ಮಾರಣಕಟ್ಟೆ :
ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಮಕರ ಸಂಕ್ರಮಣ ಉತ್ಸವ ಜನವರಿ 15ರಿಂದ ಜನವರಿ 17ರ ತನಕ ನಡೆಯಲಿದೆ. ಜನವರಿ 15 ಸೋಮವಾರ ಪೂರ್ವಾಹ್ನ 9 ಘಂಟೆಗೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಹಾಮಂಗಳಾರತಿ, ರಾತ್ರಿ ಘಂಟೆ 10 30 ಕ್ಕೆ ಗೆಂಡಸೇವೆ ನಡೆಯಲಿದೆ.

ಜನವರಿ 16ರಂದು ಮಂಗಳವಾರ ಪೂರ್ವಾಹ್ನ ಘಂಟೆ 9.30ಕ್ಕೆ ಮಹಾಮಂಗಳಾರತಿ, ನಂತರ ಮಂಡಲ ಸೇವೆ ನಡೆಯಲಿದೆ. ಜನವರಿ 1 ಬುಧವಾರ ಪೂರ್ವಾಹ್ನ 9.30ಕ್ಕೆ ಮಹಾಮಂಗಳಾರತಿ, ನಂತರ ಮಂಡಲ ಸೇವೆ, ರಾತ್ರಿ ಘಂಟೆ 8ಕ್ಕೆ ಕಡಬು ನೈವೇದ್ಯ, ಮಹಾಮಂಗಳಾರತಿ, ರಾತ್ರಿ ಮಾರಣಕಟ್ಟೆ – ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮೇಳದವರಿಂದ ಯಕ್ಷಗಾನ ಸೇವೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.