
ಬೆಳಗಾವಿ: ಲೋಕಸಭಾ ಸದಸ್ಯ ಹಾಗೂ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಬೆಳಗಾವಿ ಜಿಲ್ಲಾಧಿಕಾರಿ ರೋಶನ್ ಅಹಮದ್ ಅವರ ಉಪಸ್ಥಿತಿಯಲ್ಲಿ ನೈರುತ್ಯ ವಲಯ ರೇಲ್ವೆ ಅಭಿಯಂತರರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ವಿಮಾನಯಾನ, ಪ್ರವಾಸೋದ್ಯಮ, ಕೆ.ಎ.ಐ.ಡಿ.ಬಿ ಅಧಿಕಾರಿಗಳ ಸಭೆಯನ್ನು ನಡೆಸಿ, ಆಯಾ ಇಲಾಖೆಯಡಿ ನಡೆದ ಅಭಿವೃದ್ಧಿ ಪರ ಕಾಮಗಾರಿಗಳ ಪ್ರಗತಿಯ ಬಗ್ಗೆ ಚರ್ಚೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಯ ಬೆಳಗಾವಿ ನಗರದಲ್ಲಿ ರಿಂಗ್ ರಸ್ತೆ / ಬೈಪಾಸ್ ರಸ್ತೆ ನಿರ್ಮಾಣದ ಅಂಗವಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡು ಭೂಸ್ವಾಧೀನ ಕೆಲಸವನ್ನು ಶೀಘ್ರ ಪೂರ್ಣಗೊಳಿಸಿ, ರಸ್ತೆ ಕಾಮಗಾರಿ ಪ್ರಾರಂಭಕ್ಕೆ ಅನುವುಮಾಡಿ ಕೊಡುವ ಕುರಿತು ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.
ನೈರುತ್ಯ ರೇಲ್ವೆ ವಲಯಕ್ಕೆ ಸಂಬಂಧಿಸಿದಂತೆ, ಬೆಳಗಾವಿ-ಕಿತ್ತೂರ-ಧಾರವಾಡ ಮಾರ್ಗದಲ್ಲಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಅಗತ್ಯವೆನಿಸಿರುವ ಭೂಸ್ವಾಧೀನ ಪ್ರಕ್ರಿಯೆಯ ಬಗ್ಗೆ ಭೂಸ್ವಾಧೀನ ಅಧಿಕಾರಿಗಳಿಂದ ಪ್ರಾಥಮಿಕ ಮಾಹಿತಿಯನ್ನು ಪಡೆದುಕೊಂಡು ಮುಂಬರುವ ದಿನಗಳಲ್ಲಿ ಈ ಕಾರ್ಯವನ್ನು ಶೀಘ್ರವಾಗಿ ಮುಗಿಸಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಅನಕೂಲತೆ ಕಲ್ಪಿಸಲು ಸಂಸದ ಶೆಟ್ಟರ ಅವರು ಸೂಚಿಸಿದರು
ರೇಲ್ವೆ ಲೆವೆಲ್ ಕ್ರಾಸಿಂಗ್ ನಂ:371, 380, 381, 382, 383, 392 ಮತ್ತು 407 ಹತ್ತಿರ ರಸ್ತೆ ಮೇಲುಸೇತುವೆ ನಿರ್ಮಾಣಕ್ಕೆ ಕೇಂದ್ರ ಸರಕಾರದಿಂದ ಅನುಮತಿ ಇದ್ದು, ಕೂಡಲೆ ಅಗತ್ಯ ಕ್ರಮವನ್ನು ಜರುಗಿಸಿ ಕಾಮಗಾರಿ ಪ್ರಾರಂಭಿಸಲು ಲೋಕಸಭಾ ಸದಸ್ಯರು ಹಾಜರಿದ್ದ ರೇಲ್ವೆ ಅಧಿಕರಿಗಳಿಗೆ ಸೂಚನೆ ನೀಡಿದರು.
ಅದರಂತೆ ಬೆಳಗಾವಿ ವಿಮಾಣ ನಿಲ್ದಾಣದ ಬೆಳವಣಿಗೆಗೆ ಸಂಬಂಧಿಸಿದಂತೆ ಅವಶ್ಯವೆನೆಸಿರುವ ಭೂಸ್ವಾಧೀನ ಕ್ರಮದ ಬಗ್ಗೆ ವಿಚಾರಿಸಲಾಗಿ, ಈ ಕುರಿತು ಸಹ ಮುಂದಿನ ಅಗತ್ಯ ಕ್ರಮವನ್ನು ಕೈಕೊಳ್ಳುವ ಬಗ್ಗೆ ಸಭೆಯಲ್ಲಿ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸವದತ್ತಿ ರೇಣುಕಾ ಯಲ್ಲಮ್ಮ ದೇವಿಯ ಕ್ಷೇತ್ರದ ಪ್ರವಾಸೋದ್ಯಮ ಬೆಳವಣಿಗೆಯ ಬಗ್ಗೆ ಕೇಂದ್ರ ಸರಕಾರದ ರೂ: 100 ಕೋಟಿ ಅನುದಾನ ಬೆಳಕೆಯ ಪ್ರಗತಿಯ ಬಗ್ಗೆ ಅವಲೋಕಿಸಲಾಗಿ, ಬರುವ ದಿನಗಳಲ್ಲಿ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಅವರರವರ ಕ್ಷೇತ್ರದ ಪ್ರಗತಿಯ ಬಗ್ಗೆ ನಿಗಾ ವಹಿಸಿ ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲು ಸಾರ್ವಜನಿಕ ಅನುಕೂಲತೆ ಕಲ್ಪಿಸುವ ಬಗ್ಗೆ ಯಾವತ್ತಿಗೂ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಲು ಸೂಚಿಸಿದರು.