ಚಿಕ್ಕಬಳ್ಳಾಪುರ :
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ಭಕ್ತರ ಭಕ್ತಿಯ ಪ್ರತಿರೂಪವಾಗಿದೆ. ಹೀಗಾಗಿ ಅದನ್ನು ಅಪೂರ್ಣ ಎನ್ನಲು ಸಾಧ್ಯವಿಲ್ಲ ಎಂದು ಈಶಾ ಯೋಗ ಕೇಂದ್ರದ ಸದ್ಗುರು ಜಗ್ಗಿ ವಾಸುದೇವ ಹೇಳಿದರು.

ಅವಲಗುರ್ಕಿ ಈಶಾ ಯೋಗ ಕೇಂದ್ರದಲ್ಲಿ ಮಾತನಾಡಿದ ಅವರು, ದೇವಾಲಯ ಎನ್ನುವುದು ಎಂದಿಗೂ ಅಪೂರ್ಣವಲ್ಲ. ದೇವಾಲಯದಲ್ಲಿ ನಿರಂತರವಾಗಿ ಅಭಿವೃದ್ಧಿ ಕೆಲಸವನ್ನು ಭಕ್ತರು ಮಾಡುತ್ತಿರುತ್ತಾರೆ. ರಾಮ ಮಂದಿರ ಮೂರು ಅಂತಸ್ತಿನಲ್ಲಿ ನಿರ್ಮಾಣವಾಗುತ್ತಿದೆ. ಸದ್ಯ ಮೊದಲ ಅಂತಸ್ತು ಪೂರ್ಣವಾಗಿದ್ದು ಉದ್ಘಾಟನೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಉಳಿದ ಅಂತಸ್ತುಗಳು ಪೂರ್ಣವಾದಾಗಲು ಕಾರ್ಯಕ್ರಮ ನಡೆಯಲಿವೆ ಎಂದರು.