : ಶಿಕ್ಷಣ ಕ್ಷೇತ್ರದಿಂದ ಹೊರತಾಗಿರುವವರನ್ನು ವಿಶ್ವವಿದ್ಯಾಲಯಗಳ ಕುಲಪತಿಗಳನ್ನಾಗಿ ಮಾಡುವ ಅಪಾಯಕಾರಿ ನಿಯಮವನ್ನು ಯುಜಿಸಿಯು ರೂಪಿಸಿದೆ. ಯುಜಿಸಿ ರೂಪಿಸಿರುವ ಹೊಸ ಕರಡು ನಿಯಮಗಳ ಪ್ರಕಾರ, ಉದ್ಯಮ, ಸಾರ್ವಜನಿಕ ಆಡಳಿತ, ನೀತಿ ನಿರೂಪಣೆ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಅಧಿಕಾರಿ ಹುದ್ದೆಯಲ್ಲಿ ಕನಿಷ್ಠ 10 ವರ್ಷ ಅನುಭವದ ಜೊತೆಗೆ ಶೈಕ್ಷಣಿಕವಾಗಿ ಮಹತ್ವದ ಕೊಡುಗೆ ನೀಡಿದವರನ್ನು ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ಮಾಡಬಹುದು ಎಂದು ಹೇಳಲಾಗಿದೆ. ವಿಶ್ವವಿದ್ಯಾಲಯಗಳ ಸ್ವಾಯತ್ತತೆ ಮತ್ತು ಪ್ರಜಾತಾಂತ್ರಿಕ ಹಕ್ಕನ್ನು ಕಸಿದು ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದೊಂದಿಗೆ ಸಂಬಂಧ ಹೊಂದಿರದ, ಕೇವಲ ಲಾಭ ನಷ್ಟದ ಲೆಕ್ಕಾಚಾರ ಮಾಡಬಲ್ಲ ಉದ್ಯಮಿಗಳು, ಅಧಿಕಾರಗಳು ಮತ್ತು ಸರ್ಕಾರದ ಹೌದಪ್ಪಗಳ ಕೈಯಲ್ಲಿ ವಿಶ್ವವಿದ್ಯಾಲಯದ ಆಡಳಿತವನ್ನು ಒಪ್ಪಿಸುವ ಹುನ್ನಾರ ಇದಾಗಿದೆ. ಸರ್ಕಾರದ ಈ ಅಪ್ರಜಾತಾಂತ್ರಿಕ ಮತ್ತು ಕಡು ಶಿಕ್ಷಣ ವಿರೋಧಿ ನಡೆಯನ್ನು ಎಐಡಿಎಸ್ಓ ತೀವ್ರವಾಗಿ ಖಂಡಿಸುತ್ತದೆ.
ಎಂ.ಇ ಅಥವಾ ಎಂ.ಟೆಕ್ ನಲ್ಲಿ ಕನಿಷ್ಠ ಶೇಕಡಾ 55 ಅಂಕ ಪಡೆದವರಿಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಿಂದ ವಿನಾಯಿತಿ ನೀಡಿ ನೇರವಾಗಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇಮಕ ಮಾಡುವ ನಿಯಮವನ್ನು ಕರಡಿನಲ್ಲಿ ಸೂಚಿಸಲಾಗಿದೆ.
ಯುಜಿಯು ಕೂಡಲೇ ಈ ಅಪ್ರಜಾತಾಂತ್ರಿಕ ಕರಡನ್ನು ಹಿಂಪಡೆಯಬೇಕು ಮತ್ತು ಪ್ರಾಧ್ಯಾಪಕ ಹುದ್ದೆಯ ಕನಿಷ್ಠ 10 ವರ್ಷಗಳ ಅನುಭವ ಹಾಗೂ ಆಡಳಿತಾತ್ಮಕ ಹುದ್ದೆಯ ಅನುಭವದ ಆಧಾರದ ಈಗಿನ ಮಾನದಂಡವನ್ನೇ ಮುಂದುವರಿಸಬೇಕೆಂದು ಎಐಡಿಎಸ್ಓ ಆಗ್ರಹ ವ್ಯಕ್ತಪಡಿಸುತ್ತದೆ ಎಂದು ಸಂಘಟನೆ ಜಿಲ್ಲಾ ಅಧ್ಯಕ್ಷ
ಮಹಾಂತೇಶ ಬಿಳೂರ
ಒತ್ತಾಯಿಸಿದ್ದಾರೆ.